ಉಜಿರೆ: ಚಿನ್ನದಂಗಡಿಯಲ್ಲಿ ಕಳವಿಗೆ ಯತ್ನ

ಬೆಳ್ತಂಗಡಿ, ್ಜಖಿ.11: ಉಜಿರೆಯ ಪೇಟೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಇಲ್ಲಿನ ಪೇಟೆಯಲ್ಲಿರುವ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿರುವ ಧಮಸ್ ಚಿನ್ನದಂಗಡಿಗೆ ಶುಕ್ರವಾರ ರಾತ್ರಿ ಕಳ್ಳರ ತಂಡವೊಂದು ಅಂಗಡಿಯ ಶಟರ್ ಮುರಿದು ಹೊಳಹೊಕ್ಕಿದೆ. ಎದುರಿನ ಗಾಜುಗಳನ್ನು ಪುಡಿಗೈದಿದ್ದಾರೆ. ಅಂಗಡಿಗೆ ಅಳವಡಿಸಿದ್ದ ಸಿಸಿ ಕೆಮರಾಗಳನ್ನು ಹಾಳು ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅಂಗಡಿಯಿಂದ ಯಾವುದೇ ಚಿನ್ನಾಭರಣಗಳು ಕಳವು ಆಗಿಲ್ಲ ಎನ್ನಲಾಗಿದೆ.
ಪಕ್ಕದ ಬಿಲ್ಡಿಂಗ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಿತ್ರಗಳು ದಾಖಲಾಗಿವೆ. ಅಂಗಡಿಯ ಮಾಲಕ ಸೈಝಲ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿ ಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





