Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿದ್ಯುತ್ ಉತ್ಪಾದನೆಗೂ ತಟ್ಟಿದ ಬರದ ಬೇಗೆ

ವಿದ್ಯುತ್ ಉತ್ಪಾದನೆಗೂ ತಟ್ಟಿದ ಬರದ ಬೇಗೆ

ನಯನತಾರಾ ನಾರಾಯಣನ್ನಯನತಾರಾ ನಾರಾಯಣನ್12 Jun 2016 11:10 PM IST
share
ವಿದ್ಯುತ್ ಉತ್ಪಾದನೆಗೂ ತಟ್ಟಿದ ಬರದ ಬೇಗೆ

ಕಳೆದ ಕೆಲ ದಶಕಗಳಲ್ಲೇ ಅತ್ಯಂತ ಭೀಕರ ಎನಿಸುವಂಥ ಬರ ಪರಿಸ್ಥಿತಿ ಯನ್ನು ಭಾರತ ಎದುರಿಸುತ್ತಿದ್ದು, ಹೊಸ ವರ್ಷದ ಮೊದಲ ಐದು ತಿಂಗಳಲ್ಲಿ ಜನತೆಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಗ್ರೀನ್‌ಪೀಸ್ ಅಧ್ಯಯನ ವರದಿಯೊಂದರ ಪ್ರಕಾರ, ಭಾರತಕ್ಕೆ ಈ ಅವ ಯಲ್ಲಿ ನೀರಿನ ಕೊರತೆ ಅಥವಾ ಜಲಕ್ಷಾಮದಿಂದಾಗಿ ಸುಮಾರು 700 ಕೋಟಿ ಯೂನಿಟ್ ವಿದ್ಯುತ್ ನಷ್ಟವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳಿಗೆ ಯಂತ್ರಗಳನ್ನು ತಂಪಾಗಿಸಲು ನೀರು ಲಭ್ಯವಾಗದೆ, ಪದೇ ಪದೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಪದೇ ಪದೇ ಉತ್ಪಾದನೆ ಸ್ಥಗಿತಗೊಳ್ಳುವ ಕಾರಣದಿಂದ 2012ರ ಬೇಸಿಗೆಯಂತೆ ವಿದ್ಯುತ್ ಶಾಕ್ ಗ್ರಾಹಕರಿಗೆ ಬಡಿದಿರುವುದು ಮಾತ್ರವಲ್ಲದೆ, ದೊಡ್ಡ ಪ್ರಮಾಣದ ಹಣಕಾಸು ನಷ್ಟಕ್ಕೂ ಇದು ಕಾರಣವಾಗಿದೆ.

ಗ್ರೀನ್‌ಪೀಸ್ ಅಧ್ಯಯನ ತಂಡದ ಅಂದಾಜಿನಂತೆ, ಪರ್ಹಾಕಾದಲ್ಲಿರುವ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮದ ಘಟಕ, ತಿರೋಡಾದಲ್ಲಿರುವ ಅದಾನಿ ಪವರ್, ವರೋರಾದಲ್ಲಿರುವ ಜಿಎಂಆರ್, ಪಾರ್ಲಿಯಲ್ಲಿರುವ ಮಹಗೆನ್ಕೊ ಹಾಗೂ ರಾಯಚೂರಿನಲ್ಲಿರುವ ಕರ್ನಾಟಕ ಪವರ್ ಕಾರ್ಪೊರೇಷನ್ ಘಟಕಗಳಿಗೆ ತೀರಾ ಧಕ್ಕೆ ಉಂಟಾಗಿದೆ. ಇದರಿಂದಾಗಿ ಈ ಕಂಪೆನಿಗಳಿಗೆ ಉತ್ಪಾದನೆ ಸ್ಥಗಿತಗೊಳಿಸಿದ ಕ್ರಮದಿಂದ ಕನಿಷ್ಠ 2400 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ. ಹೂಡಿಕೆ ಸಲಹಾ ಸಂಸ್ಥೆಯಾದ ಈಕ್ವಿಟೋರಿಯಲ್, ಗ್ರೀನ್‌ಪೀಸ್ ವಿಶ್ಲೇಷಣೆಯ ಪರಾಮರ್ಶೆ ನಡೆಸಿದ್ದು, ಈ ಸಂಘಟನೆಯ ಪ್ರಕಾರ, ಈ ಪರಿಸರ ಸೇವಾ ಸಂಸ್ಥೆಯಾದ ಗ್ರೀನ್‌ಪೀಸ್, ವಿದ್ಯುತ್ ಕಂಪೆನಿಗಳು ಪ್ರತಿ ಗಂಟೆಗೆ ಕಿಲೋವ್ಯಾಟ್‌ಗೆ 3.5 ರೂಪಾಯಿ ದರ ನಿಗದಿಪಡಿಸುತ್ತವೆ ಎಂಬ ಅಂದಾಜಿನಂತೆ ನಷ್ಟದ ಪ್ರಮಾಣ ಅಂದಾಜು ಮಾಡಲಾಗಿದೆ

2012ರ ಜುಲೈ ತಿಂಗಳ ಕೊನೆಯ ಎರಡು ದಿನಗಳ ಕಾಲ ಇಡೀ ಉತ್ತರ ಹಾಗೂ ಪೂರ್ವ ಭಾರತ ಕಗ್ಗತ್ತಲ ಪರಿಸ್ಥಿತಿ ಎದುರಿಸಬೇಕಾಯಿತು. ಅಂದರೆ ಭಾರತದ ಒಟ್ಟು ಜನಸಂಖ್ಯೆಯ ಪೈಕಿ 62 ಕೋಟಿ ಮಂದಿ ಇದರಿಂದ ತೊಂದರೆಗೀಡಾದರು. ಆ ವರ್ಷದ ಸುದೀರ್ಘ ಹಾಗೂ ತೀವ್ರ ಬೇಸಿಗೆಯ ಪರಿಣಾಮವಾಗಿ, ಜಲವಿದ್ಯುತ್ ಯೋಜನೆಗಳ ಸಾಮರ್ಥ್ಯಕ್ಕೆ ಸಹಜವಾಗಿಯೇ ಧಕ್ಕೆ ಉಂಟಾಯಿತು. ನದಿಗಳು ಒಣಗಿದ್ದರಿಂದ ವಿದ್ಯುತ್ ಉತ್ಪಾದನೆ ಇಲ್ಲದಿದ್ದರೂ, ವಿದ್ಯುತ್ ಬಳಕೆ ಮಾತ್ರ ಹೆಚ್ಚುತ್ತಲೇ ಹೋಯಿತು. ಹವಾನಿಯಂತ್ರಿತ ಯಂತ್ರಗಳಿಂದ ಹಿಡಿದು, ನೀರಾವರಿ ಪಂಪ್‌ಗಳ ವರೆಗೆ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಿತು. ಇದಕ್ಕೆ ಪೂರಕವಾಗಿ ಮುಂಗಾರು ಮಳೆ ಕೂಡಾ ತೀರಾ ವಿಳಂಬವಾದ ಹಿನ್ನೆಲೆಯಲ್ಲಿ ಉತ್ತರ ಗ್ರಿಡ್ ಸಂಪೂರ್ಣವಾಗಿ ನಿಷ್ಕ್ರಿಯವಾಗುವ ಸ್ಥಿತಿ ಬಂತು.
ಗ್ರೀನ್‌ಪೀಸ್ ಸಂಘಟನೆಯ ಅಧ್ಯಯನ ವಿಶ್ಲೇಷಣೆ, ಕಲ್ಲಿದ್ದಲು ಘಟಕಗಳು ಕೂಡಾ ಹೇಗೆ ಅಪಾಯಕ್ಕೆ ಸಿಲುಕಿಕೊಳ್ಳುತ್ತವೆ ಎನ್ನುವುದನ್ನು ವಿವರಿಸುವ ಪರಿಸರಾತ್ಮಕ ಅಂಶಗಳಿಗೆ ಒತ್ತು ನೀಡಿದೆ.

ಈ ವರ್ಷದ ಭೀಕರ ಬರಗಾಲದಿಂದ ಹಾಗೂ ಸತತ ಮೂರು ವರ್ಷಗಳಲ್ಲಿ ಮುಂಗಾರು ಮಳೆ ವೈಲ್ಯದಿಂದ, ಜಲಕ್ಷಾಮ ಉಂಟಾಗಿದ್ದು, ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಸುಮಾರು 33 ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಕೃತ ಅಂಕಿ ಅಂಶಗಳು ಹೇಳುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಲ್ಲಿದ್ದಲು ಘಟಕಗಳ ಉತ್ಪಾದನೆ ಹಾಗೂ ಆದಾಯ ಎರಡೂ ಕುಸಿಯುತ್ತದೆ. ಕಲ್ಲಿದ್ದಲು ಉತ್ಪಾದನೆಗೆ ನೀರು ಅಕ ಪ್ರಮಾಣದಲ್ಲಿ ಬೇಕಿದ್ದು, ಈ ವಲಯ ಪ್ರತಿ ವರ್ಷ 460 ಕೋಟಿ ಘನ ಅಡಿ ನೀರನ್ನು ಬಳಸಿಕೊಳ್ಳುತ್ತದೆ. ಈ ಮೊತ್ತದಿಂದ ದೇಶದ 251 ಶತಕೋಟಿ ಭಾರತೀಯರ ಮೂಲಭೂತ ಅಗತ್ಯತೆಗಳನ್ನು ಪೂರೈಸಬಲ್ಲದು ಎಂದು ಗ್ರೀನ್‌ಪೀಸ್ ವರದಿ ಹೇಳಿದೆ.

‘‘ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರ್ಥಿಕವಾಗಿ ಅತ್ಯಂತ ಪ್ರಮುಖ ಚಟುವಟಿಕೆ ಎಂದು ಪರಿಗಣಿಸಿದ್ದು, ಈ ಕ್ಷೇತ್ರ ಸಾಕಷ್ಟು ನೀರನ್ನು ಪಡೆಯುತ್ತಲೇ ಇದೆ. ಆದರೆ ಇತರ ಕ್ಷೇತ್ರಗಳಿಗೆ ಆ ಸೌಲಭ್ಯ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಜನರು ಸ್ಥಳೀಯ ಮಟ್ಟದಲ್ಲಿ ಬವಣೆಪಡುವಂತಾಗಿದೆ’’ ಎನ್ನುತ್ತಾರೆ ಮಂಥನ್ ಅಧ್ಯಯನ ಕೇಂದ್ರ ಎಂಬ ಸಂಪನ್ಮೂಲ ಪ್ರತಿಪಾದನಾ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಶ್ರೀಪಾದ್ ಧರ್ಮಾಕಾರಿ. ಈ ಗ್ರೀನ್‌ಪೀಸ್ ಸಂಘಟನೆ ವತಿಯಿಂದ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಈ ವರದಿಯ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.
ಗ್ರೀನ್‌ಪೀಸ್ ಅಂದಾಜಿನ ಪ್ರಕಾರ, ಭಾರತದ ಕಲ್ಲಿದ್ದಲು ವಿದ್ಯುತ್ ಸಾಮರ್ಥ್ಯದ ಶೇಕಡ 24ರಷ್ಟು ಪ್ರದೇಶಗಳು ಅಕ ನೀರನ್ನು ಹಾಗೂ ಅಂತರ್ಜಲವನ್ನು ಬಳಸಿಕೊಂಡವುಗಳು. ಇವು ಈಗಾಗಲೇ ಜಲಮೂಲವನ್ನು ಕೂಡಾ ಕಳೆದುಕೊಂಡಿವೆ. ಇನ್ನು 38 ಗಿಗಾವ್ಯಾಟ್‌ನಷ್ಟು ಕಲ್ಲಿದ್ದಲು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಘಟಕಗಳು ಇರುವುದು ತೀರಾ ನೀರಿನ ಒತ್ತಡ ಇರುವ ಪ್ರದೇಶಗಳಲ್ಲಿ. ಇಷ್ಟೂ ಸಾಲದು ಎಂಬಂತೆ ಇನ್ನೂ 122 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸಲು ಯೋಜನೆ ರೂಪಿಸಿರುವುದು ಕೂಡಾ ಇದೇ ಪ್ರದೇಶದಲ್ಲಿ.

‘‘ಈಗ ಕಾರ್ಯಾಚರಿಸುತ್ತಿರುವ ಉಷ್ಣವಿದ್ಯುತ್ ಘಟಕಗಳು ಮತ್ತು ಭವಿಷ್ಯದ ವಿದ್ಯುತ್ ಘಟಕಗಳು ಇರುವುದು ನೀರಿನ ಕೊರತೆ ಇರುವ ಪ್ರದೇಶಗಳಲ್ಲೇ. ಇದರಿಂದ ಇಂಥ ಘಟಕಗಳ ಕಾರ್ಯ ನಿರ್ವಹಣೆಗೇ ತೊಡಕು ಉಂಟಾಗುವ ಅಪಾಯ ಇದೆ’’ ಎನ್ನುತ್ತಾರೆ ಗ್ರೀನ್‌ಪೀಸ್ ಅಧ್ಯಯನ ವರದಿಯ ಲೇಖಕರಲ್ಲೊಬ್ಬರಾದ ಜೈಕೃಷ್ಣ. ಕೇಂದ್ರೀಯ ವಿದ್ಯುತ್ ಪ್ರಾಕಾರದ ದಿನವಹಿ ಹೊರಹೋಗುವ ವಿದ್ಯುತ್‌ನ ವರದಿ ಹಾಗೂ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್‌ನಿಂದ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಪಡೆದ ಉತ್ತರದಿಂದ ದೃಢಪಟ್ಟ ಮಾಹಿತಿ ಇದಾಗಿದೆ.
ಧರ್ಮಾಕಾರಿಯವರ ಪ್ರಕಾರ, ಹಾಲಿ ಅಸ್ತಿತ್ವದಲ್ಲಿರುವ ಕಲ್ಲಿದ್ದಲು ವಿದ್ಯುತ್ ಘಟಕಗಳ ಮಾರ್ಗಸೂಚಿಯ ಅನ್ವಯ, ನೀರಿನ ಒತ್ತಡ ಅಥವಾ ನೀರಿನ ಲಭ್ಯತೆ ಕೊರತೆಯನ್ನು ಮಾನದಂಡವಾಗಿ ಪರಿಗಣಿಸಿಲ್ಲ. ಈಕ್ವಿಟೋರಿಯಲ್‌ನ ಹೂಡಿಕೆ ಸಲಹೆಗಾರ್ತಿ ಜೈ ಶಾರದಾ ಹೇಳುವಂತೆ, ಹೂಡಿಕೆ ಸಮುದಾಯ, ವಿದ್ಯುತ್ ಘಟಕಗಳಿಗೆ ನೀರಿನ ಲಭ್ಯತೆ ಅಂಶವನ್ನು ನಿರ್ಲಕ್ಷಿಸಿದ್ದಾರೆ. ವಾಸ್ತವವಾಗಿ ಇದು ಹಣಕಾಸು ಅಪಾಯಕ್ಕೆ ಕಾರಣವಾಗುವ ಅಂಶ
ಸುಮಾರು 30 ರಿಂದ 40 ವರ್ಷದ ದೀರ್ಘಕಾಲದ ಅಂದಾಜು ಮಾಡಬೇಕಾಗುತ್ತದೆ. ಹಾಗೂ ಇದರಲ್ಲಿ ಯಾವುದೇ ಅನಿಶ್ಚಿತ ಅಂಶಗಳಿಲ್ಲ. ಹೇಗಾದರೂ ಅಥವಾ ಯಾವ ಮಾರ್ಗದಲ್ಲಾದರೂ, ಇಂಥ ಘಟಕಗಳಿಗೆ ನೀರಾವರಿ ಅಂಶಗಳ ಜತೆ ಸಂಪರ್ಕ ಸಾಸುವುದು ಅಗತ್ಯ. ನೀರು ಎನ್ನುವುದು ಅಂದಾಜು ಮಾಡಲು ಕಷ್ಟಕರ ಅಂಶವಾಗಿದ್ದು, ವಾಸ್ತವ ಹಾಗೂ ತಂತ್ರಗಾರಿಕೆಯ ಅಪಾಯ ಮಾತ್ರ ಸದಾ ಇದ್ದೇ ಇರುತ್ತದೆ.

ಕೃಪೆ: scroll.in

share
ನಯನತಾರಾ ನಾರಾಯಣನ್
ನಯನತಾರಾ ನಾರಾಯಣನ್
Next Story
X