ಮುಂಡಗೋಡ : ಸಾಲ ಬಾಧೆ - ರೈತ ನೇಣಿಗೆ ಶರಣು

ಮುಂಡಗೋಡ,ಜೂ.12: ಸಾಲದ ಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಸಂಬವಿಸಿದೆ.
ಮಲ್ಲಯ್ಯ ಗುರುಪಾದಯ್ಯ ಹಿರೇಮಠ(37) ಸಾವಿಗೆ ಶರಣಾದ ರೈತ. ಈತ ಉಗ್ಗಿನಕೇರಿ ಸರ್ವೇ ನಂ 2/1 ರಲ್ಲಿ 3 ಎಕರೆ ಜಮೀನು ಹೊಂದಿದ್ದು, ಈ ಜಮೀನಿನ ಮೇಲೆ ನಂದಿಗಟ್ಟಾ ವಿ.ಎಸ್.ಎಸ್ ಸಹಕಾರಿ ಸಂಘದಲ್ಲಿ 1.30 ಕ್ಷ ಹಾಗೂ ತನ್ನ ತಂದೆ ತಾಯಿಯ ಹೆಸರಿನಲ್ಲಿಯೂ ಬೇರೆ ಬೇರೆ ಬ್ಯಾಂಕ್ ಗಳಲ್ಲಿ 4.84 ಲಕ್ಷ ಸೇರಿದಂತೆ ಒಟ್ಟು 6.14 ಲಕ್ಷ ಬೆಳೆ ಸಾಲ ಪಡೆದಿದ್ದ ಎನ್ನಲಾಗಿದ್ದು, ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಗ್ರಾಮದ ಹೊರ ವಲಯ ಮುಸ್ಲಿಂ ಸ್ಮಶಾನದಲ್ಲಿ ಬೃಹತ್ ಗಾತ್ರದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಿ.ಎಸ್.ಐ ಕ್ಕಪ್ಪ ನಾಯ್ಕ ಹಾಗೂ ಎ.ಎಸ್.ಐ ಜಕ್ಕಣ್ಣವರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





