Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಟಿಇ3ಎನ್... ಸಸ್ಪೆನ್ಸ್‌ಗೆ ಭಾವುಕತೆಯ...

ಟಿಇ3ಎನ್... ಸಸ್ಪೆನ್ಸ್‌ಗೆ ಭಾವುಕತೆಯ ಸ್ಪರ್ಶ

ವಾರ್ತಾಭಾರತಿವಾರ್ತಾಭಾರತಿ11 Jun 2016 11:08 PM IST
share
ಟಿಇ3ಎನ್... ಸಸ್ಪೆನ್ಸ್‌ಗೆ ಭಾವುಕತೆಯ ಸ್ಪರ್ಶ

ಮೊಮ್ಮಗಳ ನಾಪತ್ತೆಯಿಂದ ಶೋಕತಪ್ತನಾದ ತಾತ, ಜಡ್ಡುಗಟ್ಟಿದ ಬೃಹನ್ನಗರ ಹಾಗೂ ಹುದ್ದೆ ತೊರೆದು ಪಾದ್ರಿಯಾದ ಪೊಲೀಸ್ ಅಧಿಕಾರಿ...ಇವರ ಮಧ್ಯೆ ನಿರ್ದೇಶಕ ರಿಭು ದಾಸ್‌ಗುಪ್ತಾ ಅವರ ‘ಟಿಇ3ಎನ್’ ಗಿರಕಿ ಹೊಡೆಯುತ್ತದೆ. ಅಪಹೃತಗೊಂಡು, ಬರ್ಬರವಾಗಿ ಕೊಲೆಯಾದ ತನ್ನ ಎಂಟು ವರ್ಷದ ಮೊಮ್ಮಗಳ ಅಪಹರಣಕಾರರಿಗಾಗಿ ಹುಡುಕಾಡುವ ವಯೋವೃದ್ಧನೊಬ್ಬನ ರೋಚಕ ಕತೆ ಇದಾಗಿದೆ. ಕೋಲ್ಕತಾ ಮಹಾನಗರದ ಹಿನ್ನೆಲೆಯಲ್ಲಿ ಚಿತ್ರವು ಅನಾವರಣಗೊಳ್ಳುತ್ತದೆ.
 
ಜಾನ್ ಬಿಸ್ವಾಸ್‌ನ ಮೊಮ್ಮಗಳು ಏಂಜೆಲಾ, 2007ರಲ್ಲಿ ಅಪಹರಿಸಲ್ಪಟ್ಟು ಕೊಲೆಯಾಗುತ್ತಾಳೆ. ಜೀವನದ ಮುಸ್ಸಂಜೆ ಯಲ್ಲಿರುವ ಜಾನ್‌ಬಿಶ್ವಾಸ್‌ಗೆ ಈ ಘಟನೆಯಿಂದ ಬರಸಿಡಿಲು ಬಡಿದಂತಾಗುತ್ತದೆ. ಅಪಹರಣಕಾರ ಯಾರು, ಕೊಲೆಯ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಸುಳಿವೇ ಇರುವುದಿಲ್ಲ. ಏಂಜೆಲಾಳ ಹತ್ಯೆ ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ಮಾರ್ಟಿನ್ (ನವಾಝುದ್ದೀನ್)ಗೂ ಈ ಘಟನೆ ಆಘಾತವುಂಟು ಮಾಡಿರುತ್ತದೆ, ಅಪರಾಧಿಯನ್ನು ಕಂಡುಹಿಡಿಯಲಾಗದ ಪಾಪಪ್ರಜ್ಞೆಯಿಂದ ಆತ ಪಾದ್ರಿಯಾಗುತ್ತಾನೆ. ಆದರೆ ಜಾನ್ ಬಿಶ್ವಾಸ್, ತನ್ನ ಪ್ರಯತ್ನವನ್ನು ಕೈಬಿಡಲು ಸಿದ್ಧನಿರುವುದಿಲ್ಲ. ತನಿಖೆಯಲ್ಲಿ ಏನಾದರೂ ಪ್ರಗತಿಯಾಗಿದೆಯೇ ಎಂಬುದನ್ನು ತಿಳಿಯಲು ಆತ ಪ್ರತಿದಿನವೂ ಪೊಲೀಸ್ ಠಾಣೆಯ ಮೆಟ್ಟಲೇರುತ್ತಿರುತ್ತಾನೆ. ಆದರೆ ಪ್ರತಿಯೊಬ್ಬರೂ ಈ ಪ್ರಕರಣದ ಬಗ್ಗೆ ಆಸಕ್ತಿ ಕಳೆದುಕೊಂಡಿರುವುದು ಜಾನ್ ಬಿಶ್ವಾಸ್‌ಗೆ ಮನವರಿಕೆ ಯಾಗುತ್ತದೆ. ಹೀಗೆ ಎಂಟು ವರ್ಷಗಳು ಸಾಗುತ್ತವೆ. 2015ರಲ್ಲಿ ಬಿಶ್ವಾಸ್, ಹಂತಕನ ಕುರಿತಾಗಿ ದೊರೆತ ಸುಳಿವಿನೊಂದಿಗೆ, ಜಾನ್‌ಮಾರ್ಟಿನ್‌ನ ಚರ್ಚ್ ಗೆ ಆಗಮಿಸುತ್ತಾನೆ. ಆದರೆ ಮಾರ್ಟಿನ್, ಹಳೆಯ ಗಾಯವನ್ನು ಕೆದಕುವ ಬದಲು ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಂತೆ ಜಾನ್‌ಬಿಶ್ವಾಸ್‌ಗೆ ಉಪದೇಶಿಸುತ್ತಾನೆ.
ಆದರೆ ಬಿಶ್ವಾಸ್ ಹಿಂದೆ ಸರಿಯುವುದಿಲ್ಲ. ಆತ ಖುದ್ದಾಗಿ ತನಿಖೆಗೆ ಮುಂದಾಗುತ್ತಾನೆ. ಈ ಮಧ್ಯೆ ಇನ್ನೋರ್ವ ಬಾಲಕಿಯೂ ಅಪಹೃತಗೊಳ್ಳುತ್ತಾಳೆ. ಈ ಘಟನೆ ಫಾದರ್ ದಾಸ್‌ನಲ್ಲಿ ಕುತೂಹಲ ಮೂಡಿಸುತ್ತದೆ. ಆತನ ಹಳೆಯ ಗೆಳತಿ, ಪೊಲೀಸ್ ಅಧಿಕಾರಿ ಸರಿತಾ ಸರ್ಕಾರ್ (ಬಾಲನ್), ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಇರುವ ಕಾರಣ ತನಿಖೆಗೆ ನೆರವಾಗುವಂತೆ ಮಾರ್ಟಿನ್‌ನನ್ನು ಕೋರುತ್ತಾಳೆ. ಹಂತಕನ ಭೇಟೆಯಾಡುವ ಬಿಶ್ವಾಸ್‌ನ ಪ್ರಯತ್ನಕ್ಕೆ ಇವರಿಬ್ಬರೂ ಸಾಥ್ ನೀಡುತ್ತಾರೆ. ಆನಂತರ ಹಲವು ಅನಿರೀಕ್ಷಿತ ತಿರುವುಗಳು ಒಂದೊಂದಾಗಿ ಬೆಳ್ಳಿತೆರೆಯಲ್ಲಿ ಅನಾವರಣಗೊಳ್ಳುತ್ತವೆ....
ಕೊರಿಯನ್ ಚಿತ್ರ ‘ಮೊಂಟೆಜ್’ ನ ಕಥೆಯನ್ನು ಆಧರಿಸಿದ ಟಿಇ3ಎನ್, ಪಕ್ಕಾ ಕಮರ್ಶಿಯಲ್ ಚಿತ್ರವಾದರೂ ಅತ್ಯಂತ ಕಲಾತ್ಮಕವಾಗಿ ಮೂಡಿಬಂದಿದೆ. ನೆಟಿವಿಟಿಗೆ ತಕ್ಕಂತೆ ನಿರ್ದೇಶಕ ರಿಬುದಾಸ್ ಗುಪ್ತಾ ಚಿತ್ರದುದ್ದಕ್ಕೂ ತನ್ನ ಬಿಗಿಹಿಡಿತವನ್ನು ಸಾಧಿಸಿದ್ದು, ಚಿತ್ರಕತೆ ಎಲ್ಲೂ ಹಳಿತಪ್ಪದಂತೆ ನೋಡಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಿಯ ಪತ್ತೆಯಾಗುವವರೆಗೂ, ಎಲ್ಲೂ ಸಸ್ಪೆನ್ಸ್ ಬಿಟ್ಟುಕೊಡದಂತೆ ಚಿತ್ರವನ್ನು ಕೊಂಡೊಯ್ಯುತ್ತಾರೆ. ಇಲ್ಲಿ ನೀವು ಹೈಸ್ಪೀಡ್ ಕಾರ್ ಚೇಸ್‌ಗಳನ್ನು ಕಾಣಲಾರಿರಿ ಅಥವಾ ಪಿಸ್ತೂಲ್ ಶೂಟ್‌ಔಟ್ ಸದ್ದನ್ನು ಕೇಳಲಾ ರಿರಿ. ಆದರೆ ಆ್ಯಕ್ಷನ್ ಪ್ರಿಯರನ್ನು ಸಹ ಸೀಟಿನಂಚಿನಲ್ಲಿ ಕೂರಿಸಿ, ಮುಂದೇನು ಎಂಬ ಕುತೂಹಲ ಮೂಡಿಸುವ ತಾಕತ್ತು ಈ ಚಿತ್ರಕ್ಕಿದೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಟಿಇ3ಎನ್ ಚಿತ್ರವನ್ನು ಸಂಪೂರ್ಣವಾಗಿ ಅಮಿತಾಭ್ ಅವರೇ ಆವರಿಸಿಕೊಳ್ಳುತ್ತಾರೆ. ಮೊಮ್ಮಗಳ ಹಂತಕನ ಪತ್ತೆಗಾಗಿ ಚಡಪಡಿ ಸುವ ಹತಾಶ ವೃದ್ಧನ ಪಾತ್ರದಲ್ಲಿ ಅತ್ಯಂತ ಪರಿಣಾಮಕಾರಿ ಅಭಿನಯ ನೀಡಿದ್ದಾರೆ. ಬಾಡಿದ ಮುಖ, ಬಾಗಿದ ದೇಹದೊಂದಿಗೆ ಕೋಲ್ಕತಾದ ಬೀದಿಯಲ್ಲಿ ನಡೆಯುವ ಜಾನ್‌ಬಿಶ್ವಾಸ್ ಪ್ರೇಕ್ಷಕರನ್ನು ಮೊದಲನೋಟದಲ್ಲೇ ಸೆರೆಹಿಡಿಯುತ್ತಾನೆ.
ಈ ಚಿತ್ರದಲ್ಲಿ ನೀವು ಕಾಣುವುದು ಭವ್ಯವಾದ ಗಗನಚುಂಬಿ ಕಟ್ಟಡಗಳನ್ನಲ್ಲ, ಬದಲಿಗೆ ಸುಣ್ಣಬಣ್ಣ ಕಳೆದುಕೊಂಡ ಹಳೆಯ, ಪೇಲವ ಕಟ್ಟಡಗಳ ಸಾಲುಗಳು. ಮಂದಬೆಳಕಿನ ಬೀದಿ ದೀಪಗಳು, ವಿಲಕ್ಷಣ ಹಾಗೂ ನೀರವತೆಯಿಂದ ಕೂಡಿದ ಓಣಿಗಳು ಇವೆಲ್ಲವೂ ಚಿತ್ರದ ಕಥೆಯಲ್ಲಿ ಜೀವಂತ ಪಾತ್ರಗಳಂತೆ ಭಾಸವಾಗು ತ್ತವೆ. ನವಾಝುದ್ದೀನ್ ಸಿದ್ದೀಕಿ ಕೂಡಾ ಹೃದಯಸ್ಪರ್ಶಿ ಯಾದ ಅಭಿನಯ ನೀಡಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ಸುಜಯ್‌ಘೋಷ್ ಅವರ ‘ಕಹಾನಿ’ ಚಿತ್ರದಲ್ಲಿ ಅದ್ಭುತವಾದ ಅಭಿನಯ ನೀಡಿದ್ದ ವಿದ್ಯಾಬಾಲನ್‌ಗೆ ಈ ಚಿತ್ರದಲ್ಲಿ ಹೆಚ್ಚಿನ ಅವಕಾಶ ಲಭಿಸಿಲ್ಲ.
 
 ಹಾಗೆಂದು ಈ ಚಿತ್ರದಲ್ಲಿ ಮೈನಸ್ ಪಾಯಿಂಟ್‌ಗಳೇ ಇಲ್ಲವೆಂದಿಲ್ಲ. ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರಬೇಕಿದ್ದ ಟಿಇ3ಎನ್ ಕೆಲವು ದೃಶ್ಯಗಳಲ್ಲಿ, ಸೆಂಟಿಮೆಂಟಲ್ ಚಿತ್ರವೆಂಬಂತೆ ಮಾರ್ಪಾಡುಗೊಳ್ಳುತ್ತದೆ. ಇನ್ನು ಈ ಚಿತ್ರದ ವಿಲಕ್ಷಣ ಟೈಟಲ್ ಬಗ್ಗೆ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ. ಈ ಚಿತ್ರದಲ್ಲಿ ಮೂರು ಪಾತ್ರಗಳಷ್ಟೇ ಪ್ರಮುಖವಾಗಿವೆ. ಹೀಗಾಗಿ ತೀನ್ ಎಂಬುದನ್ನು ಆಕರ್ಷಣೆಗಾಗಿ ‘ಟಿಇ3ಎನ್’ ಎಂದು ತಿರುಚಲಾಗಿದೆ. ಛಾಯಾಗ್ರಾಹಕ ತುಷಾರ್ ಕಾಂತಿ ರೇ, ಕೋಲ್ಕತಾ ಮಹಾನಗರವನ್ನು ವಿಭಿನ್ನವಾಗಿ ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ. ಮೂಲ ಚಿತ್ರವಾದ ಮೊಂಟೆಜ್ ನೋಡದವರಿಗೆ, ಟಿಇ3ಎನ್ ಒಂದು ಅತ್ಯದ್ಭುತವಾದ ಸಸ್ಪೆನ್ಸ್ ಚಿತ್ರವೇ ಸರಿ.
ಕಹಾನಿಯಂತಹ ಮಹಾನ್ ಚಿತ್ರವನ್ನು ನೀಡಿದ ಸುಜಯ್‌ಘೋಷ್, ಟಿಇ3ಎನ್‌ಗೆ ನಿರ್ಮಾಪಕರಾಗಿದ್ದಾರೆ.
ಆರಂಭದಿಂದ ಅಂತ್ಯದವರೆಗೂ ಸಸ್ಪೆನ್ಸ್ ಕಾಯ್ದು ಕೊಳ್ಳುವಲ್ಲಿ ಟಿಇ3ಎನ್ ಯಶಸ್ವಿಯಾಗಿದೆ. ಖಂಡಿತವಾ ಗಿಯೂ ಸಸ್ಪೆನ್ಸ್ ಚಿತ್ರಗಳ ಪ್ರೇಮಿಗಳಿಗೆ ಇದೊಂದು ರಸದೌತಣ. ಆದಾಗ್ಯೂ, ಕಥೆಯು ಸಾಗುವ ವೇಗವು, ಇನ್ನೂ ತುಸು ಹೆಚ್ಚಿರುತ್ತಿದ್ದರೆ ಟಿಇ3ಎನ್ ಇನ್ನಷ್ಟು ಎತ್ತರಕ್ಕೇರಬಹುದಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X