ಕಾಸರಗೋಡು: ಮಳೆಗಾಲ ಪೂರ್ವ ಸಿದ್ಧತೆಗೆ ಸೂಚನೆ
ಕಾಸರಗೋಡು, ಜೂ.12: ಲೋಕೋಪಯೋಗಿ ಇಲಾಖೆಯುಮಳೆಗಾಲ ಪೂರ್ವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸು ವಂತೆ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ನಡೆದ ಮಳೆಗಾಲ ಪೂರ್ವ ಕಾಮಗಾರಿಗಳ ಕುರಿತು ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳ ಮತ್ತು ಶಾಲಾ ಪರಿಸರದಲ್ಲಿ ಅವಘಡಕ್ಕೆ ಕಾರಣವಾಗುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದ ಅವರು, ಮಳೆಗಾಲ ಪೂರ್ವ ಕಾಮಗಾರಿಗಳಿಗೆ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ 1 ಕೋ.ರೂ. ಆಡಳಿತಾನುಮತಿ ನೀಡಲಾಗಿದೆ. ಆ ಪೈಕಿ 65 ಲಕ್ಷ ರೂ. ಹೊಂಡ ಮುಚ್ಚಲು ಮತ್ತು 35 ಲಕ್ಷ ರೂ. ಚರಂಡಿ ದುರಸ್ತಿಗೊಳಿಸಲು ಬಳಸಲಾಗುವುದು. ಸರಕಾರಿ ಕಚೇರಿಗಳ ಮೇಲ್ಛಾವಣಿಯಲ್ಲಿ ನೀರು ಕಟ್ಟಿ ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಎಸ್.ರಾಜನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಕಾಸರಗೋಡು: ಮಳೆಗಾಲ ಪೂರ್ವ ಸಿದ್ಧತೆಗೆ ಸೂಚನೆ
ಕಾಸರಗೋಡು, ಜೂ.12: ಲೋಕೋಪಯೋಗಿ ಇಲಾಖೆಯುಮಳೆಗಾಲ ಪೂರ್ವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸು ವಂತೆ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ನಡೆದ ಮಳೆಗಾಲ ಪೂರ್ವ ಕಾಮಗಾರಿಗಳ ಕುರಿತು ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳ ಮತ್ತು ಶಾಲಾ ಪರಿಸರದಲ್ಲಿ ಅವಘಡಕ್ಕೆ ಕಾರಣವಾಗುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದ ಅವರು, ಮಳೆಗಾಲ ಪೂರ್ವ ಕಾಮಗಾರಿಗಳಿಗೆ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ 1 ಕೋ.ರೂ. ಆಡಳಿತಾನುಮತಿ ನೀಡಲಾಗಿದೆ. ಆ ಪೈಕಿ 65 ಲಕ್ಷ ರೂ. ಹೊಂಡ ಮುಚ್ಚಲು ಮತ್ತು 35 ಲಕ್ಷ ರೂ. ಚರಂಡಿ ದುರಸ್ತಿಗೊಳಿಸಲು ಬಳಸಲಾಗುವುದು. ಸರಕಾರಿ ಕಚೇರಿಗಳ ಮೇಲ್ಛಾವಣಿಯಲ್ಲಿ ನೀರು ಕಟ್ಟಿ ನಿಲ್ಲದಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಎಸ್.ರಾಜನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.