ಸನಾತನ ಸಂಸ್ಥೆ ನಿಷೇಧಕ್ಕೆ ಮ.ರಾಷ್ಟ್ರ, ಗೋವಾದಲ್ಲಿ ಹೆಚ್ಚಿದ ಒತ್ತಡ

ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸದಸ್ಯನನ್ನು ಬಂಸಿರುವ ಹಿನ್ನೆಲೆಯಲ್ಲಿ, ಈ ಬಲಪಂಥೀಯ ಸಂಘಟನೆಯನ್ನು ನಿಷೇಸುವಂತೆ ಮಹಾರಾಷ್ಟ್ರ ಹಾಗೂ ಗೋವಾ ಬಿಜೆಪಿ ಸರಕಾರಗಳ ಮೇಲೆ ರಾಜಕೀಯ ಒತ್ತಡ ಹೆಚ್ಚಿದೆ.
ಇಎನ್‌ಟಿ ತಜ್ಞ ಹಾಗೂ ಸನಾತನ ಸಂಸ್ಥೆ ಸದಸ್ಯ ವೀರೇಂದ್ರ ತಾವಡೆ ಅವರನ್ನು, ದಾಬೋಲ್ಕರ್ ಹತ್ಯೆ ಪ್ರಕೃಣದಲ್ಲಿ ಸಿಬಿಐ ಬಂಸಿದೆ. ಈ ಬಂಧನದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಸನಾತನ ಸಂಸ್ಥೆ ನಿಷೇಸಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಶೋಕ್ ಚವ್ಹಾಣ್ ಅವರು, ಹಿಂದೆ ಕೂಡಾ ಕಾಂಗ್ರೆಸ್, ನಿಷೇಧಕ್ಕೆ ಆಗ್ರಹಿಸಿತ್ತು. ಇದೀಗ ತಾವಡೆ ಬಂಧನದ ಬಳಿಕ ಮತ್ತೆ ನಾವು, ಸನಾತನ ಸಂಸ್ಥೆ ನಿಷೇಧಕ್ಕೆ ಒತ್ತಾಯಿಸುತ್ತಿದ್ದೇವೆ. ಈ ಸಂಘಟನೆಯ ಚಟುವಟಿಕೆಗಳು ರಾಷ್ಟ್ರಕ್ಕೆ ಅಪಾಯ ಒಡ್ಡುವಂಥವು ಎಂದು ವಿವರಿಸಿದರು. ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಕೂಡಾ ಈ ಆಗ್ರಹವನ್ನು ಬೆಂಬಲಿಸಿದ್ದಾರೆ.
ವಿಚಾರವಾದಿಗಳಾದ ದಾಬೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಕೈವಾಡ ಇರುವುದಕ್ಕೆ ಪುರಾವೆ ಸಿಕ್ಕಿದರೆ ನಿಷೇಸಲು ಸಿದ್ಧ ಎಂದು ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ಸರಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ.
ಯಾವುದೇ ಪುರಾವೆ ಇದ್ದಲ್ಲಿ, ಸನಾತನ ಸಂಸ್ಥೆ ವಿರುದ್ಧ ಕ್ರಮಕ್ಕೆ ಸರಕಾರ ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಘೋಷಿಸಿದ್ದರು. ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದಲ್ಲಿ 25 ಲಕ್ಷ ರೂ. ಬಹುಮಾನವನ್ನೂ ಸರಕಾರ ಪ್ರಕಟಿಸಿತ್ತು. ಆದರೆ ಸಂಘಟನೆ ನಿಷೇಸಲು ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿರಲಿಲ್ಲ.







