ಫಲಿಮಾರು: ಎಸ್ಕೆಎಸ್ಎಸ್ಎಫ್ ವತಿಯಿಂದ ರಂಝಾನ್ ಕಿಟ್ ವಿತರಣೆ
ಪಡುಬಿದ್ರಿ: ಎಸ್ಕೆಎಸೆಸೆಫ್ ಕೇಂದ್ರ ಸಮಿತಿ ಹಾಗೂ ಕುವೈತ್ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಬಡಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ಭಾನುವಾರ ಫಲಿಮಾರಿನ ಇನ್ನಾ ಮಸೀದಿಯಲ್ಲಿ ವಿತರಿಸಲಾಯಿತು.
ಫಲಿಮಾರು ಜುಮ್ಮಾ ಮಸೀದಿ ಖತೀಬ್ ಕೆ.ಎಂ.ಅಬ್ದುಲ್ ರಹಿಮಾನ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಉಡುಪಿ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮಸೀದಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಜಮಾಅತ್ ಕಾರ್ಯದರ್ಶಿ ಎಂ.ಪಿ.ಶೇಖಬ್ಬ, ಶಂಸುಲ್ ಉಲಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಹಮಾನ್ ಕನ್ನಂಗಾರ್, ಜಲೀಲ್ ಸಾಹೇಬ್ ಕೃಷ್ಣಾಪುರ, ರಾಜ್ಯ ಎಸ್ಕೆಎಸೆಸೆಎಫ್ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಉಸ್ಮಾನ್ ಅಬ್ದುಲ್ಲಾ ಸಾಹೇಬ್ ಕಾಟಿಪಳ್ಳ, ಎಸ್ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಹಾಜಿ ಹಮ್ಮಬ್ಬ ಮೊಯ್ದಿನ್, ಅಬ್ದುಲ್ಲಾ ಬಾಸಿತ್ ಕಾಂಜರಕಟ್ಟೆ ಮತ್ತಿತರರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 62500 ರೂ. ವೆಚ್ಚದಲ್ಲಿ ಅರ್ಹ ಬಡಕುಟುಂಬದ 25 ಕುಟುಂಬಗಳಿಗೆ ತಲಾ 2500 ರೂ. ಬೆಲೆಯ ದಿನಬಳಕೆ ಸಾಮಾಗ್ರಿಗಳ ರಮಝಾನ್ ಕಿಟ್ಟನ್ನು ವಿತರಿಸಲಾಯಿತು.





