ಇಂದಿನ ಕಾರ್ಯಕ್ರಮ
ಇಂದು ಆಸ್ಕರ್ ಭೇಟಿ
ಕಾರ್ಕಳ, ಜೂ.12: ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಜೂ.13ರಂದು ಸಂಜೆ 3 ಗಂಟೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಬೈಲೂರು ರಾಮಮಂದಿರದಲ್ಲಿ ಭೇಟಿ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದಿನಿಂದ ಕಚ್ಚಿ ಮಸೀದಿಯಲ್ಲಿ ರಮಝಾನ್ ಪ್ರವಚನ
ಮಂಗಳೂರು, ಜೂ.12: ಅಲ್ ಹಖ್ ಫೌಂಡೇಶನ್ ಮತ್ತು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಜಂಟಿ ಆಶ್ರಯದಲ್ಲಿ ಜೂ.13ರಿಂದ 25ರವರೆಗೆ ಲುಹರ್ ನಮಾಝಿನ ನಂತರ ಖ್ಯಾತ ವಿದ್ವಾಂಸರಿಂದ ಮಂಗಳೂರಿನ ಬಂದರ್ ಕಚ್ಚಿ ಮಸೀದಿಯಲ್ಲಿ ರಮಝಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಜೂ.13ರಂದು ಶೇಕ್ ಅಬ್ದುರ್ರಹೀಮ್ ಸಗ್ರಿ ‘ತೌಹೀದ್’ ಎಂಬ ವಿಷಯದಲ್ಲಿ, ಜೂ.14ರಂದು ‘ಖೈರ್ ಉಮ್ಮತ್’ ಎಂಬ ವಿಷಯದಲ್ಲಿ ಉರ್ದು ಭಾಷೆಯಲ್ಲಿ, ಜೂ.16ರಂದು ವೌಲಾನ ಉಮರ್ ಸ್ವಲಾಹಿ ‘ಮರಣ ನಂತರ’ ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲಿ,್ಲ ವೌಲಾನ ಅಬ್ದುಲ್ ಗಫೂರ್ ಜಮಾಈ, ಜೂ.20ರಂದು ‘ಅಲ್ಲಾಹು ಸರ್ವಶಕ್ತನು’ ಎಂಬ ವಿಷಯದಲ್ಲಿ ಹಾಗೂ ಜೂ.21ರಂದು ‘ಬದ್ರ್ ಸಂದೇಶ’ ವಿಷಯದಲ್ಲಿ ಉರ್ದು ಭಾಷೆಯಲ್ಲಿ, ಅಲಿ ಉಮರ್ ಜೂ.22ರಂದು ‘ಅಹ್ಲುಸುನ್ನತ್ ವಲ್ ಜುಮಾ’ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ, ಫೈಝಲ್ ಮೌಲವಿ ಜೂ.23ರಂದು ‘ಅಲ್ಲಾಹನೆಡೆಗೆ ಮರಳಿರಿ’ ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ, ವೌಲಾನ ಅಬ್ದುಲ್ ಫಾರೂಕಿ ಜೂ.25ರಂದು ‘ರಮಝಾನ್‌ನ ವಿಜಯಿಗಳು’ ಎಂಬ ವಿಷಯದಲ್ಲಿ ಮಲಯಾಳಂ ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಮೂಸಾ ಫಾಝಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







