ಸುರಿಬೈಲು: 4.5 ಕ್ವಿಂಟಾಲ್ ಅಡಿಕೆ ಕಳವು
ಬಂಟ್ವಾಳ, ಜೂ. 11: ತಾಲೂಕಿನ ಕೊಳ್ನಾಡು ಗ್ರಾಮದ ಸುರಿಬೈಲು ಜುಮಾ ಮಸೀದಿಯ ಆವರಣದಲ್ಲಿ ದಾಸ್ತಾನಿರಿಸಿದ್ದ ಸುಮಾರು 48 ಸಾವಿರ ರೂ. ವೌಲ್ಯದ ಅಡಿಕೆಗಳನ್ನು ಕಳ್ಳರು ಕಳವುಗೈದು ಪರಾರಿಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೀದಿಯ ಆವರಣದಲ್ಲಿ ದಾಸ್ತಾನಿರಿಸಿದ್ದ ಅಂದಾಜು ನಾಲ್ಕೂವರೆ ಕ್ವಿಂಟಾಲ್ ಸುಲಿಯದ ಅಡಿಕೆಯನ್ನು ಸೋಮವಾರ ರಾತ್ರಿ ಕಳವುಗೈದಿದ್ದಾರೆ ಎಂದು ಮಸೀದಿಯ ಕಾರ್ಯದರ್ಶಿ ಎ.ಕೆ.ಆರೀಫ್ ವಿಟ್ಲ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story





