ಸಚಿವ ಖಾದರ್ ಜಿಲ್ಲಾ ಪ್ರವಾಸ
ಮಂಗಳೂರು, ಜೂ.11: ಆರೋಗ್ಯ ಸಚಿವ ಯು.ಟಿ.ಖಾದರ್ ಜೂ.12 ಮತ್ತು 13ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂ.12ರಂದು ಸಂಜೆ 4ಕ್ಕೆ ಪಾವೂರು ಗ್ರಾಮದ ಗಾಡಿಗದ್ದೆ ರಸ್ತೆ ಶಿಲಾನ್ಯಾಸ ಕಾರ್ಯಕ್ರಮ ಸಹಿತ ಇತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 13ರಂದು ಬೆಂದೂರ್‌ವೆಲ್‌ನ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹ ವಾಲು ಸ್ವೀಕರಿಸುವರು. ಬೆಳಗ್ಗೆ 10ಕ್ಕೆ ಇನ್ಫೋಸಿಸ್ ಬಳಿ ಚತುಷ್ಪಥ ರಸ್ತೆ ನಿರ್ಮಾಣದ ಸ್ಥಳ ಪರಿಶೀಲನೆ, 10:15ಕ್ಕೆ ಮುಡಿಪು ಸರಕಾರಿ ಕಾಲೇಜಿನ ಕಟ್ಟಡ ಹಾಗೂ ವಿಶ್ರಾಂತಿ ಕೊಠಡಿ ಉದ್ಘಾಟನೆ, 11:15ಕ್ಕೆ ಮೊಂಟೆಪದವು ಸರಕಾರಿ ಪ್ರಾಥಮಿಕ ಎಲ್ಕೆಜಿ ತರಗತಿ ಉದ್ಘಾಟನೆ, ಶೂ, ಇತರ ಸರಕಾರಿ ಸೌಲಭ್ಯಗಳ ವಿತರಣೆ, 3ಕ್ಕೆ ಉಳ್ಳಾಲ ನಪಂನಲ್ಲಿ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಪಾಲ್ಗೊಳ್ಳುವರು.
Next Story





