ಶಿಕ್ಷಣ ಓದಿಗಷ್ಟೇ ಸೀಮಿತವಾಗದಿರಲಿ: ಡಾ.ಸುಕುಮಾರ ಗೌಡ
ಶೈಕ್ಷಣಿಕ ಸಮ್ಮೇಳನ

ಮಂಗಳೂರು, ಜೂ.11: ಶಿಕ್ಷಣ ಕೇವಲ ಓದಿಗಷ್ಟೇಸೀಮಿತವಾಗದೆ ಅದು ಪಾಂಡಿತ್ಯವಾಗಿ ಪರಿವರ್ತನೆಯಾಗ ಬೇಕು ಎಂದು ಶಿಕ್ಷಣ ತಜ್ಞ, ಪುತ್ತೂರಿನ ಶಿಕ್ಷಣ ಅಧ್ಯಯನ ಕೇಂದ್ರ ಮಕ್ಕಳ ಮಂಟಪದ ಡಾ.ಸುಕುಮಾರ್ ಗೌಡ ಅಭಿಪ್ರಾಯಿಸಿದ್ದಾರೆ. ನಗರದ ಮಿಲಾಗ್ರಿಸ್ ಪಪೂ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ನಗರ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಉತ್ತಮ ಕೌಶಲ್ಯವನ್ನು ಅಳವಡಿಸಿಕೊಳ್ಳ ಬೇಕು. ಕಲಿತ ವಿದ್ಯೆಯೊಂದಿಗೆ ವಿವೇಕವಿದ್ದರೆ ಅದು ದೇಶದಪ್ರಗತಿಗೂ ಪೂರಕವಾಗುತ್ತದೆ. ಮಕ್ಕಳನ್ನು ಕೇವಲ ಅಂಕ ಗಳಿಸುವುದ ಕ್ಕಷ್ಟೇ ಪ್ರೇರೇಪಿಸಬಾರದು. ಅಂಕ ಗಳಿಕೆಯನ್ನೇ ಮುಖ್ಯವಾಗಿಟ್ಟುಕ್ಕೊಂಡು ಶಿಕ್ಷಣದ ಮುಖ್ಯ ಉದ್ದೇಶಕ್ಕೆ ಧಕ್ಕೆಯುಂಟಾಗ ಬಾರದು ಎಂದು ಅವರು ಸಲಹೆ ನೀಡಿದರು. ಈ ಸಂದರ್ಭ ಎಸೆಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಶೇ.100 ಲಿತಾಂಶ ಪಡೆದ ಪಪೂ ಕಾಲೇಜುಗಳ ಮುಖ್ಯಸ್ಥರನ್ನು ಹಾಗೂ ನಿವೃತ್ತ ಮುಖ್ಯಸ್ಥರನ್ನು ಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಸ್ಟ್ಯಾನಿ ್ರಾನ್ಸಿಸ್ ಬಾರೆಟ್ಟೊ ಸ್ಕಾಲರ್‌ಶಿಪ್ ವಿತರಿಸಲಾಯಿತು.
ಡಿಡಿಪಿಐ ವಾಲ್ಡರ್ ಡಿಮೆಲ್ಲೊ, ಮಿಲಾಗ್ರಿಸ್ ಪಪೂ ಕಾಲೇಜಿನ ಪ್ರಾಂಶುಪಾಲ ಾ.ಮೈಕೆಲ್ ಸಾಂತುಮಾಯೊರ್, ಬೆಥನಿ ಮಂಗಳೂರು ಪ್ರಾಂತದ ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ, ಪಾದುವ ಪ್ರೌಢಶಾಲೆಯ ಪದವೀಧರ ಸಹಾಯಕ ಸ್ಟ್ಯಾನಿ ್ರಾನ್ಸಿಸ್ ಬಾರೆಟ್ಟೊ ಉಪಸ್ಥಿತರಿದ್ದರು.
ಬದ್ರಿಯಾ ಪಪೂ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ ಸ್ವಾಗತಿಸಿದರು.





