ಓಶಿಯನ್ ಪರ್ಲ್‌ನಲ್ಲಿ ಡಿಸೈನರ್ ಟ್ರೇಡ್ ಫೇರ್ ‘ಗ್ಲಿಟ್ಜ್’ ಶುಭಾರಂಭ

ಮಂಗಳೂರು, ಜೂ. 10 : ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಅಮೋಘ ‘ಗ್ಲಿಟ್ಜ್’ ಡಿಸೈನರ್ ಟ್ರೇಡ್ ಫೇರ್‌ನ್ನು ಶುಕ್ರವಾರ ಕೆನರಾ ಚೇಂಬರಿನ ಮಾಜಿ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿಯ ಪತ್ನಿ ಶಕೀಲಾ ಶೆಟ್ಟಿ ಟೇಪ್ ಕತ್ತರಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ರಾಧಾ ಶರ್ಮ ಮತ್ತು ಗ್ಲಿಟ್ಜ್ ಡಿಸೈನರ್ ಟ್ರೇಡ್‌ಫೇರ್‌ನ ಸಂಘಟಕಿ ನೀತಾ ಜಿ. ಕಾಮತ್ ಉಪಸ್ಥಿತರಿದ್ದರು.
ಈ ಮಾರಾಟ ಪ್ರದರ್ಶನ ಮೇಳವು ಜೂ. 12ರವರೆಗೆ ನಡೆಯಲಿದ್ದು, ಭಾರತದಾದ್ಯಂತವಿರುವ ಡಿಸೈನರ್ ರೆಡಿಮೇಡ್ ವಸ್ತ್ರಗಳ ಮಳಿಗೆಗಳು ಭಾಗವಹಿಸಲಿದೆ. ಇದರಲ್ಲಿ ಚೆನ್ನೈನ ಸ್ತ್ರೀ ಕಲೆಕ್ಷನ್ಸ್, ಜೈಪುರದ ಅಗರ್‌ವಾಲ್ಸ್, ಗೋವಾದ ಕರಾಚಿ ಸೂಟ್ಸ್, ಪ್ರಾಚೀಸ್ ಬೆಡ್ ಲಿನೆನ್ಸ್, ನೇಹಾಸ್ ಡಿಸೈನರ್ ಸಲ್ವಾರ್ಸ್, ಕೊಯಂಬತ್ತೂರಿನ ಪ್ರಬಾಸ್ ಟಸ್ಸರ್ ಸಿಲ್ಕ್ಸ್, ಕೊಲ್ಕತ್ತಾದ ಕಲಮಕರಿ ಪಾದರಕ್ಷೆ, ಸ್ಕರ್ಟ್ಸ್, 18 ಕ್ಯಾರೆಟ್‌ನ ಚಿನ್ನದ ಆಭರಣಗಳಲ್ಲದೆ ಪೂರ್ಣಿಮಾ ಮಲ್ಯರ ಬ್ಲಾಕ್ ಪ್ರಿಂಟ್ ಸಾರೀಸ್, ಕ್ಷಮಾರವರ ಪಾಶ್ಚಾತ್ಯ ಉಡುಪುಗಳು ಹಾಗೂ ಅನೇಕ ಫ್ಯಾಶನ್‌ಗೆ ಸಂಬಂಧಿಸಿದ ಮಳಿಗೆಗಳಿವೆ. ಕಳೆದ ಆರು ವರ್ಷಗಳಿಂದ ಇಂತಹ ಅನೇಕ ಟ್ರೇಡ್‌ಫೇರ್‌ನ್ನು ಆಯೋಜಿಸುತ್ತಿರುವ ‘ಗ್ಲಿಟ್ಜ್’ ಫ್ಯಾಶನ್ ಡಿಸೈನರ್ ಟ್ರೇಡ್‌ಫೇರ್‌ನ ಸಂಘಟಕಿ ನೀತಾ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





