ಚುಟುಕು ಸುದ್ದಿಗಳು
ವೀಸಾ ವಂಚನೆ ಆರೋಪ
ಮಂಗಳೂರು, ಜೂ.10: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಣ ಸಂಗ್ರಹಿಸಿ ಮೋಸ ಮಾಡಿರುವ ಕುರಿತು ನಗರ ಪೂರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೊಂಡಂತಿಲ ನಿವಾಸಿ ಅವಿಲ್ ಅರುಣ್ ೆನಾರ್ಂಡಿಸ್ ದೂರು ನೀಡಿದವರು. ಉದ್ಯೋಗ ಸಂಸ್ಥೆಯ ನಿದೇರ್ಶಕರ ಸಹಿತ 6 ಮಂದಿಯ ವಿರುದ್ಧ ದೂರು ದಾಖಲಾಗಿದೆ. ೆರ್ನಾಂಡಿಸ್‌ರಿಂದ 7,22,500 ರೂ. ಪಡೆದುನಕಲಿ ದಾಖಲೆ ಸೃಷ್ಟಿಸಿ ಬಳಿಕ ಉದ್ಯೋಗ ಹಾಗೂ ಹಿಂದಿರುಗಿಸದೆ, ಹಣ ವಾಪಸ್ ಕೇಳಿದಾಗ ಜೀವಬೆದರಿಕೆ ಒಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವೇಣೂರು: ವ್ಯಕ್ತಿ ಆತ್ಮಹತ್ಯೆ
ವೇಣೂರು, ಜೂ.10 : ವ್ಯಕ್ತಿಯೋರ್ವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ಸಂಭವಿಸಿದೆ.
ಮೂಡುಕೋಣಾಜೆ ನಿವಾಸಿ ಕೃಷ್ಣಪ್ಪಸಾಲ್ಯಾನ್ (65) ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬದ ಮೂಲ ಮನೆ ಮರೋಡಿ ಗ್ರಾಮದ ಕಲ್ಪಟ್ಟಗೆ ಬಂದಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಇವರು ಇಲ್ಲಿಯ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು
ಕಾರ್ಕಳ, ಜೂ.10: ಜರಿಗುಡ್ಡೆಯ ನಜೀಮ್ ಎಂಬವರ ಮನೆಯ ಬಳಿ ಜೂ.2ರಂದು ನಿಲ್ಲಿಸಿದ್ದ ಕಾರ್ಕಳ ಪತ್ತೊಂಜಿಕಟ್ಟೆ ನಿವಾಸಿ ಸಲ್ಮಾನ್ ಖಾನ್ ಎಂಬವರಿಗೆ ಸೇರಿದ 4 ಲಕ್ಷ ರೂ. ವೌಲ್ಯದ ಜೆನೋನ್ ಪಿಕ್‌ಅಪ್ ವಾಹನವನ್ನು ಕಳವು ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳುಗಾರಿಕೆ ಲಾರಿ ವಶಕ್ಕೆ
ಪಡುಬಿದ್ರೆ, ಜೂ.10: ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಪಡುಬಿದ್ರೆ ಹಾಗೂ ಕಾಪುವಿನಲ್ಲಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಶುಕ್ರವಾರ ಲಾರಿ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಪಡುಬಿದ್ರೆಯ ಕಾರ್ಕಳ ರಸ್ತೆಯಲ್ಲಿ ಉಡುಪಿ ಕಡೆಗೆ ಅಕ್ರಮವಾಗಿ ಜಲ್ಲಿ ಹುಡಿ, ಮರಳುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಪಡುಬಿದ್ರೆಯಲ್ಲಿ ಎಂಟು ಟಿಪ್ಪರ್‌ಗಳನ್ನು ವಶಕ್ಕೆ ತೆಗೆದುಕೊಂಡರು. ಇದೇ ವೇಳೆ ಕಾಪುವಿನಲ್ಲೂ ಅನಧಿಕೃತವಾಗಿ ಮರಳು ಸಾಗಾಟ ಮಾಡುತಿದ್ದ ಒಂದು ಟಿಪ್ಪರ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಿರಿಯ ಭೂವಿಜ್ಞಾನಿ ಕೋದಂಡರಾಮ ಹಾಗೂ ಮಹೇಶ್ ದಾಳಿಯ ನೇತೃತ್ವ ವಹಿಸಿದ್ದರು.
ಮಟ್ಕಾ: ಓರ್ವನ ಬಂಧನ
ಕುಂದಾಪುರ, ಜೂ.10: ವಡೇರಹೋಬಳಿ ಗ್ರಾಮದ ಗಾಂಧಿ ಮೈದಾನದ ಎದುರಿನ ಅರ್ಚನಾ ಬಾರ್ ಬಳಿ ಜೂ.9ರಂದು ಸಂಜೆ ವೇಳೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರಾಮ ದೇವಾಡಿಗ ಎಂಬಾತನನ್ನು ಬಂಧಿಸಿರುವ ಕುಂದಾಪುರ ಪೊಲೀಸರು 1,050 ರೂ. ವಶಪಡಿಸಿಕೊಂಡಿದ್ದಾರೆ. ಈತ ಆಟದಿಂದ ಸಂಗ್ರಹವಾದ ಹಣವನ್ನು ಸುರೇಶ ಕೋಣಿ ಎಂಬ ಮಟ್ಕಾ ಬಿಡ್ಡರ್‌ಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







