ಜೈಪುರ: ಕಾರಿನೊಳಗೆ ಸಿಲುಕಿ ಇಬ್ಬರು ಮಕ್ಕಳ ಸಾವು!

ಸಾಂದರ್ಭಿಕ ಚಿತ್ರ
ಜೈಪುರ, ಜೂನ್, 12: ಕಾರಿನ ಬಾಗಿಲು ಬಿದ್ದ ಕಾರಣದಿಂದ ಅದರೊಳಗಿದ್ದ ನಾಲ್ಕು ವರ್ಷಹಾಗೂ ಎಂಟು ವರ್ಷದ ಇಬ್ಬರು ಮಕ್ಕಳು ದಾರುಣವಾಗಿ ಮೃತರಾದ ಘಟನೆ ನಡೆದಿದೆ. ಆಟವಾಡುತ್ತಾ ನೆರೆಮನೆಯಲ್ಲಿದ್ದ ಕಾರಿಗೆ ಹತ್ತಿದ ಕಿರಣ್ ಬಾವ್ರಿ, ವಿನೋದ್ ಬಾವ್ರಿ ಮೃತರಾದ ಇಬ್ಬರು ದುರ್ದೈವಿ ಪುಟಾಣಿಗಳು ಎಂದು ಗುರುತಿಸಲಾಗಿದೆ.
ಕಾರಿನೊಳಗೆ ಪ್ರಜ್ಞಾಶೂನ್ಯರಾಗಿಬಿದ್ದಿದ್ದ ಮಕ್ಕಳನ್ನು ತುಂಬ ಹೊತ್ತಿನ ಬಳಿಕ ಕಾರಿನ ಮಾಲಕ ಆಸ್ಪತ್ರೆಗೆ ತಲುಪಿಸಿದ್ದರು. ಅಷ್ಟರಲ್ಲಿ ಮಕ್ಕಳು ಮೃತರಾಗಿದ್ದರು. ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





