ಸ್ವಾಯತ್ತದತ್ತ ಸರಕಾರಿ ಕಲಾ, ವಿಜ್ಞ್ಞಾನ ವಿವಿ: ಪೋಷಕರಿಗೆ ಚಿಂತೆ

ಕಾರವಾರ, ಜೂ.11: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾಲೇಜಿಗೆ ಸ್ವಾಯತ್ತತೆ ವಿಶ್ವ ವಿದ್ಯಾಲಯ ಪಟ್ಟ ಲಭಿಸಿದ್ದು, ಇನ್ನು ಮುಂದೆ ವಿಜ್ಞಾನ ವಿಭಾಗದ ಅನೇಕ ಪಠ್ಯಕ್ರಮಗಳನ್ನು ಇಲ್ಲಿನ ಶಿಕ್ಷಕರೇ ಸಿದ್ಧಪಡಿಸಲಿದ್ದಾರೆ. ಕಾಲೇಜಿಗೆ ಹೊಸದಾಗಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಮುಂದೆ ಗುಣಮಟ್ಟದ ಶಿಕ್ಷಣ ಲಭಿಸಬಹುದೇ ಎನ್ನುವ ಪ್ರಶ್ನೆ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುತ್ತಿದೆ.
ಈ ಬಾರಿ ಸ್ವಾಯತ್ತತೆ ವಿವಿ ದರ್ಜೆಗೆ ಏರಿರುವ ರಾಜ್ಯದ 25 ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರವಾರ ಕಾಲೇಜು ಒಂದಾಗಿದೆ. ಸ್ವಾಯತ್ತ ವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗಾವಕಾಶವಿರುವ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಕಾಲೇಜಿಗೆ ಅನುಮತಿ ಲಭಿಸಿದೆ.
ಅದರಂತೆ ಬಿಎಸ್ಸಿಯಲ್ಲಿ ಫೋರೆನ್ಸಿಕ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಕಲಾ ವಿಭಾಗದಲ್ಲಿ ಪತ್ರಿಕೋಧ್ಯಮ ಪದವಿ, ವಿಜ್ಞಾನದಲ್ಲಿ ಪಿಯುಸಿ ಮುಗಿಸಿದವರಿಗೆ ಔಷ ಧೀಯ ಸಸ್ಯಗಳ ಅಭ್ಯಾಸ (1 ವರ್ಷದ ಡಿಪ್ಲೊಮ) ಮೊದಲಾದ ಹೊಸ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಕಾಲೇಜು ಸ್ವಾಯತ್ತತೆಯಾಗಿರುವುದರಿಂದ ಈ ಕೋರ್ಸ್‌ಗಳ ಪ್ರಾರಂಭಕ್ಕೆ ಅಗತ್ಯವಿರುವ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಈವರೆಗೆ ದಾಖಲಾಗಿಲ್ಲ. ಇದರಿಂದ ಆರಂಭದಲ್ಲೇ ಮುಚ್ಚುವ ಸ್ಥಿತಿ ಎದು ರಾಗಿದೆ ಎನ್ನ ಲಾಗಿದೆ.
ಪೂರ್ವ ಸಿದ್ಧತೆಯ ಕೊರತೆ: ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಿದಾಗ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಅಗತ್ಯವಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಪ್ರಾರಂಭಿಸಲಾಗಿರುವ ಹೊಸ ಕೋರ್ಸ್‌ಗಳ ಕುರಿತು ಮಾಹಿತಿಯೇ ಇಲ್ಲ. ಸರಕಾರ ಈ ಕುರಿತು ವ್ಯಾಪಕ ಪ್ರಚಾರ ನೀಡದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಹೊಸ ಕೋರ್ಸ್‌ಗಳಿಗೆ ಅಗತ್ಯವಿರುವ ಗುಣಮಟ್ಟದ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಫೋರೆನ್ಸಿಕ್ ಸೈನ್ಸ್, ಪತ್ರಿಕೋಧ್ಯಮ ಮೊದಲಾದ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಶಿಕ್ಷಕರ ನೇಮಕಾತಿಯೇ ಆಗದಿ ರುವುದ ನ್ನು ತಿಳಿದು ಪ್ರವೇಶ ಪಡೆಯಲು ಹಿಂದೇಟು ಹಾಕುವಂತಾಗಿದೆ. ಕಾಲೇಜು ಆಡಳಿತ ಮಂಡಳಿ ಸಾಕಷ್ಟು ಪೂರ್ವ ಸಿದ್ಧತೆ ಯೊಂದಿಗೆ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದರೆ ವಿದ್ಯಾರ್ಥಿ ಗಳು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದರು. ಪೂರ್ವ ಸಿದ್ಧತೆ ಇಲ್ಲದ ಕಾರಣ ಕಾಲೇಜು ಸ್ವಾಯತ್ತ ವಿವಿ ಸ್ಥಾನ ಪಡೆದಿದ್ದರೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ ಎಂಬುದು ಪ್ರ
್ಞಾವಂತರ ಅಭಿಪ್ರಾಯವಾಗಿದೆ. ಹೊಸ ಕೋರ್ಸ್‌ಗಳಲ್ಲದೇ ಈಗಾಗಲೇ ಇರುವ ಬಿಎಸ್ಸಿಯಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ತಯಾರಿಕೆ, ಔಷಧೀಯ ಸಸ್ಯಗಳ ಅಧ್ಯಯನ ಕುರಿತ ಪಾಠಗಳನ್ನು ಹೊಸದಾಗಿ ಸೇರಿಸಲಾಗಿದೆ. ಕಾರವಾರಕ್ಕೆ ಸಮೀಪದ ಬಿಣಗಾದಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ತಯಾರಿಕಾ ಘಟಕ ಹಾಗೂ ಅಂಕೋಲಾ ಸಮೀಪ ಔಷಧಿ ಸಸ್ಯಗಳ ವನ ಇರುವುದರಿಂದ ಈ ವಿಭಾಗದ ಅಧ್ಯಯನಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಅನುಕೂಲವಾಗಲಿದೆ ಎಂಬುದು ಕಾಲೇಜಿನ ಅಭಿಪ್ರಾಯ. ಆದರೆ ಸೂಕ್ತ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಅಧ್ಯಯನ ಮಾಡುವುದು ಕಷ್ಟಕರವಾಗಲಿದೆ. ಆನ್‌ಲೈನ್ ಪ್ರವೇಶ :
ನೋಂದಣಿಯಾದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಕೈಗೊಳ್ಳಲಾಗುತ್ತಿದೆ. ಬಿಎಸ್ಸಿ ಫೋರೆನ್ಸಿಕ್ ಸೈನ್ಸ್ - ಗರಿಷ್ಠ ಲಭ್ಯತೆ 30, ಕನಿಷ್ಠ ಅಗತ್ಯವಿರುವ ವಿದ್ಯಾರ್ಥಿಗಳು -15, ಈವರೆಗೆ ನೋಂದಣಿಯಾದ ವಿದ್ಯಾರ್ಥಿಗಳು 5, ಬಿಎಸ್ಸಿ ಎಲೆಕ್ಟ್ರಾನಿಕ್ಸ್ - ಗರಿಷ್ಠ ಲಭ್ಯತೆ 50 ಸೀಟುಗಳು, ಕನಿಷ್ಠ ಅಗತ್ಯ 30 ವಿದ್ಯಾರ್ಥಿಗಳು, ಈವರೆಗೆ ನೋಂದಣಿ ಯಾದವರು 5, ಬಿಎ ಪತ್ರಿಕೋಧ್ಯಮ- ಗರಿಷ್ಠ ವಿದ್ಯಾರ್ಥಿಗಳು 50, ಕನಿಷ್ಠ ಅಗತ್ಯ ವಿರುವ ವಿದ್ಯಾರ್ಥಿಗಳು 30, ಈವರೆಗೆ 4 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಕಂಟಕ
ಸರಕಾರಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ ಈ ಬಾರಿ ಸ್ವಾಯತ್ತತೆಯತ್ತ ಮುಖ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವುದು ಕಷ್ಟಸಾಧ್ಯವಾಗಿದೆ. ಅಲ್ಲದೆ ರ್ಯಾಂಕ್ ಪಡೆದ ವಿದ್ಯಾರ್ಥಿ ಕೇವಲ ಈ ಒಂದೇ ಕಾಲೇಜಿಗೆ ಸೀಮಿತವಾಗಿರಲಿದ್ದಾರೆ. ಹೆಚ್ಚಿನ ಪಠ್ಯಕ್ರಮದ ಬದಲಾವಣೆಯಾಗುವುದರಿಂದ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.







