ಜಿಶಾ ಕೊಲೆ ಪ್ರಕರಣ: ಪೊಲೀಸರ ಬಳಿ ಮುಖ್ಯ ವೀಡಿಯೋ ಸಾಕ್ಷ್ಯ
ಪೆರುಂಬಾವೂರ್, ಜೂನ್ 11: ಜಿಶಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಕ್ಕಿರುವ ಸಿಸಿಟಿವಿಯ ದೃಶ್ಯಗಳು ತನಿಖೆಯ ದಾರಿಯನ್ನು ಸ್ಪಷ್ಟವಾಗಿ ತೆರೆದು ಕೊಡಲಿವೆ. ಕುರುಪ್ಪಂಪಡಿ ವೆಟ್ಟೋಳಿಪ್ಪಡಿಯ ಇರುವಿಚ್ಚಿರ ದೇವಳದ ಸಮೀಪದ ಕಿಸಾನ್ ಕೇಂದ್ರ ಎಂಬ ಸಂಸ್ಥೆಯ ಸಿಸಿಟಿವಿಯಲ್ಲಿ ಜಿಶಾ ಕೊಲೆಯಾದ ದಿವಸದ ದೃಶ್ಯಗಳು ಪೊಲೀಸರಿಗೆ ಲಭಿಸಿದೆ.
ಆರು ಕ್ಯಾಮರಾಗಳು ಅಂಗಡಿಯಲ್ಲಿದ್ದವು ಇವುಗಳಲ್ಲ್ಲಿ ಎರಡನ್ನು ಹೊರ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಕ್ಯಾಮರಾ ಇರುವ ಸ್ಥಳ ಮತ್ತು ಬಸ್ಸ್ಟಾಪ್ಗೆ ಸುಮಾರು ಇಪ್ಪತ್ತು ಅಡಿಯಷ್ಟು ಮಾತ್ರ ದೂರದಲ್ಲಿವೆ. ಘಟನೆ ನಡೆದದಂದೇ ಈ ಸಂಸ್ಥೆಯ ಪೂರ್ವಭಾಗದಲ್ಲಿ ಇದ್ದ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದ್ದರು. ಅಂದು ಸ್ಥಳೀಯ ಪೊಲೀಸರು ಪರಿಶೀಲಿಸಿದ್ದರು. ಈಗ ದೃಶ್ಯಗಳು ಸಿಕ್ಕಿರುವ ಪಶ್ಚಿಮ ಭಾಗದ ಕ್ಯಾಮರಾವನ್ನು ಪೊಲೀಸರು ಅಂದು ಪರಿಶೀಲಿಸಿರಲಿಲ್ಲ. ಜಿಶಾರ ಮನೆಗೆ ಹೋಗುವ ದಾರಿಯಲ್ಲಿರುವ ಬ್ಯೂಟಿ ಪಾರ್ಲರ್ನಲ್ಲಿಯೂ ಸಿಸಿಕ್ಯಾಮರಾ ಇವೆ. ಇದನ್ನು ಅಂದು ಪರಿಶೀಲಿಸಲಾಗಿತ್ತು. ವಟ್ಟೋಳಿಪ್ಪಡಿ ಜಂಕ್ಷನ್ನ ಓರ್ವ ಆಟೊ ಡ್ರೈವರ್ , ಜಿಶಾ ಹಾಗೂ ಇನ್ನೊಬ್ಬ ಯುವಕ ಘಟನೆ ದಿವಸ ಮಧ್ಯಾಹ್ನ ಹನ್ನೊಂದು ಗಂಟೆಗೆ ಮನೆಯಿಂದ ಹೊರಗೆ ಹೋಗುವುದನ್ನು ನೋಡಿದ್ದೇನೆ ಎಂದು ಕುಂಞಮೋನು ಎಂಬವರು ಪೊಲೀಸರಿಗೆ ಸಾಕ್ಷಿ ಹೇಳಿದ್ದರು. ಹೊಸ ತನಿಖೆ ತಂಡ ಬುಧವಾರ ಸಿಸಿಟಿವಿ ದೃಶ್ಯಗಳನ್ನು ಹೆಚ್ಚು ಆಳವಾಗಿ ಪರಿಶೀಲನೆ ನಡೆಸಿದೆ. ಮೊದಲೇ ದೃಶ್ಯಗಳಿರುವ ಸಿಸಿಟಿವಿ ಹಾರ್ಡ್ ಡಿಸ್ಕನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಹೊರರಾಜ್ಯದವರಿಂದ ಜಿಶಾ ಕೊಲೆನಡೆದಿಲ್ಲ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಯಾಕೆಂದರೆ ಹೊರರಾಜ್ಯದವರ ಜೊತೆಯಲ್ಲಿ ಜಿಶಾ ಪ್ರಯಾಣಿಸುವ ಸಾಧ್ಯತೆಯಿಲ್ಲ. ಜಿಶಾರಿಗೆ ಹೆಚ್ಚು ಹತ್ತಿರದ ವ್ಯಕ್ತಿಯೇ ಜಿಶಾರನ್ನು ಕೊಂದಿರಬೇಕೆಂದು ಪೊಲೀಸರು ಈಗ ಶಂಕಿಸಿದ್ದಾರೆ. ದೃಶ್ಯ ಸಿಕ್ಕಿರುವ ಹಾರ್ಡ್ ಡಿಸ್ಕನ್ನು ತಜ್ಞರ ಮೂಲಕ ಪರಿಶೀಲನೆ ನಡೆಸಿದ ನಂತರ ಪೊಲೀಸರು ಈ ನಿಟ್ಟಿನಲ್ಲಿ ಮುಂದುವರಿಯಲಿದ್ದಾರೆ. ಪ್ರಕರಣದ ತನಿಖೆಗೆ ನೇತೃತ್ವವನ್ನು ನೀಡುತ್ತಿರುವ ಡಿಜಿಪಿ ಮತ್ತು ಎಡಿಜಿಪಿ ಸಿಸಿಟಿವಿ ದೃಶ್ಯಗಳು ಲಭಿಸಿದ ಮಾಹಿತಿ ಸೋರಿಕೆಯಾಗಿದ್ದಕ್ಕಾಗಿ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.