ಗುರುವಾಯನಕೆರೆ: ಕಾರು, ಟೆಂಪೋ ರಿಕ್ಷಾಕ್ಕೆ ಲಾರಿ ಢಿಕ್ಕಿ

ಬೆಳ್ತಂಗಡಿ,ಜೂ.10: ಗುರುವಾಯನಕೆರೆ ಶಾಲೆ ಬಳಿ ಶುಕ್ರವಾರ ಲಾರಿಯೊಂದು ಕಾರು ಹಾಗೂ ಟೆಂಪೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ.
ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಟೆಂಪೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ರಿಕ್ಷಾದಲ್ಲಿದ್ದ ಪಡಂಗಡಿ ಗ್ರಾಮದ ಅಲ್ತಾಫ್ ಖಾನ್ ಹಾಗೂ ಸಾದಿಕ್ ಖಾನ್ ಎಂಬವರು ಗಾಯಗೊಂಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





