ಉಡುಪಿ: ಸುಮನಸಾದ ಅಧ್ಯಕ್ಷರಾಗಿ ಪ್ರಕಾಶ್ ಜಿ.ಕೊಡವೂರು

ಉಡುಪಿ, ಜೂ.11: ಕೊಡವೂರು ಸುಮನಸಾ ಸಾಂಸ್ಕೃತಿಕ ಸೇವಾ ಸಂಘ ಟನೆಯ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷ ಎಂ.ಎಸ್.ಭಟ್ ಅಧ್ಯಕ್ಷತೆ ಯಲ್ಲಿ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪ್ರಕಾಶ್ ಜಿ.ಕೊಡವೂರು ಆಯ್ಕೆಯಾದರು.
ಗೌರವಾಧ್ಯಕ್ಷ ಎಂ.ಎಸ್.ಭಟ್, ಸಂಚಾಲಕರು ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷ ಗಣೇಶ್ ರಾವ್, ಕಾರ್ಯದರ್ಶಿ ಅಕ್ಷತ್ ಅಮೀನ್, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿ ಆಕಾಶ್ ಹೆಬ್ಬಾರ್, ಕ್ರೀಡಾ ಕಾರ್ಯ ದರ್ಶಿ ವಿನಯ್ ಕಲ್ಮಾಡಿ ಹಾಗೂ ಕಾರ್ಯಕಾರಿ ಸದಸ್ಯರುಗಳಾಗಿ ಜಗದೀಶ್ ಚೆನ್ನಂಗಡಿ, ಸಂದೀಪ್ ಕುಮಾರ್, ಪ್ರವೀಣ್‌ಚಂದ್ರ ತೋನ್ಸೆ, ಯೋಗೀಶ್ ಕೊಳಲಗಿರಿ, ಪ್ರವೀಣ್ ಜಿ.ಕೊಡವೂರು, ದಯಾನಂದ ಕರ್ಕೇರ, ಪ್ರಜ್ಞಾಶ್ರೀ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಸುರೇಶ್ ಕರ್ಕಾಲು, ಮೇಟಿ ಮುದ್ದಿಯಪ್ಪ, ಜಯ ರಾಂ ನೀಲಾವರ, ರಾಜ್‌ಗೋಪಾಲ ಶೇಟ್, ಸಲಹೆಗಾರರಾಗಿ ಭಾಸ್ಕರ್ ಭಟ್ ಅಗ್ರಹಾರ, ಕೆ.ಬಾಬು, ದುಗ್ಗಪ್ಪ ಯು., ಅಚ್ಯುತ ಅಮೀನ್ ಕಲ್ಮಾಡಿ, ಜಯ ಕುಮಾರ್ ಬೆಳ್ಕಳೆ ಆಯ್ಕೆಯಾದರು. ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು ಉಪಸ್ಥಿತರಿದ್ದರು.
ಕೋಶಾಧಿಕಾರಿ ಚಂದ್ರಕಾಂತ್ ಕುಂದರ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಯೋಗೀಶ್ ಕೊಳಲಗಿರಿ ವರದಿ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಅಕ್ಷತ್ ಅಮೀನ್ ವಂದಿಸಿದರು.







