ರಮಝಾನ್ ಕಾರ್ಯಕ್ರಮ
ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್
ಬಂಟ್ವಾಳ, ಜೂ.11: ಇಲ್ಲಿನ ಕೆಳಗಿನಪೇಟೆಯ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ರಮಝಾನ್ ತಿಂಗಳ ಪ್ರತಿ ರವಿವಾರ ಲುಹರ್ ನಮಾಝ್‌ನ ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಮತ ಪ್ರವಚನ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜೂ.12ರಂದು ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಬುರ್‌ಹಾನಿ ಫೈಝಿ ದುಆ ಮೂಲಕ ನೆರವೇರಿಸಲಿದ್ದಾರೆ. ‘ನಮಾಝ್’ ಎಂಬ ವಿಷಯದಲ್ಲಿ ದ.ಕ. ಎಸ್‌ವೈಎಸ್ ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ಖಾದರ್ ದಾರಿಮಿ ಪ್ರವಚನ ನೀಡಲಿದ್ದು, ದ.ಕ. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್ ಅರ್ಹ ಫಲಾನುಭವಿಗಳಿಗೆ ರಮಝಾನ್ ಕಿಟ್ ವಿತರಿಸಲಿದ್ದಾರೆ. ಜೂ.19ರಂದು ‘ರಮಝಾನ್’ ಎಂಬ ವಿಷಯದಲ್ಲಿ ಪುತ್ತೂರು ಬಪ್ಪಳಿಗೆ ಮಸ್ಜಿದುನ್ನೂರ್ ಜುಮಾ ಮಸೀದಿಯ ಮುದರ್ರಿಸ್ ಹಾಜಿ ಸಿರಾಜುದ್ದೀನ್ ಫೈಝಿ ಪ್ರವಚನ ನೀಡಲಿದ್ದು, ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಕೋಶಾಧಿಕಾರಿ ಹಾಜಿ ಮುಹಮ್ಮದ್ ಸಾದಿಕ್ ಬಿ.ಎಚ್.ಬಿ. ಯತೀಂ ಮಕ್ಕಳಿಗೆ ರಮಝಾನ್ ಹಬ್ಬದ ಉಡುಪು ವಿತರಿಸಲಿದ್ದಾರೆ. ಜೂ. 26ರಂದು ‘ಝಕಾತ್’ ಎಂಬ ವಿಷಯದಲ್ಲಿ ಬಂಟ್ವಾಳ ಜುಮಾ ಮಸೀದಿಯ ಮುದರ್ರಿಸ್ ಅನ್ಸಾರ್ ಬುರ್‌ಹಾನಿ ಫೈಝಿ ಪ್ರವಚನಗೈಯಲಿದ್ದು, ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಚಾಲಕ ಹಾಜಿ ಬಿ. ಮುಹಮ್ಮದ್ ಎ.ಆರ್. ಬಡ ಕುಟುಂಬಸ್ಥರಿಗೆ ಸಂರಕ್ಷಣಾ ನಿಧಿ ವಿತರಿಸಲಿದ್ದಾರೆ. ಜು.3ರಂದು ‘ಪ್ರವಾದಿ (ಸ) ಸ್ನೇಹ’ ಎಂಬ ವಿಷಯದಲ್ಲಿ ಮುಹಮ್ಮದ್ ಇಕ್ಬಾಲ್ ಮಿಸ್ಬಾಹಿ ಕಡಬ ಪ್ರವಚನ ನೀಡಲಿದ್ದು, ಬಂಟ್ವಾಳ ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ಹಾಜಿ ಬಿ.ಎ.ಸುಲೈಮಾನ್ ಈದ್ ಕಿಟ್ ವಿತರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇತ್ತಿಫಾಖುಲ್ ಮುಸ್ಲಿಮೀನ್ ಸೇವಾ ಸಂಘ
ಬೆಳ್ತಂಗಡಿ, ಜೂ.11: ಇತ್ತಿಫಾಖುಲ್ ಮುಸ್ಲಿಮೀನ್ ಸೇವಾ ಸಂಘದ ಆಶ್ರಯದಲ್ಲಿ ರಮಝಾನ್ ಪ್ರಯುಕ್ತ ಪ್ರತಿ ರವಿವಾರ ಬೆಳಗ್ಗೆ 10ರಿಂದ 12 ರ ತನಕ ಇಸ್ಲಾಮಿಕ್ ಸ್ಟಡೀಕ್ಲಾಸ್ ನಡೆಯಲಿದೆ. ಜೂ.12ರಂದು ಉಸ್ಮಾನ್ ದಾರಿಮಿ ಫರಂಗಿಪೇಟೆ, ಜೂ.19ರಂದು ಅಬೂಬಕರ್ ಸಿದ್ದೀಕ್ ದಾರಿಮಿ ಮತ್ತು ಹಸೈನಾರ್ ಮದನಿ ಕಾವಳಕಟ್ಟೆ, ಜೂ.26ರಂದು ಅಶ್ಫಾಕ್ ಫೈಝಿ ಸಜಿಪ ಮತ್ತು ಜು.3ರಂದು ಹಾಫಿಳ್ ಯಅ್ಕೂಬ್ ಸಅದಿ ಅಲ್-ಅಫ್‌ಳಲಿ ನಾವೂರು ಕ್ರಮವಾಗಿ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಜೂ.25ರಂದು ಮಹಿಳೆಯರಿಂದ ಮಹಿಳೆಯರಿಗೆ ವಿಶೇಷ ಉಪನ್ಯಾಸ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.







