ಜೂ.12ರಿಂದ ಕೊಂಕಣಿ ಕಲಾ ಕುಲೋತ್ಸವ್ ನಾಟಕ ಪ್ರದರ್ಶನ
ಮಂಗಳೂರು,ಜೂ.11: ಮಾಂಡ್ ಸೊಬಾಣ್ ಆಶ್ರಯದಲ್ಲಿ ಕೊಂಕಣಿ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಹಮ್ಮಿಕೊಂಡ ಕೊಂಕಣಿ ಕಲಾ ಕುಲೋತ್ಸವ್ -2016ರ ನಾಟಕ ತರಬೇತಿ ಕಾರ್ಯಗಾರದ ಮೂಲಕ ಈ ಬಾರಿ ನಿರ್ಮಾಣಗೊಂಡ ನಾಲ್ಕು ನಾಟಕಗಳ ಪ್ರದರ್ಶನ ರವಿವಾರದಿಂದ ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ ಸಂಜೆ ನಡೆಯಲಿದೆ.
ಜೂನ್ 12ರಂದು ಸಂಜೆ 6:30ಕ್ಕೆ ಪ್ರಥಮ ನಾಟಕ ಪ್ರದರ್ಶನಗೊಳ್ಳಲಿದೆ. ಉಳಿದ ಮೂರು ನಾಟಕಗಳು ಜೂನ್ 19, 25 ಹಾಗೂ 26ರಂದು ಪ್ರದರ್ಶನ ಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜೂನ್ 12ರಂದು ಪ್ರಥಮ ನಾಟಕ ‘ಏಕ್ ವೇಶ್ಯೆಚಿ ಜಿಣ್ಯೆ ಕಥಾ’(ವೇಶ್ಯೆಯೊಬ್ಬಳ ಆತ್ಮಕಥನ’) ಪ್ರದರ್ಶನಗೊಳ್ಳಲಿದೆ. ಫ್ರೆಂಚ್ ಸಹಿತ ಜಗತ್ತಿನ ಏಳು ಭಾಷೆಗೆ ತರ್ಜುಮೆ ಗೊಂಡ ವೈಶ್ಯೆಯೊಬ್ಬಳ (ನಳಿನಿ ಜಮೀಳಾರ)ಜೀವನ ಕಥೆಯನ್ನಾಧರಿಸಿದ ಅರುಣ್ ರಾಜ್ ಲುದ್ರಿಗ್‌ರ ಕೊಂಕಣಿ ನಾಟಕವನ್ನು ನಿನಾಸಂನ ಕ್ರಿಶ್ಟಿ ನಿರ್ದೇಶಿಸಿದ್ದಾರೆ.
ಜೂನ್ 19ರಂದು ಪ್ರದರ್ಶನಗೊಳ್ಳಲಿರುವ ‘ಸುಣಿಂ ಮಜರ್ ಹಾಸ್ತಾ ’(ನಾಯಿ ಬೆಕ್ಕು ನಗುತ್ತದೆ)ಅಮರ್ ಛಾಪ್ರಾರ 30ವರ್ಷಗಳ ಹಿಂದಿನ ಕೊಂಕಣಿ ನಾಟಕವನ್ನು ನಿನಾಸಂನ ಕ್ರಿಸ್ಟೋಫರ್ ನಿರ್ದೇಶಿಸಿದ್ದಾರೆ.
ಜೂನ್ 25ರಂದು ನಿನಾಸಂನ ಸತೀಶ್ ಪಿ.ಬರೆದು ನಿರ್ದೇಶಿದ ನಾಟಕ ‘ಅಲೇಖ ’(ಹಣೆ ಬರಹ) ಅರುಣ್ ರಾಜ್ ಲುದ್ರಿಗ್‌ರ ಹಾಸ್ಯಲೇಪಿತ ಕೌಟುಂಬಿಕ ಸಮಸ್ಯೆ, ಜಾಗತೀಕರಣದ ಪ್ರಭಾವದ ಬಗೆಗಿನ ನಾಟಕ ‘ಸಂತಾನಮ್’ ಮಾಡ್ ಸೊಬಾಣ್ ರಂಗ ಕಾರ್ಯಗಾರದಲ್ಲಿ ತರಬೇತಿ ಪಡೆದ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ .ಕಲಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟನೆ ತಿಳಿಸಿದೆ.







