ಪ್ರಾಕೃತ ಭಾಷಾ ಸಂಪರ್ಕ ಶಿಬಿರ
.jpg)
ಮೂಡುಬಿದಿರೆ, ಜೂ.12: ಪ್ರಾಕೃತ ಭಾಷೆ ಪ್ರಕೃತಿಯ ಭಾಷೆ. ಪ್ರಾಕೃತ ಹಾಗೂ ಸಂಸ್ಕೃತ ಭಾಷೆಗಳು ನಮ್ಮಲ್ಲಿ ದೈವಿ ಸಾಕ್ಷಾತ್ಕಾರ ಉಂಟು ಮಾಡಿದೆ. ನಮ್ಮಲ್ಲಿರುವ ಸಕಾರಾತ್ಮ ಅಂಶಗಳನ್ನು ಹೆಚ್ಚಿಸಲು ಈ ಭಾಷೆಗಳ ಕೊಡುಗೆ ಅಪಾರ. ವೌಲ್ಯಗಳನ್ನು ಉನ್ನತೀಕರಿಸಲು ಪ್ರಾಚೀನ ಗ್ರಂಥಗಳ ಅಧ್ಯಯನ ಅಗತ್ಯ. ಪ್ರಾಕೃತ ಭಾಷೆಯ ಕಲಿಕೆಯಿಂದ ಧರ್ಮಗ್ರಂಥಗಳ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಲು ಸಾಧ್ಯ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ನುಡಿದರು. ಶ್ರೀಜೈನ ಮಠದ ಧವಲತ್ರಯ ಜೈನಕಾಶಿ ಟ್ರಸ್ಟ್ ಆಶ್ರಯದಲ್ಲಿ ರಮಾರಾಣೀ ಶೋಧ ಸಂಸ್ಥಾನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಕೃತ ಭಾಷಾ ಸಂಪರ್ಕ ಶಿಬಿರ ಹಾಗೂ ಪತ್ರಕರ್ತ ಎ.ಆರ್.ರಘುರಾಮ್‌ರಿಗೆ ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು. ಉದ್ಯಮಿ ಪುಷ್ಪರಾಜ್ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಎ.ದಿನೇಶ್ ಕುಮಾರ್, ಕಾರ್ಯಕ್ರಮದ ಪ್ರಾಯೋಜಕ ಸುಧೀರ್ ಜೈನ್ ಉಪಸ್ಥಿತರಿದ್ದರು. ಸಂಶೋಧಕ ಡಾ.ವೈ.ಉಮಾನಾಥ ಶೆಣೈ, ವಿದ್ವಾಂಸ ಡಾ.ಎಸ್.ಪಿ ವಿದ್ಯಾಕುಮಾರ್, ಮೈಸೂರಿನ ಹಿರಿಯ ಪ್ರಾಕೃತ ತಜ್ಞ ಸುರೇಶ್ ಜೈನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾನಸಾ ಸ್ವಾಗತಿಸಿದರು. ನೇಮಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ವಂದಿಸಿದರು.





