ಜೂನ್ ತಿಂಗಳೆಂದರೆ 31 ದಿವಸ: ಅಲಹಾಬಾದ್ ನಗರ ನಿಗಮ
ಅಲಹಾಬಾದ್, ಜೂನ್11: ಜಗತ್ತಿನಾದ್ಯಂತ ಜೂನ್ ತಿಂಗಳಲ್ಲಿ ಮೂವತ್ತು ದಿನಗಳಿವೆ. ಆದರೆ ಬಹುಶಃ ಅಲಹಾಬಾದ್ನಲ್ಲಿ ಮೂವತ್ತೊಂದು ದಿನಗಳು ಜೂನ್ನಲ್ಲಿರುತ್ತವೆ. ಹೀಗೊಂದು ವ್ಯತ್ಯಾಸವನ್ನು ಅಲಹಾಬಾದ್ ನಗರ ನಿಗಮ ಮಾಡಿ ತೋರಿಸಿದೆ.
ನಗರನಿಗಮದ ಮನೆತೆರಿಗೆ ಪಾವತಿಸಲು ನೀಡಿದ ಜಾಹೀರಾತು ಇದು. ಇದರಲ್ಲಿ ಜೂನ್ ಮೂವತ್ತೊಂದು ಕೊನೆ ದಿನಾಂಕ ಎಂದು ಬರೆಯಲಾಗಿದೆ. ಜನರು ಆತ್ತಿತ್ತ ಅಡ್ಡಾಡುತ್ತಾ ನಗುವುದಕ್ಕೊಂದು ವಸ್ತು ಎನಿಸಿಕೊಂಡಿದೆ ಇದು. ಕೊನೆ ದಿನಾಂಕದೊಳಗೆ ಮನೆತೆರಿಗೆ ಪಾವತಿಸಿದರೆ ಶೇ. 10ರಷ್ಟು ರಿಯಾಯತಿ ಇದೆ ಎಂದು ಜಾಹೀರಾತು ಹೇಳುತ್ತಿದೆ. ನಗರದ ಮಹಾರಾಣಾ ಪ್ರತಾಪ್ ಚೌಕದಲ್ಲಿ ಜಾಹೀರಾತು ತೂಗಾಡುತ್ತಿದೆ. ನಗರ ನಿಗಮ ಈಗ ತನ್ನ ತಪ್ಪನ್ನೊಪ್ಪಿ ಕೂಡಲೇ ತಿದ್ದುಪಡಿಮಾಡುವ ಆಶ್ವಾಸನೆ ನೀಡಿದೆ.
Next Story