ಇನ್ನು ವಾಟ್ಸ್‌ಆ್ಯಪ್ ಬಳಕೆ ಇನ್ನಷ್ಟು ಸುಲಭ:ಹಳೆಯ ಮೆಸೇಜ್‌ಗಳನ್ನು ಉಲ್ಲೇಖಿಸುವ ಫೀಚರ್ ಬಂತು !

ನ್ಯೂಯಾರ್ಕ್, ಜೂ.11: ವಾಟ್ಸ್‌ಆ್ಯಪ್ ತನ್ನ ಆಂಡ್ರಾಯ್ಡಾ ಬೀಟಾ ಟೆಸ್ಟರ್ ಗಳಿಗೆ ಹೊಸ ಫೀಚರ್ ಒಂದನ್ನು ಪ್ರಸ್ತುತ ಪಡಿಸಿದ್ದು, ಈ ಫೀಚರ್ ಅನ್ವಯ ಬಳಕೆದಾರರು ಒಂದು ನಿರ್ದಿಷ್ಟ ಸಂದೇಶವನ್ನು ಸೂಚಿಸಿ ಅದಕ್ಕೆ ಉತ್ತರ ಕಳುಹಿಸಬಹುದಾಗಿದೆ. ಈ ಅಪ್‌ಡೇಟ್ ವಾಟ್ಸ್‌ಆ್ಯಪ್‌ನ ಆಂಡ್ರಾಯ್ಡ್ ಬೀಟಾ ಬಿಲ್ಡ್ (2.16.118) ಆವೃತ್ತಿಯಲ್ಲಿ ಕಾಣಬಹುದಾಗಿದೆ.
ಈ ಅಪ್‌ಡೇಟ್ ವ್ಯಕ್ತಿಗಳ ನಡುವೆ ಹಾಗೂ ಗುಂಪುಗಳ ನಡುವಣ ಚ್ಯಾಟ್‌ನಲ್ಲಿ ಲಭ್ಯವಿದೆ ಹಾಗೂ ಅದನ್ನು ಉಪಯೋಗಿಸುವುದೂ ಸುಲಭವಾಗಿದೆ. ಬಳಕೆದಾರರು ಮೊದಲು ಒಂದು ನಿರ್ದಿಷ್ಟ ಸಂದೇಶ ಯಾ ಮೆಸೇಜ್ ಆಯ್ದುಕೊಳ್ಳಬೇಕು. ಇದು ಟೆಕ್ಸ್ಟ್ ಯಾ ಮಾಧ್ಯಮ ಸಂದೇಶವಾಗಿರಬಹುದು. ನಂತರ ಅವರು ಆ ಮೆಸೇಜನ್ನು ಬಹಳ ಹೊತ್ತು ಒತ್ತಿ ಹಿಡಿದಾಗಒಂದು ಪಾಪ್-ಅಪ್ ಸ್ಕ್ರೀನ್ ಬಂದು ಮೇಲೆ ರಿಪ್ಲೈ, ಫಾರ್ವರ್ಡ್‌ಹಾಗೂ ಡಿಲೀಟ್ ಆಯ್ಕೆಗಳು ಕಾಣುತ್ತವೆ. ಮುಂದೆ ರಿಪ್ಲೈ ಎಂದು ಬರೆದಿರುವಲ್ಲಿ ಒತ್ತಿದರೆ ಸಾಕು ವಾಟ್ಸ್‌ಆ್ಯಪ್ ಆ ಮೆಸೇಜ್ ಸಹಿತ ಒಂದು ಪ್ರಿವ್ಯೂ ಸ್ಕ್ರೀನ್ ತೋರಿಸುತ್ತದೆ. ಅಲ್ಲಿ ಉತ್ತರ ನೀಡಲು ಒಂದು ಸಣ್ಣ ಬಾಕ್ಸ್ ಕೂಡ ಇದೆ. ಬಳಕೆದಾರರು ಉತ್ತರ ಟೈಪ್ ಮಾಡಿ ಕಳುಹಿಸಿದರಷ್ಟೇ ಸಾಕು.
ಈ ಹೊಸ ವಾಟ್ಸ್‌ಆ್ಯಪ್ ಫೀಚರ್ ಅನ್ವಯ ಗುಂಪೊಂದರ ವಿವಿಧ ಸದಸ್ಯರು ಅದನ್ನು ಉಪಯೋಗಿಸಿದಾಗ ಅವರ ಹೆಸರನ್ನು ವಿವಿಧ ಕಲರ್ ಕೋಡಿನಲ್ಲಿ ವಾಟ್ಸ್ ಆ್ಯಪ್ ತೋರಿಸುತ್ತದೆ ಹಾಗೂ ಈ ಫೀಚರ್ ಗ್ರೂಪ್ ಚ್ಯಾಟ್‌ಗಳಿಗೆ ಅತ್ಯುತ್ತಮವಾಗಿದೆ.
ಪ್ರಸಕ್ತ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಈ ಅಪ್‌ಡೇಟ್ ಲಭ್ಯವಿದ್ದು, ಎಲ್ಲಾ ಬಳಕೆದಾರರಿಗೆ ಸದ್ಯದಲ್ಲಿಯೇ ಲಭ್ಯವಾಗುವ ಸಾಧ್ಯತೆಯಿದೆ.





