ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆ

ಮಂಗಳೂರು, ಜೂ.12: ಬಂಟ್ವಾಳ ತಾಲೂಕು ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ವೈದ್ಯನಾಥ್ ಗ್ಯಾರೇಜ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಪೂವಪ್ಪ(45ವ) ಗ್ಯಾರೇಜ್ ನೊಳಗೆ ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ. ಬಂಟ್ವಾಳ ತಾಪಂ ಸದಸ್ಯ ಗಣೇಶ್ ಸುವರ್ಣ ಎಂಬವರಿಗೆ ಸೇರಿದ ಗ್ಯಾರೇಜು ಆಗಿದೆ.
ಬಂಟ್ವಾಳ ಗ್ರಾಮಾಂತರ ಆರಕ್ಷಕ ಉಪನಿರೀಕ್ಷಕ ಎ.ಕೆ ರಕ್ಷಿತ್ ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.
Next Story





