ಇಂದಿನ ಕಾರ್ಯಕ್ರಮ
ವಿಚಾರ ಸಂಕಿರಣ-ಕೃತಿ ಬಿಡುಗಡೆ: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಸಹಭಾಗಿ ಸಂಘಟನೆಗಳು ಉಡುಪಿ ಜಿಲ್ಲೆ ಇದರ ವತಿಯಿಂದ ಡಾ.ಹಯವದನ ಮೂಡುಸಗ್ರಿಯವರ ‘ಸೌಹಾರ್ದ ಸಂಕಲನ’ ಪುಸ್ತಕ ಬಿಡುಗಡೆ ಮತ್ತು ‘ಕರ್ನಾಟಕದ ಜನಜೀವನದ ಮೇಲೆ ಜಾಗತೀಕರಣದ ಪರಿಣಾಮಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ. ಸಮಯ: ಬೆಳಗ್ಗೆ 9:30ಕ್ಕೆ. ಸ್ಥಳ: ವಿಮಾ ನೌಕರರ ಸಂಘದ ಸಭಾಂಗಣ, ಅಜ್ಜರಕಾಡು ಉಡುಪಿ.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಹಾಗೂ ವಕೀಲರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ. ಸಮಯ: ಬೆಳಗ್ಗೆ 10:30ಕ್ಕೆ. ಸ್ಥಳ: ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನ, ಆದಿಉಡುಪಿ, ಉಡುಪಿ.
ಜಿಲ್ಲಾ ಎನ್‌ಪಿಎಸ್ ನೌಕರರ ಸಮಾವೇಶ: ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲಾ ಸರಕಾರಿ ಎನ್‌ಪಿಎಸ್ ನೌಕರರ ಸಮಾವೇಶ ಹಾಗೂ ಮೂರನೆ ರಾಜ್ಯ ಕಾರ್ಯಕಾರಿಣಿ ಸಭೆ. ಸಮಯ: ಬೆಳಗ್ಗೆ 9ರಿಂದ. ಸ್ಥಳ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
ನೃತ್ಯ, ಸಂಗೀತ, ನಾಟಕಗಳ ಉತ್ಸವ: ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ವತಿಯಿಂದ ಕೊಡವೂರು ನೃತ್ಯನಿಕೇತನದ ರಜತ ಮಹೋತ್ಸವ ಸಮಿತಿ ತನ್ನ ಸರಣಿ ನೃತ್ಯಮಾಲಿಕೆಯಲ್ಲಿ ಹತ್ತು ದಿನಗಳ ಕಾಲ ನಡೆಸುವ ನೃತ್ಯ, ಸಂಗೀತ, ನಾಟಕಗಳ ಉತ್ಸವದ ಉದ್ಘಾಟನೆ. ಮೊದಲ ದಿನ ವಿದುಷಿ ಮಾನಸಿ ಸುಧೀರ್‌ರಿಂದ ‘ಮಹಾನಾಯಕಿ ಹಿಡಿಂಬೆ’ ರೂಪಕ. ಸಮಯ: ಸಂಜೆ 7ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
ಚಿತ್ರಕಲಾ ಪ್ರದರ್ಶನ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾವಿದ ಎಸ್.ವಿ.ಹೂಗಾರ್‌ರ ವರ್ಣಚಿತ್ರ ಕಲಾಕೃತಿಗಳ ಪ್ರದರ್ಶನ ‘ಒಳಾವರಣ ಅಭಿವ್ಯಕ್ತಿ’. ಸಮಯ: ಪೂರ್ವಾಹ್ನ 11ರಿಂದ ಸಂಜೆ 6ರವರೆಗೆ. ಸ್ಥಳ: ತ್ರಿವರ್ಣ ಆರ್ಟ್ ಗ್ಯಾಲರಿ, ಅನ್ನಪೂರ್ಣ ಬಿಲ್ಡಿಂಗ್ ಮಣಿಪಾಲ.







