6 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕ
ಪುತ್ತೂರು, ಜೂ.10: ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಅೀನದಲ್ಲಿರುವ ತಾಲೂಕಿನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕಡಬದ ಶ್ರೀಕಂಠ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ದುರ್ಗಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ತಲಾ 9 ಸದಸ್ಯರನ್ನು ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿ ಹಾಗೂ ಇಲಾಖೆಯ ಸಹಾಯಕ ಆಯುಕ್ತರು ಆದೇಶ ನೀಡಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸಭೆೆಯ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ ತಿಳಿಸಿದ್ದಾರೆ.
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕ, ವಾಸುದೇವ ನಾಯ್ಕ ಉಜ್ರುಪಾದೆ, ಪ್ರಮೀಳಾ ಚಂದ್ರಶೇಖರ ಗೌಡ, ಸುಮಲತಾ ಪ್ರವೀಣ್‌ಚಂದ್ರ ಆಳ್ವ, ಸೀತಾರಾಮ ಭಟ್ ಉಜ್ರುಪಾದೆ, ಚಿದಾನಂದ ರೈ ಬೈಲಾಡಿ, ಬಿ.ಕೆ. ಆನಂದ ಬಪ್ಪಳಿಗೆ ಮತ್ತು ಅಜಯ್ ಎಸ್. ಆಳ್ವ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕ, ದಿನೇಶ್ ಕಾಪುತಡ್ಕ, ಭವಾನಿ ಬಾಲಕೃಷ್ಣ ಪೂಜಾರಿ, ರೂಪಾ ಸಂಕಪ್ಪರೈ, ಜಯಂತ ಕೆ. ಕಂಗುಡೇಲು, ಎಸ್. ದಿವಾಕರ ರೈ ಸಣಂಗಳ, ಎಸ್. ಬಿ. ಜಯರಾಮ ರೈ, ಸಂತೋಷ್ ಕುಮಾರ್ ರೈ ಮತ್ತು ಕೆ.ವೆಂಕಟ್ರಮಣ ಗೌಡ ಆಯ್ಕೆಯಾಗಿದ್ದಾರೆ. ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕ, ಅಂಗಾರ ಅಮೈ, ರೇವತಿ ಈಶ್ವರ ಪೂಜಾರಿ, ಆಶಾಲತಾ ಪುರುಷೋತ್ತಮ ಕುಲಾಲ್, ಧರ್ಣಪ್ಪಗೌಡ ಬಾಂತೊಟ್ಟು, ತೇಜ್‌ಕುಮಾರ್ ರೈ, ನಾಗಪ್ಪಕೆ. ಗುರುಪ್ರಸಾದ್ ಕೆ.ಆರ್. ಮತ್ತು ರವಿ ಕೆದಿಲಾಯ ಬೆದ್ರುಮಾರು ನೇಮಕಗೊಂಡಿದ್ದಾರೆ.
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕ, ಯಶೋದಾ ನಾರಾಯಣ, ಶೈಲಜಾ ಉದಯ ಕುಮಾರ್, ಪಾರ್ವತಿ ಹರಿಶ್ಚಂದ್ರ, ಗೋಪಾಲಕೃಷ್ಣ ಭಟ್, ಮನೋಜ್ ಕುಮಾರ್, ಹಿರಿಯಣ್ಣ ಗೌಡ, ಕುಶಾಲಪ್ಪಗೌಡ ಮತ್ತು ನೀಲಪ್ಪಗೌಡ ನೇಮಕಗೊಂಡಿದ್ದಾರೆ. ಕಡಬ ಶ್ರೀಕಂಠ ಮಹಾಗಣಪತಿ ದೇವಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕರು, ಕೇಶವ ಅಂಜೋಡಿ, ಗೀತಾ ಬಾಲಕೃಷ್ಣ, ಸಾವಿತ್ರಿ ನಾಯ್ಕಿ ಬೆದ್ರಾಜೆ, ಗಂಗಾಧರ ಕಡಬ, ನಾರಾಯಣ ಗೌಡ, ಮೋಹನ್‌ದಾಸ್, ಕೃಷ್ಣಪ್ಪ ಕೆದಂಬಾಡಿ ಮತ್ತು ಮೋನಪ್ಪಗೌಡ ನಾಡೋಳಿ ನೇಮಕಗೊಂಡಿದ್ದಾರೆ. ಕಡಬ ಶ್ರೀ ದುರ್ಗಾಂಬಿಕಾ ದೇವ ಸ್ಥಾನಕ್ಕೆ ದೇವಳದ ಪ್ರಧಾನ ಅರ್ಚಕ, ಆನಂದ ಅಂಗಡಿಮನೆ, ಶಾಲಿನಿ ಸತೀಶ್ ನಾಯ್ಕ್ಕೆ, ನೀಲಾವತಿ ಶಿವರಾಮ ಗೌಡ, ಧರಣೇಂದ್ರ ಜೈನ್, ಜನಾರ್ದನ ಗೌಡ, ತಮ್ಮಣ್ಣ ನಾಯ್ಕ, ಮೋನಪ್ಪಕುಂಬಾರ ಮತ್ತು ಚಂದ್ರಶೇಖರ್‌ರನ್ನು ಆಯ್ಕೆ ಮಾಡ ಲಾಗಿದೆ ಎಂದು ಅವರು ತಿಳಿಸಿದ್ದಾರೆ.







