ಮುಂಡಗೋಡು ಮತ್ತೆ ಮಲೆನಾಡಾಗಲಿ: ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ

ಮುಂಡಗೋಡ: ಮುಂಡಗೋಡ ಮಲೆನಾಡು ಪ್ರದೇಶ ಇಲ್ಲಿ ದಟ್ಟಾರಣ್ಯ ಇದ್ದದು ಬಯಲು ನಾಡಾಗಿದೆ. ವ್ಯಾಪಕ ವೃಕ್ಷಾರೋಪಣಾ ಮೂಲಕ ಪುನಃ ಮಲೆನಾಡಾಗಿ ಪರಿವರ್ತನೆ ಮಾಡವ್ಯದು ಅವಶ್ಯಕವಾಗಿದೆ ಎಂದು ಪೂಜ್ಯ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು ಅವರು ವೃಕ್ಷರೋಪಣ ಅಭಿಯಾನದ ಅಂಗವಾಗಿ ಸ್ವಾಮಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ , ಪಾರಿಜಾತ ಸಸಿಗಳನ್ನು ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ವೃಕ್ಷಮಂತ್ರಾಕ್ಷತೆ ನೀಡಿದರು.
ರೈತರು ಅರಣ್ಯ ರಕ್ಷಣೆಗೆ ಮುಂದಾಗಬೇಕು. ಪಟ್ಟಣದ ಜನತೆ ತಮ್ಮ ಹಿತ್ತಲು, ರಸ್ತೆ ಬದಿಯಲ್ಲಿ ಗಿಡನೆಟ್ಟು ಮರಗಿಡಗಳನ್ಮ್ನ ಬೆಳೆಸಿ ಮುಂಡಗೋಡನ್ನು ಹಸಿರಿನಿಂದ ಕಂಗೋಳಿಸುವಂತೆ ಮಾಡಿ ವನೀಕರಣ ಕಾರ್ಯ ಇಂದು ಮಾಡಲೇಬೇಕಾ ಎಲ್ಲರ ಆಧ್ಯ ಕರ್ತವ್ಯ ಎಂದು ಭಾವಿಸಬೇಕು. ಅರಣ್ಯ ನಾಶವಾಗುವುದನ್ನು ಅವಶ್ಯವಾಗಿ ಎಲ್ಲರೂ ತಡೆಯ ಬೇಕು ಎಂದರು.
ಸಸ್ಯ ಶಾಸ್ತ್ರಜ್ಞ ಡಾ ಕೇಶವ ಹೆಚ್ ಕೂರ್ಸೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಜಲಕ್ಷಾಮ ತಡೆಗೆ ಕೆರೆಗಳ ಪುನಶ್ಚೇತನ ಅತ್ಯವಶ್ಯ. ಅರಣ್ಯ ನಾಶದಿಂದ ರೈತರ ಬದುಕು ಕ್ಟವಾಗುತ್ತಿದೆ. ಜಲಮೂಲ ಬತ್ತುತ್ತಿದೆ.
ಮುಂಡಗೋಡ ತಾಲೂಕಿನ ಉಳಿದುಕೊಂಡಿರುವ ವನಸಂಪತ್ತನ್ನು ಕಾಪಾಡಬೇಕು. ಎಂದು ರೈತರಲ್ಲಿ ಮನವಿ ಮಾಡಿದರು. ಸಾಲಗಾಂವ್ ವಿರೂಪಾಕ್ಷೇಶ್ವರ ಮಠದ ಸ್ವಾಮೀಜಿ ಉಪಸ್ಥಿತರಿದ್ದರು. ಬಸವರಾಜ ಓಶಿಮಠ ವೃಕ್ಷಾರೋಪಣೆ ಕುರಿತ ಮಾತನಾಡಿದರುಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ರಮೇಶ ಕಬ್ಬಿನ, ಆರ್ ವಿ. ಹೆಗಡೆ, ವಿನಾಯಕ ರಾಯ್ಕರ ವೇದಿಕೆಯಲ್ಲಿದ್ದರು. ವೃಕ್ಷಾರೋಪಣಾ ಕಾರ್ಯಕ್ರಮದ ಆರಂಭದಲ್ಲಿ ಶ್ರೀಧರ ಹೆಡೆ ಬೈಲಮಠ ಸ್ವಾಗತಿಸಿದರು. ಶಾಂತಾರಾಮ ಸಿದ್ಧಿಯವರು ವಂದಿಸಿದರು. ಶ್ರೀ ವಿನಾಯಕ ರಾಯ್ಕರ್ ಫಲ ಸಮರ್ಪಣೆ ಮಾಡಿದರು. ಹಲವಾರು ಗಣ್ಯರು ವೃಕ್ಷ ಮಂತ್ರಾಕ್ಷತೆ ಪಡೆದರು.







