ನಿಧನ,
ಅಶ್ರಫ್ ಹಾಜಿ
ಮಂಗಳೂರು, ಜೂ. 11: ಉದ್ಯಮಿ ಅಶ್ರಫ್ ಹಾಜಿ ಮಂಗಳೂರು (58) ಇಂದು ಮುಂಜಾನೆ ಕೇರಳದ ಕೊಚ್ಚಿನ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತೊಕ್ಕೊಟ್ಟು ಸಮೀಪದ ಕುತ್ತಾರ್‌ನಲ್ಲಿರುವ ಎಚ್.ಎಚ್ ಫೂಯೆಲ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಮಂಗಳೂರಿನ ನಿವಾಸಿಯಾದ ಅಶ್ರಫ್ ಹಾಜಿ ಇತ್ತೀಚೆಗೆ ವಿದೇಶಕ್ಕೆ ತೆರಳಿ ಅಲ್ಲಿಂದ ಕೊಚ್ಚಿನ್‌ನ ತನ್ನ ಸಂಬಂಧಿಕರ ಮನೆಯಲ್ಲಿದ್ದರು. ಈ ಸಂದರ್ಭ ಅವರಿಗೆ ಹೃದಯಾಘಾತವಾಗಿತ್ತು. ಮೃತರು ಪತ್ನಿ ನಾಲ್ವರು ಗಂಡು ಹಾಗೂ ಒಬ್ಬ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ರೋಸಿ ಮೊಂತೇರೊ
ಮಂಗಳೂರು, ಜೂ.11: ನಗರದ ಪಾಲ್ದನೆ ನಿವಾಸಿ ರೋಸಿ ಮೊಂತೇರೊ (78) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಧರ್ಮಭಗಿನಿ ಆನಿಶ್ ಸಹಿತ 3 ಹೆಣ್ಣು ಮತ್ತು 2 ಗಂಡು ಮಕ್ಕಳನ್ನು ಅಗಲಿದ್ದಾರೆ
ಬಿ.ಕೆ. ಕೃಷ್ಣಪ್ಪಸಾಲಿಯಾನ್
ಮೂಡುಬಿದಿರೆ, ಜೂ. 11: ಮರೋಡಿ ಕಾಲೆಡಿ ಮನೆ ಬಿ.ಕೆ. ಕೃಷ್ಣಪ್ಪ ಸಾಲಿಯಾನ್ (65) ಗುರುವಾರ ನಿಧನ ಹೊಂದಿದರು. ಪತ್ನಿ, ಸ್ಪಂದನ ವಾಹಿನಿಯ ಗ್ರಾಫಿಕ್ ಡಿಸೈನರ್ ರವಿ ಮೂಡುಕೊಣಾಜೆ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಗಿರಿಜಾ ಹೆಗ್ಡೆ
ಉಡುಪಿ, ಜೂ.11: ಹಾರಾಡಿ ಮರ್ಬಿನ ಮನೆಯ ದಿ.ಆನಂದ ಹೆಗ್ಡೆಯ ಪತ್ನಿ ಕಿದಿಯೂರು ಬಡಗುಮನೆಯ ಗಿರಿಜಾ ಹೆಗ್ಡೆ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
----------------------------------------------------
ಜಮೀಲಾ
ಮಂಗಳೂರು, ಜೂ. 11: ಪಾಂಡೇಶ್ವರ ನಿವಾಸಿ ದಿವಂಗತ ಅಬ್ದುರ್ರಹ್ಮಾನ್ ಬಪ್ಪನಾಡು ಅವರ ಪತ್ನಿ ಜಮೀಲಾ (49) ಹೃದಯಾಘಾತದಿಂದ ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಬಂಧು, ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಅವರ ತಾಯಿಯ ಮನೆಯಾದ ಸುರತ್ಕಲ್ ಸಮೀಪದ ಮುಂಚೂರಿನಲ್ಲಿಡಲಾಗಿದ್ದು, ಅಂತ್ಯ ಸಂಸ್ಕಾರವು ರವಿವಾರ ಬೆಳಗ್ಗೆ ಮುಲ್ಕಿಯ ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.







