ಇಂದಿನ ಕಾರ್ಯಕ್ರಮ
ಸಮುದಾಯ ಭವನ ಉದ್ಘಾಟನೆ: ಅಂಬಲಪಾಡಿ ಬಿಲ್ಲವ ಸೇವಾ ಸಂಘ ಹಾಗೂ ಶ್ರೀವಿಠೋಭ ಭಜನಾ ಮಂದಿರಗಳ ವತಿಯಿಂದ ನಿರ್ಮಿಸಲಾದ ಶ್ರೀನಾರಾಯಣಗುರು ಸಮುದಾಯ ಭವನದ ಉದ್ಘಾಟನೆ. ಸಮಯ: ಸಂಜೆ 5:30ಕ್ಕೆ. ಸ್ಥಳ: ಶ್ರೀನಾರಾಯಣಗುರು ಸಮುದಾಯ ಭವನ, ಅಂಬಲಪಾಡಿ ಉಡುಪಿ.
ಕೃಷಿ ಮಾಹಿತಿ ಕಾರ್ಯಕ್ರಮ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಕುಕ್ಕಿಕಟ್ಟೆ, ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಸಹಯೋಗದಲ್ಲಿ ಸಮಗ್ರ ಕೃಷಿ ಪದ್ಧತಿ ಮತ್ತು ಸಹಕಾರಿ ಕೃಷಿ ಸಾಲದ ಬಗ್ಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ. ಸಮಯ: ಅಪರಾಹ್ನ 3ಕ್ಕೆ. ಸ್ಥಳ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯ ಬ್ಯಾಂಕಿನ ಅಲೆವೂರು ಶಾಖೆಯ ಸಮೃದ್ಧಿ ಸಭಾಭವನ, ಅಲೆವೂರು ಉಡುಪಿ.
ಚಿತ್ರಕಲಾ ಪ್ರದರ್ಶನ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾವಿದ ಎಸ್.ವಿ.ಹೂಗಾರ್‌ರ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ ‘ಒಳಾವರಣ ಅಭಿವ್ಯಕ್ತಿ’. ಸಮಯ: ಪೂರ್ವಾಹ್ನ 11ರಿಂದ ಸಂಜೆ 6ರವರೆಗೆ. ಸ್ಥಳ: ತ್ರಿವರ್ಣ ಆರ್ಟ್ ಗ್ಯಾಲರಿ, ಅನ್ನಪೂರ್ಣ ಬಿಲ್ಡಿಂಗ್ ಮಣಿಪಾಲ. ಪೇಜಾವರಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 10ರಿಂದ ಮಧ್ವಮಂಟಪದಲ್ಲಿ ಕೇರಳ ತ್ರಿಪುಣತ್ರ ತುಳು ಬ್ರಾಹ್ಮಣ ಯೋಗಂ ವನಿತಾ ವಿಭಾಗದಿಂದ ಭಜನೆ ಮತ್ತು ಲಕ್ಷ್ಮೀ ಶೋಭಾನೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಬೆಂಗಳೂರಿನ ವಿದ್ವಾನ್ ಜಿ.ಪಿ.ನಾಗರಾಜಾಚಾರ್ಯರಿಂದ ಧಾರ್ಮಿಕ ಪ್ರವಚನ. ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. 7ಕ್ಕೆ ಅಖಂಡ ಸಪ್ತೋತ್ಸವ, ಸುವರ್ಣ ರಥೋತ್ಸವ, ನವರತ್ನ ರಥೋತ್ಸವ.
ಸೌಲಭ್ಯ ವಿತರಣೆ: ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಳತ್ತೂರು ವತಿಯಿಂದ 4ನೆ ವರ್ಷದ ವಿದ್ಯಾರ್ಥಿ ವೇತನ, ಸಮವಸ್ತ್ರ ವಿತರಣೆ, ಕೃಷಿ ಕೂಲಿ ಕಾರ್ಮಿಕರ ಗುರುತಿಸುವಿಕೆ, ಅಂಗವಿಕಲರಿಗೆ ಧನಸಹಾಯ ಹಾಗೂ ಸನ್ಮಾನ. ಸಮಯ:ಅಪರಾಹ್ನ 2ರಿಂದ. ಸ್ಥಳ:ಕುಶಲ ಶೇಖರ ಶೆಟ್ಟಿ ಇಂಟರ್‌ನ್ಯಾಶನಲ್ ಅಡಿಟೋರಿಯಂ ಕಳತ್ತೂರು, ಕಾಪು.
ಇಂದು ‘ಚಿಲಿಪಿಲಿ’ ಚುಟುಕು ಪುಸ್ತಕ ಬಿಡುಗಡೆ
ಮಂಗಳೂರು, ಜೂ.10: ಕಾಸರಗೋಡು ಅಶೋಕ್ ಕುಮಾರ್ ಮಕ್ಕಳಿಗಾಗಿ ಬರೆದ ‘ಚಿಲಿಪಿಲಿ’ ಎಂಬ ಚುಟುಕು ಸಂಕಲನದ ಬಿಡುಗಡೆ ಕಾರ್ಯಕ್ರಮವು ಜೂ.11ರಂದು ಮಧ್ಯಾಹ್ನ 3:30ಕ್ಕೆ ನಗರದ ಡಾನ್ ಬಾಸ್ಕೊ ಮಿನಿ ಹಾಲ್‌ನಲ್ಲಿ ನಡೆಯಲಿದೆ.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಹಿತಿ ರಘು ಇಡ್ಕಿದು ಕೃತಿ ಬಿಡುಗಡೆ ಮಾಡುವರು. ಪ್ರೊ.ಕೃಷ್ಣಮೂರ್ತಿ ಕೃತಿ ಪರಿಚಯ ಮಾಡಲಿರುವರು. ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಮಾಲತಿ ಶೆಟ್ಟಿ ಮಾಣೂರು ವಹಿಸುವರು ಎಂದು ಪ್ರಕಟನೆ ತಿಳಿಸಿದೆ.







