ಲಾಲೂಗೆ 69 ವರ್ಷ
ಅವರಂತೆಯೇ ಭಿನ್ನ ಅವರ ಬರ್ತ್‌ಡೇ ಆಚರಣೆ!

ಹೊಸದಿಲ್ಲಿ, ಜೂ.11: ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ತಮ್ಮ 69ನೆ ಹುಟ್ಟುಹಬ್ಬವನ್ನು ಬಿಹಾರದ ಪಾಟ್ನಾದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಪತ್ನಿ, ಪುತ್ರಿ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಆಚರಿಸಿದರು.
ಲಾಲೂ ಕೇಕ್ ಕಟ್ ಮಾಡಿದರೆ ಅವರ ಪತ್ನಿ ರಾಬ್ರಿ ದೇವಿ ಪತಿಗೆ ಹೂಗುಚ್ಛವೊಂದನ್ನು ನೀಡಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಹಾಜರಿದ್ದು, ಲಾಲೂ ಅವರಿಗೆ ಶುಭ ಹಾರೈಸಿದರು.
ನವೆಂಬರ್ 2015ರ ಅಸೆಂಬ್ಲಿ ಚುನಾವಣೆಯ ಮೊದಲು ನಿತೀಶ್ ಕುಮಾರ್, ಲಾಲೂ ಯಾದವ್ ಹಾಗೂ ಕಾಂಗ್ರೆಸ್ ಜೊತೆಗೂಡಿ ಮಹಾಮೈತ್ರಿಕೂಟ ರಚಿಸಿ ಬಿಹಾರದಲ್ಲಿ ಬಿಜೆಪಿಯನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಪ್ರಥಮ ಬಾರಿ ಶಾಸಕರಾಗಿರುವ ಲಾಲೂ ಪುತ್ರ ತೇಜಸ್ವಿ ಈಗ ನಿತೀಶ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.
Next Story





