ಕೊಂಕಣಿ ಕಲಾ ಕುಲೋತ್ಸವ್ 2016 ನಳಿನಿ ಜಮೀಳಾ ರಿಂದ ಉದ್ಘಾಟನೆ
‘ಏಕ್ ವೇಶ್ಯೆ ಚಿ ಜೀಣ್ಯೆ ಕಥಾ ’ನಾಟಕ ಪ್ರದರ್ಶನ (ನಳಿನಿ ಜಮೀಲಾರ ಆತ್ಮ ಕಥೆಯನ್ನಾಧರಿಸಿದ ನಾಟಕ)

ಮಂಗಳೂರು ,ಜೂ,11:‘‘ನನ್ನ ಜೀವನ ಕಥೆಯನ್ನಾಧರಿಸಿದ ನಾಟಕ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಯನ್ನು ಸಮುದಾಯ ಮುಂದೆ ಇಟ್ಟು ಅವರ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ಆಶಯವನ್ನು ಹೊಂದಿದೆ .ಆ ಕಾರಣದಿಂದಲೇ ನಾನು ನನ್ನ ಆತ್ಮ ಕಥೆಯನ್ನು ಬರೆದೆ ’’ ಎಂದು ಲೈಂಗಿಕ ಕಾರ್ಯಕರ್ತೆ ನಳಿನಿ ಜಮೀಳಾ ತಿಳಿಸಿದರು.
ಅವರು ಇಂದು ಮಾಂಡ್ ಸೊಬಾಣ್ ಆಶ್ರಯದ ಕೊಂಕಣಿ ಕಲಾ ಕುಲೋತ್ಸವ್ 2016ರ ನಾಟಕ ತರಬೇತಿ ಕಾರ್ಯಗಾರದ ಮೂಲಕ ಈ ಬಾರಿ ನಿರ್ಮಾಣಗೊಂಡ ನಾಲ್ಕು ನಾಟಕಗಳ ಪ್ರದರ್ಶನ ದ ಪ್ರಥಮ ನಾಟಕ ‘ಏಕ್ ವೇಶ್ಯೆಚಿ ಜಿಣ್ಯೆ ಕಥಾ’(ವೇಶ್ಯೆಯೊಬ್ಬಳ ಆತ್ಮಕಥನ’) ಇಂದು ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ನನ್ನ ಆತ್ಮಕಥೆ ಜಗತ್ತಿನ ಏಳು ಭಾಷೆಗಳಲ್ಲಿ ಪ್ರಕಟಗೊಂಡಿರುವುದು ನನಗೆ ತೃಪ್ತಿ ತಂದಿದೆ.ನನ್ನಂತಹ ಮಹಿಳೆಯ ಸಮಸ್ಯೆ ಸಮಾಜದ ಇನ್ನು ಬಹಳಷ್ಟು ಜನರಿಗೆ ತಲುಪಬೇಕಾಗಿದೆ.ಈ ನಿಟ್ಟಿನಲ್ಲಿ ನಾಟಕ ಪ್ರಮುಖ ಮಾಧ್ಯಮ ವಾಗಿದೆ ಎಂದು ನಳಿನಿ ಜಮೀಲಾ ಕಲಾವಿದರಿಗೆ ಕೃತಜ್ಞತೆ ಸಲ್ಲಿಸಿದರು.
ನಾಟಕ ಪ್ರದರ್ಶನ ನೋಡಲು ಮಹಿಳೆಯರು ಬರುವುದು ಕಡಿಮೆ .ಆದರೆ ಮಂಗಳೂರಿನಲ್ಲಿ ಮಕ್ಕಳು ,ಮಹಿಳೆಯರು ಬಂದಿರುವುದು ಸಂತಸ ತಂದಿದೆ ಎಂದು ನಳಿನಿ ಜಮೀಲಾ ತಿಳಿಸಿದರು.ಇಂದು ಪ್ರದರ್ಶನಗೊಂಡ ನಾಟಕದಲ್ಲಿ ತ್ರಿಶೂರಿನ ಜಮೀಳಾ ಕೌಟುಂಬಿಕ ಸಮಸ್ಯೆಗಳಿಂದ ವೈಶ್ಯೆಯಾಗಿ ಬದುಕ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಪಡುವ ನೋವು ಸಂಕಟ.ಆಕೆಯನ್ನು ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿರುವವರು ಬಳಿಸಿಕೊಂಡು ನಿಕೃಷ್ಟವಾಗಿ ಕಾಣುವ ,ದೌರ್ಜನ್ಯ ನಡೆಸುವ ಚಿತ್ರಣವನ್ನು ಕಲಾವಿದರು ಮನೋಜ್ಞಾವಾಗಿ ತೆರೆದಿಟ್ಟರು.ಜೊತೆಗೆ ಓರ್ವ ಮಹಿಳೆಯಾಗಿ ಲೈಂಗಿಕ ಕಾರ್ಯಕರ್ತೆಯಾಗಿ ವ್ಯವಸ್ಥೆಯನ್ನು ಎದುರಿಸಿ ಬದುಕುವ ನಳಿನಿ ಜಮೀಳಾರ ಹೋರಾಟದ ಬದುಕಿನ ಚಿತ್ರಣ ನಾಟಕದಲ್ಲಿ ಅನಾವರಣ ಗೊಂಡಿದೆ.ಇಡೀ ನಾಟಕ ಪ್ರದರ್ಶನವನ್ನು ನಳಿನಿ ಜಮೀಳಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಫ್ರೆಂಚ್ ಸಹಿತ ಜಗತ್ತಿನ ಏಳು ಭಾಷೆಗೆ ತರ್ಜುಮೆ ಗೊಂಡ ವೈಶ್ಯೆಯೊಬ್ಬಳ (ನಳಿನಿ ಜಮೀಳಾರ)ಜೀವನ ಕಥೆಯನ್ನಾಧರಿಸಿದ ಅರುಣ್ ರಾಜ್ ಲುದ್ರಿಗ್‌ರ ಕೊಂಕಣಿ ನಾಟಕವನ್ನು ನಿನಾಸಂನ ಕ್ರಿಸ್ಟೋಫರ್ ನಿರ್ದೇಶಿಸಿದ್ದರು.ಮಂಗಳೂರು ನಗರದ ಕಲಾವಿದರು ನಾಟಕಪ್ರದರ್ಶಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯ ಗುರಿಕಾರ್ ಎರಿಕ್ ಒಝಾರಿಯೊ,ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ.ಪಿಂಟೊ,ಕಲಾಕುಲ್‌ನ ಸಂಯೋಜಕ ಅರುಣ್ ರಾಜ್ ರೋಡ್ರಿಗಸ್,ನಾಟಕದ ನಿರ್ದೇಶಕ ಕ್ರೀಸ್ಟೋಫರ್ ಮೊದಲಾದವರು ಉಪಸ್ಥಿತರಿದ್ದರು.







