ಕೃಷಿಭೂಮಿ ಲೀಸ್‌ಗೆ ನಿರ್ಬಂಧ ಏಕೆ?

ಕೃಷಿ ಭೂಮಿ ಬಾಡಿಗೆ ನಿರ್ಬಂಧ ಹಾಗೂ ನಿಷೇಧವನ್ನು ದಶಕಗಳ ಹಿಂದೆಯೇ ಗ್ರಾಮೀಣ ಬಡವರು ಹಾಗೂ ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಜಾರಿಗೊಳಿಸಲಾಗಿದೆ. ಆದರೆ ಇದೀಗ ಈ ನಿಯಮಗಳು ಅವರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಏಕೆಂದರೆ, ಇದು ಅನಕೃತ ಭೂ ಬಾಡಿಗೆ ವ್ಯವಸ್ಥೆಗೆ ಕಾರಣವಾಗಿರುವುದು ಮಾತ್ರವಲ್ಲದೆ, ಇತರ ಹಲವು ಪ್ರತಿಕೂಲ ಪರಿಣಾಮಗಳಿಗೂ ಕಾರಣವಾಗಿದೆ. ಈ ಅನೌಪಚಾರಿಕ ಬಾಡಿಗೆ ಪದ್ಧತಿಯು, ಬಾಡಿಗೆದಾರರಿಗೆ ಬ್ಯಾಂಕ್ ಸಾಲ ಲಭ್ಯತೆಗೆ, ಬೆಳೆ ವಿಮೆ ಯೋಜನೆ, ಬರ ಪರಿಹಾರ ಹಾಗೂ ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲದಂತೆ ಮಾಡಿದೆ.
ದೇಶದ ಮೂರನೆ ಎರಡರಷ್ಟು ಭೂಭಾಗ ಬರದ ದವಡೆಯಲ್ಲಿ ಸಿಲುಕಿಕೊಂಡಿದೆ. ಹತಾಶ ರೈತರು, ಬಿರುಕು ಬಿಟ್ಟ ಭೂಮಿಯ ಚಿತ್ರಗಳು ಹಾಗೂ ಮಾಧ್ಯಮ ವರದಿಗಳು ಇದನ್ನು ಸ್ಪಷ್ಟವಾಗಿ ತೋರಿಸಿವೆ. ಹೆಚ್ಚುತ್ತಿರುವ ಅನಿಶ್ಚಿತ ಮಳೆ ಹಾಗೂ ಬೇಸಿಗೆ ಅವ ದೀರ್ಘವಾಗುತ್ತಿರುವುದು ಗ್ರಾಮೀಣ ಕೃಷಿ ಭೂಮಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಅದರಲ್ಲೂ ಮುಖ್ಯವಾಗಿ ಕೃಷಿಯನ್ನೇ ಜೀವನಾಧಾರವಾಗಿ ನಂಬಿರುವ ವ್ಯಕ್ತಿಗಳು ತೀರಾ ಸಂಕಷ್ಟಕ್ಕೆ ಈಡಾಗಿದ್ದಾರೆ. ಬರ ಮತ್ತು ಬೆಳೆ ನಷ್ಟದಂಥ ಕಾರಣಗಳಿಂದ ರೈತರು ಅದರಲ್ಲೂ ಮುಖ್ಯವಾಗಿ ಸಣ್ಣ ಹಾಗೂ ಅತಿಸಣ್ಣ ರೈತರು ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಮತ್ತೆ ಕೆಲವರು ಆತ್ಮಹತ್ಯೆಯಂತಹ ಕೃತ್ಯಕ್ಕೂ ಮುಂದಾಗುತ್ತಿದ್ದಾರೆ.
ಭೀಕರ ಬರ ಹಾಗೂ ಭಯಾನಕ ಗ್ರಾಮೀಣ ಆರ್ಥಿಕತೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವವರು ಗ್ರಾಮೀಣ ಪ್ರದೇಶದ ಕಡುಬಡವರು, ಭೂರಹಿತರು, ಸಣ್ಣ ಹಾಗೂ ಅತಿಸಣ್ಣ ರೈತರು. ಬಹುತೇಕ ಗ್ರಾಮೀಣ ಬಡವರು, ಕೃಷಿ ಭೂಮಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ಅಥವಾ, ಇತರರ ಕೃಷಿ ಭೂಮಿಯನ್ನು ಭೋಗ್ಯಕ್ಕೆ ಪಡೆದು ಅದರಲ್ಲಿ ದುಡಿದು ಜೀವನ ಕಂಡುಕೊಳ್ಳುತ್ತಾರೆ. ಸಾಮಾನ್ಯವಾಗಿ ಭೂಮಿಯನ್ನು ಬಾಡಿಗೆಗೆ ಪಡೆದು ಕೃಷಿ ಮಾಡುವುದು, ಭೂಮಿಯ ಒಡೆತನ ಹೊಂದಿ ಕೃಷಿ ಮಾಡುವಷ್ಟು ಒಳ್ಳೆಯ ಪದ್ಧತಿಯಲ್ಲ. ಆದಾಗ್ಯೂ ಈ ಕ್ರಮ ಹಳ್ಳಿಯ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವರದಾನವಾಗಿದೆ. ಇತ್ತೀಚೆಗಿನ ಅಧ್ಯಯನಗಳ ಪ್ರಕಾರ, ದೇಶದಲ್ಲಿ ಶೇ. 35ರಷ್ಟು ಭೂ ಹಿಡುವಳಿಗಳು ಸಣ್ಣ ಹಾಗೂ ಅತಿಸಣ್ಣ ರೈತರು ಇಲ್ಲವೇ ಭೂರಹಿತರು ಬಾಡಿಗೆಗೆ ಪಡೆದು ಕೃಷಿ ಮಾಡುತ್ತಿರುವ ಹಿಡುವಳಿಗಳು.
ದೇಶದಲ್ಲಿ ಸುಮಾರು 2.5 ಕೋಟಿ ಗ್ರಾಮೀಣ ಕುಟುಂಬಗಳು, ಭೂಬಾಡಿಗೆ ನಿಯಮದಡಿ ಕೃಷಿ ಮಾಡುತ್ತಿದ್ದರೂ, ಈ ವಿಧಾನ ಕಾನೂನು ಪ್ರಕಾರ ಭಾರತದಲ್ಲಿ ನಿಷಿದ್ಧ. ಇದಕ್ಕೆ ಹೊಂದಿಕೊಂಡಿರುವ ಇತರ ಸವಾಲಿನ ಅಂಶಗಳೆಂದರೆ, ಬಾಡಿಗೆಗೆ ಭೂಮಿ ಪಡೆದು ಕೃಷಿ ಮಾಡುವವರನ್ನು ತಾಂತ್ರಿಕವಾಗಿ ರೈತರು ಎಂದು ಘೋಷಿಸಲಾಗುವುದಿಲ್ಲ. ಈ ಕಾರಣದಿಂದ ಸಹಜವಾಗಿಯೇ ಇವರು, ಸರಕಾರದ ವಿವಿಧ ಸೌಲಭ್ಯಗಳು, ಸಾಲ ಹಾಗೂ ಕೃಷಿ ಪರಿಕರಗಳ ಸಬ್ಸಿಡಿಗಳಿಂದ ವಂಚಿತರಾಗುತ್ತಾರೆ. ಇದರ ಜೊತೆಗೆ ಇವರು ಕೃಷಿ ಭೂಮಿಯ ಮಾಲಕರಲ್ಲದ್ದರಿಂದ ಇವರು ಬೆಳೆದ ಉತ್ಪನ್ನಗಳನ್ನು ನಿಯಂತ್ರಿತ ಕೃಷಿ ಮಾರುಕಟ್ಟೆಗಳಿಗೆ ಒಯ್ಯುವುದು ಕೂಡಾ ಕಷ್ಟದ ಕೆಲಸ.
ಸ್ವಾತಂತ್ರೋತ್ತರ ಭೂ ಸುಧಾರಣೆ
ಸ್ವಾತಂತ್ರ್ಯಾನಂತರ ಭಾರತದಲ್ಲಿ ಜಾರಿಗೆ ಬಂದ ಭೂಸುಧಾರಣಾ ಕ್ರಮಗಳ ಪ್ರಮುಖ ಅಂಶವೆಂದರೆ, ಕೃಷಿ ಭೂಮಿಯನ್ನು ಬಾಡಿಗೆಗೆ ನೀಡುವುದನ್ನು ನಿರ್ಬಂಸುವುದು. ಇದು ಜಮೀನ್ದಾರಿ ಪದ್ಧತಿಯ ಪ್ರತೀಕವಾಗಿದ್ದು, ಇದು ಸಣ್ಣ ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರನ್ನು ಶೋಷಿಸುವ ಅಸ ಎಂಬ ಕಾರಣಕ್ಕಾಗಿ ಇದನ್ನು ನಿರ್ಬಂಸಲಾಗಿದೆ. ಆದರೆ ಸಣ್ಣ ಹಾಗೂ ಅತಿಸಣ್ಣ ರೈತರು ಮತ್ತು ಭೂರಹಿತ ಕಾರ್ಮಿಕರು ಹೇಗೆ ಭೂಮಿಯ ಮಾಲಕತ್ವ ಪಡೆಯಬಹುದು ಅಥವಾ ಕೃಷಿ ಭೂಮಿಯನ್ನು ಹೇಗೆ ಪಡೆಯಬಹುದು ಎಂಬ ಅಂಶವನ್ನು ಇಲ್ಲಿ ಗಮನಿಸಿಲ್ಲ. ದುರದೃಷ್ಟವಶಾತ್ ‘ಭಾರತದಲ್ಲಿ ಉಳುವವನೇ ಭೂಮಿಯ ಒಡೆಯ’ ಎಂಬ ಆಕರ್ಷಕ ಘೋಷಣೆ ಮತ ಪಡೆಯಲು ಅಸವಾಗಿದೆಯೇ ವಿನಃ ರೈತರಿಗೆ ಪ್ರಯೋಜನವಾಗಿಲ್ಲ. ಭೂ ಹಿಡುವಳಿ ಮಿತಿಯ ಯಶಸ್ಸು ನಗಣ್ಯ ಅಥವಾ ಸೀಮಿತವಾಗಿದ್ದು, ಬಡವರಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡುವ ಭೂದಾನ ಯೋಜನೆ ಕೂಡಾ ನಿರೀಕ್ಷಿತ ಯಶಸ್ಸು ಸಾಸದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಭೂರಹಿತ ಕಾರ್ಮಿಕರಿಗೆ ಅವಕಾಶ ನಿರಾಕರಿಸಿದಂತಾಗಿದೆ.
ಈ ಕೃಷಿ ಭೂಮಿ ಬಾಡಿಗೆ ನಿರ್ಬಂಧ ಜಾರಿಗೆ ಬಂದು ಆರು ದಶಕಗಳು ಕಳೆದಿವೆ. ಆದರೆ ಇಂದು ಸಂಪೂರ್ಣವಾಗಿ ಬದಲಾಗಿರುವ ಆಧುನಿಕ ಭಾರತದ ಅಗತ್ಯತೆಗೆ ತಕ್ಕಂತೆ ಇದನ್ನು ಪರಿಷ್ಕರಿಸಿಲ್ಲ. ವಾಸ್ತವ ಎಂದರೆ ಕೃಷಿ ಭೂಮಿಯನ್ನು ಬಾಡಿಗೆಗೆ ನೀಡುವ ಪದ್ಧತಿ ಅವ್ಯಾಹತವಾಗಿ ಮುಂದುವರಿದಿದ್ದು, ದೇಶದ ಉದ್ದಗಲಕ್ಕೂ ಗ್ರಾಮೀಣ ಪ್ರದೇಶದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಕೃಷಿ ಭೂಮಿ ಬಾಡಿಗೆ ನೀಡುವ ಪದ್ಧತಿ ಸಾಮಾನ್ಯವಾಗಿ ಭೂರಹಿತ ಕುಟುಂಬಗಳ ಪಾಲಿಗೆ ವರದಾನ. ಜೊತೆಗೆ ಸಣ್ಣ ಹಾಗೂ ಅತಿಸಣ್ಣ ರೈತರಿಗೂ ಇದು ಲಾಭದಾಯಕ. ಏಕೆಂದರೆ ಇದೇ ಅವರ ಜೀವನಾಧಾರವಾದ ಕೃಷಿ ವೃತ್ತಿಯನ್ನು ವಿಸ್ತರಿಸಿಕೊಳ್ಳಲು ಇರುವ ಏಕೈಕ ಮಾರ್ಗೋಪಾಯ.
ಆದಾಗ್ಯೂ ಕೃಷಿ ಭೂಮಿ ಬಾಡಿಗೆ ನಿರ್ಬಂಧ ಹಾಗೂ ನಿಷೇಧವನ್ನು ದಶಕಗಳ ಹಿಂದೆಯೇ ಗ್ರಾಮೀಣ ಬಡವರು ಹಾಗೂ ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಜಾರಿಗೊಳಿಸಲಾಗಿದೆ. ಆದರೆ ಇದೀಗ ಈ ನಿಯಮಗಳು ಅವರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಏಕೆಂದರೆ, ಇದು ಅನಕೃತ ಭೂ ಬಾಡಿಗೆ ವ್ಯವಸ್ಥೆಗೆ ಕಾರಣವಾಗಿರುವುದು ಮಾತ್ರವಲ್ಲದೆ, ಇತರ ಹಲವು ಪ್ರತಿಕೂಲ ಪರಿಣಾಮಗಳಿಗೂ ಕಾರಣವಾಗಿದೆ. ಈ ಅನೌಪಚಾರಿಕ ಬಾಡಿಗೆ ಪದ್ಧತಿಯು, ಬಾಡಿಗೆದಾರರಿಗೆ ಬ್ಯಾಂಕ್ ಸಾಲ ಲಭ್ಯತೆಗೆ, ಬೆಳೆ ವಿಮೆ ಯೋಜನೆ, ಬರ ಪರಿಹಾರ ಹಾಗೂ ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲದಂತೆ ಮಾಡಿದೆ.
ಅನೌಪಚಾರಿಕ ಬಾಡಿಗೆ
ಸಾಮಾನ್ಯವಾಗಿ ಇಂದು ಕೃಷಿ ಭೂಮಿಯನ್ನು ಬಾಡಿಗೆಗೆ ನೀಡುವ ಭೂಮಾಲಕರು ಅನೌಪಚಾರಿಕ ಒಪ್ಪಂದ ಮಾಡಿಕೊಂಡಿರುತ್ತಾರೆ. ಏಕೆಂದರೆ, ಭೂಮಾಲಕರು ತಮ್ಮ ಭೂಮಿಯನ್ನು ಬಾಡಿಗೆಗೆ ನೀಡುವ ವೇಳೆ, ಬಾಡಿಗೆದಾರರು ಒಪ್ಪಂದಕ್ಕಿಂತ ಹೆಚ್ಚು ಅವ ಭೂಮಿಯನ್ನು ಬಳಸಿಕೊಂಡರೆ ಅಥವಾ ಖಾಯಂ ಆಗಿ ಆ ಭೂಮಿಯನ್ನು ಉಳಿಸಿಕೊಂಡರೆ ಎಂಬ ಆತಂಕ ಭೂಮಾಲಕರನ್ನು ಕಾಡುತ್ತದೆ. ಇದಕ್ಕೂ ಕಾರಣ ಇಲ್ಲದಿಲ್ಲ. 1960, 1970 ಹಾಗೂ 80ರ ದಶಕದಲ್ಲಿ ಭೂ ಸುಧಾರಣೆ ಪ್ರಕ್ರಿಯೆಯಿಂದಾಗಿ, ಸುಮಾರು 50 ಲಕ್ಷ ಉಳುಮೆ ಮಾಡುವ ರೈತರಿಗೆ ೂಮಿಯ ಮಾಲಕತ್ವವನ್ನು ನೀಡಲಾಗಿದೆ. ಉಳುವವವನೇ ಭೂಮಿಯ ಒಡೆಯ ಎಂಬ ದೃಷ್ಟಿಕೋನ. ಬಾಡಿಗೆಗೆ ಭೂಮಿ ಪಡೆದವರಿಗೆ ಸಿಗುವ ಲಾಭ ದಶಕಗಳ ಹಿಂದೆ ಇದ್ದುದಕ್ಕಿಂತ ಕಡಿಮೆ ಇದ್ದರೂ, ಭೂಮಾಲಕರ ಭೀತಿ ಹಾಗೆಯೇ ಉಳಿದುಕೊಂಡಿದೆ. ಕೃಷಿ ಭೂಮಿಯನ್ನು ಬಾಡಿಗೆಗೆ ನೀಡುವುದನ್ನು ನಿಷೇಸುವ ಕಾನೂನುಗಳು ಕೂಡಾ ಇವರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕಾರಣದಿಂದ ಬಹುತೇಕ ಭೂ ಮಾಲಕರು ತಮ್ಮ ಜಮೀನನ್ನು ಬರಡಾಗಿಯೇ ಬಿಡುತ್ತಾರೆ ಅಥವಾ ಸಾಕಷ್ಟು ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳದೆ ಖಾಲಿ ಉಳಿಸುತ್ತಾರೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಲಭ್ಯ ಇರುವ ಎಲ್ಲ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುವುದಿಲ್ಲ.
ಭೂಮಾಲಕರು ತಮ್ಮ ಕೃಷಿ ಭೂಮಿಯನ್ನು ಬಾಡಿಗೆಗೆ ನೀಡಿದರೂ, ಬಾಡಿಗೆದಾರರು ಮುಂದುವರಿಯಲು ಅವಕಾಶವಾಗದಂತೆ ಅಲ್ಪಾವಗೆ ಮಾತ್ರ ಬಾಡಿಗೆಗೆ ನೀಡುತ್ತಾರೆ. ಈ ಅಲ್ಪಾವ ಹಾಗೂ ಅನೌಪಚಾರಿಕ ಬಾಡಿಗೆ ಪದ್ಧತಿಯಿಂದಾಗಿ ಬಾಡಿಗೆ ಪಡೆದ ವ್ಯಕ್ತಿಗೆ ದೀರ್ಘಾವ ಉತ್ಪಾದಕತೆೆ ಹೆಚ್ಚಿಸುವ ಅಭಿವೃದ್ಧಿಯನ್ನು ಕೃಷಿ ಭೂಮಿಯಲ್ಲಿ ಕೈಗೊಳ್ಳಲು ಅವಕಾಶ ಇರುವುದಿಲ್ಲ. ಇದು ಉತ್ತೇಜನ ಚೌಕಟ್ಟಿಗೆ ಪ್ರತಿಕೂಲವಾಗಿದ್ದು, ಬಾಡಿಗೆ ಪಡೆದ ಜಮೀನಿಗೆ ಸಾಲ ಮತ್ತು ಇತರ ಸೇವೆಗಳನ್ನು ಪಡೆಯಲು ಸಾಧ್ಯವಾಗದೆ, ಕಡಿಮೆ ಕೃಷಿ ಉತ್ಪಾದಕತೆಗೆ ಇದು ಕಾರಣವಾಗುತ್ತದೆ. ಜೊತೆಗೆ ಭೂಮಿಯ ಲವತ್ತತೆ ಕಡಿಮೆಯಾಗಲೂ ಇದು ಪರೋಕ್ಷ ಕಾರಣವಾಗುತ್ತದೆ. ನೈಸರ್ಗಿಕ ವಿಕೋಪಗಳಾದ ಬರ ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಎದುರಾದಾಗ, ಇಂಥ ಭೂಬಾಡಿಗೆ ಪಡೆದ ರೈತರಿಗೆ ಆಗುವ ನಷ್ಟ ಅತ್ಯಕ. ಏಕೆಂದರೆ ಕಾನೂನು ಬದ್ಧವಾಗಿ ಇವರು ಕಂದಾಯ ಕಾಯ್ದೆ ಅಥವಾ ಪರಿಹಾರ ಸಂಹಿತೆ ಅನ್ವಯ ಭೂಮಿಯ ಮಾಲಕರು ಅಲ್ಲದಿರುವುದರಿಂದ ಇವರು ಪರಿಹಾರಕ್ಕೆ ಅನರ್ಹರಾಗುತ್ತಾರೆ.
ಹೊಸ ಆರಂಭ?
ಲ್ಯಾಂಡೆಸಾ ಸಂಸ್ಥೆಯಿಂದ ನಡೆಸಿದ ಒಂದು ಸಂಶೋಧನೆಯ ಪ್ರಕಾರ, ಕೃಷಿ ಭೂಮಿಯನ್ನು ಬಾಡಿಗೆಗೆ ನೀಡುವ ಕ್ರಮವನ್ನು ಕಾನೂನುಬದ್ಧಗೊಳಿಸುವುದರಿಂದ, ಗ್ರಾಮೀಣ ಪ್ರದೇಶಗಳ ಸಣ್ಣ ರೈತರಿಗೆ ಜೀವನಾಧಾರಕ್ಕೆ ಲಭ್ಯತೆ ದೊರಕಿ, ದೊಡ್ಡ ಪ್ರಮಾಣದ ಲಾಭಕ್ಕೆ ಕಾರಣವಾಗುತ್ತದೆ. ವಿವಿಧ ರಾಜ್ಯಗಳ ಉಳುಮೆ ಕಾನೂನುಗಳು, ಹಿಂದೆ ಕೆಲ ಧನಾತ್ಮಕ ಪರಿಣಾಮಗಳಿಗೆ ಕಾರಣವಾಗಿದ್ದರೂ, ಇದೀಗ ಅವು ಜನರಿಗೆ ಪ್ರಯೋಜನವಾಗುವ ಬದಲು ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಇವು ಕೃಷಿ ಉತ್ಪಾದಕತೆಯನ್ನು ಕಡಿಮೆ ಮಾಡುವ ಹಾಗೂ ಭೂಮಿ ಲವತ್ತತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತಿದೆ.
ಆದಾಗ್ಯೂ ಸಹಾಯ ಒಂದು ವಿಧದಲ್ಲಿ ಮಾತ್ರ ಆಗುತ್ತಿದೆ. ಈ ತಿಂಗಳ ಆರಂಭದಲ್ಲಿ ನೀತಿ ಆಯೋಗದ ತಜ್ಞರ ಸಮಿತಿಯೊಂದು ಕರಡು ಮಾದರಿ ಕಾಯ್ದೆಯನ್ನು ಬಿಡುಗಡೆ ಮಾಡಿದ್ದು, ಇದು ಕೃಷಿ ಭೂ ಮಾಲಕರಿಗೆ ಹಾಗೂ ಬಾಡಿಗೆದಾರರಿಗೆ ಹೆಚ್ಚು ಲಾಭದಾಯಕವಾಗಲಿದೆ. ಇದು ಕಾನೂನುಬದ್ಧ, ಸ್ವಯಂಪ್ರೇರಿತ, ಪರಸ್ಪರರಿಗೆ ಲಾಭವಾಗುವ ಒಪ್ಪಂದವಾಗಲಿದೆ. ಈ ಕರಡು ಮಾದರಿ ಕಾನೂನು, ಕೃಷಿಭೂಮಿಯನ್ನು ಬಾಡಿಗೆಗೆ ನೀಡುವುದನ್ನು ಕಾನೂನುಬದ್ಧಗೊಳಿಸುತ್ತದೆ. ಇದು ಹಾಲಿ ಇರುವ ಕೃಷಿ ಭೂಮಿ ಬಾಡಿಗೆಗೆ ನೀಡುವ ಮೇಲಿನ ನಿರ್ಬಂಧವನ್ನು ರದ್ದು ಮಾಡಲಿದೆ.
ಈ ಕರಡು ಮಾದರಿ ಕಾಯ್ದೆಯು ಹಾಲಿ ಇರುವ ಎಲ್ಲ 2.5 ಕೋಟಿ ಕೃಷಿ ಕಾರ್ಮಿಕ ಕುಟುಂಬಗಳಿಗೆ ಕೃಷಿಭೂಮಿಯನ್ನು ಅಕೃತವಾಗಿ ಬಾಡಿಗೆಗೆ ಪಡೆಯಲು ಅವಕಾಶ ಮಾಡಿಕೊಡಲಿದ್ದು, ಇದು ಬೆಳೆ ಹಂಚಿಕೆ, ಬ್ಯಾಂಕ್ ಸಾಲಕ್ಕೆ ಅರ್ಹತೆ, ಬೆಳೆ ವಿಮೆ ಹಾಗೂ ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಲು ಬಾಡಿಗೆದಾರರಿಗೆ ಅವಕಾಶ ಮಾಡಿಕೊಡಲಿದೆ. ಇದು ಭೂಮಾಲಕರಿಗೆ ಕೂಡಾ ವಿಶ್ವಾಸಾರ್ಹ ಹಾಗೂ ಕಾನೂನುಬದ್ಧ ಕ್ರಮವಾಗಿದ್ದು, ಬಾಡಿಗೆ ಕರಾರು ಅವ ಮುಗಿದ ಬಳಿಕ ತಮ್ಮ ಭೂಮಿ ವಾಪಾಸು ಸಿಗುತ್ತದೆ ಎಂಬ ಖಾತ್ರಿಯೂ ಇರುತ್ತದೆ. ಇದು ಖಂಡಿತವಾಗಿಯೂ ಭೂಮಾಲಕರಿಗೆ, ಬಾಡಿಗೆದಾರರಿಗೆ ಹಾಗೂ ಭೂಮಿಗೆ ಮತ್ತು ಕೃಷಿ ಉತ್ಪಾದಕತೆಗೂ ಪೂರಕ.
ಭೂಮಿಯ ವಿಚಾರ ರಾಜ್ಯ ವಿಷಯವಾಗಿರುವುದರಿಂದ, ಈ ಮಾದರಿ ಕೇಂದ್ರ ಕಾನೂನನ್ನು ಪರಿಚಯಿಸಿದಾಗ, ಇದಕ್ಕೆ ರಾಜ್ಯಗಳು ಹೇಗೆ ಸ್ಪಂದಿಸುತ್ತವೆ ಮತ್ತು ಇದನ್ನು ಅಳವಡಿಸಿಕೊಳ್ಳಲು ಎಷ್ಟು ರಾಜ್ಯಗಳು ಮುಂದೆ ಬರುತ್ತವೆ ಎನ್ನುವುದು ಕುತೂಹಲದ ವಿಚಾರ. ಕನಿಷ್ಠ ರಾಜ್ಯ ಸರಕಾರಗಳು ತಮ್ಮ ಪ್ರದೇಶದ ಬಡ ರೈತರ ಪರವಾದ ಕಾನೂನುಗಳನ್ನು ರೂಪಿಸುವುದು ಹಾಗೂ ಅನುಷ್ಠಾನಗೊಳಿಸುವುದು ಅಗತ್ಯ. ಹಲವಾರು ರಾಜ್ಯಗಳು ಈಗಾಗಲೇ ಈ ವಿಷಯದ ಬಗ್ಗೆ ಆಸಕ್ತಿ ವಹಿಸಿದ್ದು, ಈ ಪರಿಕಲ್ಪನೆಯನ್ನು ತಮ್ಮ ರಾಜ್ಯಗಳಿಗೆ ಒಯ್ಯಲು ತುದಿಗಾಲಲ್ಲಿ ನಿಂತಿವೆ.
ಇಂತಹ ಕೃಷಿ ಭೂಮಿ ಬಾಡಿಗೆ ಕುರಿತ ಕಾನೂನಿನ ಅನುಷ್ಠಾನ, ಗ್ರಾಮೀಣ ಭಾರತದಲ್ಲಿ ಈ ವರ್ಷದಂಥ ತೀರಾ ವೈಪರೀತ್ಯದ ಹವಾಮಾನ ಪರಿಸ್ಥಿತಿಯ ಸಂದರ್ಭದಲ್ಲಿ ಉಳುಮೆ ಮಾಡುವ ರೈತರಿಗೆ ಭದ್ರತೆ ಒದಗಿಸಲು, ಯೋಜನಾ ಬದ್ಧವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಭೂಮಿಯನ್ನು ಕಾನೂನುಬದ್ಧವಾಗಿ ಪಡೆಯಲು ಅವಕಾಶ ಮಾಡಿಕೊಡುತ್ತದೆ.
ಕೃಪೆ:scroll.in







