ಇಬ್ಬರ ಕೊಲೆ: ಆರೋಪಿ ಪರಾರಿ
ಕಾರವಾರ, ಜೂ.12: ಪತ್ನಿ ಹಾಗೂ ಅತ್ತೆಯನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಳ್ಳಿ ಗ್ರಾಮದಲ್ಲಿ ರವಿವಾರ ನಡೆದಿದೆ.
ಪತ್ನಿ ದಿವ್ಯಾ ಹಾಗೂ ಅತ್ತೆ ಲಕ್ಷ್ಮೀ ಕೊಲೆಯಾದವರು. ಆರೋಪಿ ಅಣ್ಣಪ್ಪ ಅಸ್ಲರ್ ಪರಾರಿಯಾಗಿದ್ದಾನೆ. ಕೊಲೆಗಾರ ಅಣ್ಣಪ್ಪಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಎಂದು ತಿಳಿದು ಬಂದಿದೆ.
ಈಗ ಕೊಲೆಯಾದವಳು ಅಣ್ಣಪ್ಪನ ಎರಡನೆ ಪತ್ನಿ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
Next Story





