ವೌಲ್ಯದೊಂದಿಗೆ ಸಮಾಜದ ಒಳಿತಿಗೆ ಶ್ರಮಿಸಿ: ಬ್ಯಾಪ್ಟಿಸ್ಟ್ ಮಿನೇಜಸ್

ಉಡುಪಿ, ಜೂ.12: ಸಂಘಟನೆಗಳು ಮೌಲ್ಯ ಹಾಗೂ ಧ್ಯೇಯ ಗಳೊಂದಿಗೆ ರಾಜಿ ಮಾಡಿಕೊಳ್ಳದೆ ಸಮಾಜದ ಒಳಿತಿಗಾಗಿ ಶ್ರಮಿಸ ಬೇಕೆಂದು ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಜ್ಞೊಂರ್ ಬ್ಯಾಪ್ಟಿಸ್ಟ್ ಮಿನೇಜಸ್ ಹೇಳಿದ್ದಾರೆ.
ಕನ್ನರ್‌ಪಾಡಿ ಸಂತ ಮೇರಿ ಶಾಲಾ ಆವರಣದಲ್ಲಿ ರವಿವಾರ ಜರಗಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಮಾಜಿ ಅಧ್ಯಕ್ಷ ಡಾ.ಥೋಮಸ್ ಕ್ವಾಡ್ರಸ್ ‘ಕೆಥೊಲಿಕ್ ಸಭಾ ನಮ್ಮ ಆಸ್ತಿ’ ಹಾಗೂ ಉದ್ಯಮಿ ರೊನಾಲ್ಡ್ ಡಿಸೋಜ ‘ಕೆಥೊಲಿಕ್ ಸಭೆಯ ಮೂಲಕ ಸಮಾಜದ ಏಳಿಗೆ’ ಕುರಿತು ಉಪನ್ಯಾಸ ನೀಡಿದರು.
ನೂತನ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ತಾಪಂ ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ವೈಲೆಟ್ ಬಾರೆಟ್ಟೊ ಕೋಟೇಶ್ವರ, ಗ್ರಾಪಂ ಸದಸ್ಯರಾದ ಮೆಲ್ವಿನ್ ಡಿಸೋಜ ಶಿರ್ವ, ರೆನಿಟಾ ಪ್ರೀಮಾ ಡಿಸೋಜ, ಪ್ರತಿಭಾವಂತ ವಿದ್ಯಾರ್ಥಿಗಳಾದ ಗ್ಲೆವನ್ ಡಿಸೋಜ ಪಡುಕೋಣೆ, ರೋಯ್‌ಸ್ಟನ್ ವಿಜಯ್ ಕ್ಯಾಸ್ತಲಿನೊ ನಕ್ರೆ, ಸಮಾಜ ಸೇವಕಿ ಡಯಾನಾ ರೊಡ್ರಿಗಸ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನೂತನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊರನ್ನು ಸನ್ಮಾನಿಸಲಾಯಿತು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ 2016-17ನೆ ಸಾಲಿನ ಟೆಲಿೆನ್ ಡೈರೆಕ್ಟರಿಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ.್ರೆಡ್ ಮಸ್ಕರೇನ್ಹಸ್ ಅನಾವರಣಗೊಳಿಸಿದರು. ಸಂಘಟನೆಯ ಕಾರ್ಯದರ್ಶಿ ಆಲಿಸ್ ರೊಡ್ರಿಗಸ್ ವಾರ್ಷಿಕ ವರದಿ, ಪ್ರೆಸಿಲ್ಲಾ ಆಳ್ವಾ ಹಿಂದಿನ ಮಹಾಸಭೆಯ ವರದಿ, ಕೋಶಾಕಾರಿ ಆಲ್ವಿನ್ ಕ್ವಾಡ್ರಸ್ ವಾರ್ಷಿಕ ಆಯವ್ಯಯ, ಹೆನ್ರಿ ಮಿನೇಜಸ್ ಮಾನಸ ಸಂಸ್ಥೆಯ ವರದಿ, ವಾಲ್ಟರ್ ಸಿರಿಲ್ ಪಿಂಟೊ ಸಶಕ್ತ ಸಮುದಾಯ ಸೇವಾ ಟ್ರಸ್ಟ್‌ನ ವರದಿಯನ್ನು ಮಂಡಿಸಿದರು.
2016-17ನೆ ಸಾಲಿನ ನೂತನ ಅಧ್ಯಕ್ಷ ವಲೇರಿಯನ್ ೆರ್ನಾಂಡಿಸ್ ಅಕಾರ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಅಧ್ಯಕ್ಷ ವಿಲಿಯಂ ಮಚಾದೊ ವಹಿಸಿದ್ದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಎಲ್‌ರೊಯ್ ಕಿರಣ್ ಕ್ರಾಸ್ತಾ, ಮಂಗಳೂರು ಧರ್ಮಪ್ರಾಂತದ ಅಧ್ಯಕ್ಷೆ ್ಲೇವಿ ಡಿಸೋಜ, ನಿಯೋಜಿತ ಅಧ್ಯಕ್ಷ ವಾಲ್ಟರ್ ಡಿಸೋಜ, ವಲಯ ಅಧ್ಯಕ್ಷರಾದ ್ಲೆವನ್, ಮೆಲ್ವಿನ್ ಆರಾನ್ಹಾ, ಹ್ಯೂಬರ್ಟ್ ಲೂವಿಸ್, ಜೋಕಿಂ ಪಿಂಟೊ,ಲಿಯೋ ಸಿಕ್ವೇರಾ, ಮಾಜಿ ಕೇಂದ್ರಿಯ ಅಧ್ಯಕ್ಷ ಅಲೊಓಂೀನ್ಸ್ ಡಿಕೋಸ್ತ, ಉಡುಪಿ ಘಟಕಾಧ್ಯಕ್ಷೆ ಬೆನಡಿಕ್ಟಾ ಉಪಸ್ಥಿತರಿದ್ದರು.
ಉಡುಪಿ ವಲಯಾಧ್ಯಕ್ಷ ಚಾರ್ಲ್ಸ್ ಕ್ವಾಡ್ರಸ್ ಸ್ವಾಗತಿಸಿ, ಕೇಂದ್ರಿಯ ಕಾರ್ಯದರ್ಶಿ ಜಸಿಂತಾ ಕುಲಾಸೊ ವಂದಿಸಿದರು. ಸ್ಟೀವನ್ ಪ್ರಕಾಶ್ ಲೂವಿಸ್ ಹಾಗೂ ಜೆನೆವಿವ್ ಕಾರ್ಯಕ್ರಮ ನಿರೂಪಿಸಿದರು.







