ಕೆಎಸ್ಸಾರ್ಟಿಸಿ ಐಷಾರಾಮಿ ಬಸ್ ಪ್ರಯಾಣ ದರ ಕಡಿತ

ಬೆಂಗಳೂರು, ಜೂ. 12: ರಾಜಹಂಸ, ವೈಭವ, ಐರಾವತ, ಐರಾವತಿ ಕ್ಲಬ್‌ಕ್ಲಾಸ್ ಸೇರಿದಂತೆ ಐಷಾರಾಮಿ ಬಸ್ ಪ್ರಯಾಣ ದರವನ್ನು ಶೇ.10ರಿಂದ 20ರಷ್ಟು ಕಡಿಮೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಇಂದಿಲ್ಲಿ ತಿಳಿಸಿದೆ.
ಜೂ.13ರಿಂದ ಸೆಪ್ಟ್ಟಂಬರ್ 30ರ ವರೆಗೆ ಈ ನೂತನ ದರ ಅನ್ವಯವಾಗಲಿದ್ದು, ಈ ಬಸ್ಸುಗಳಲ್ಲಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ ಸಂಚರಿಸುವ ಪ್ರಯಾಣಿಕರಿಗೆ ಹಾಲಿ ದರದಲ್ಲಿ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಶುಕ್ರವಾರ, ಶನಿವಾರ ಮತ್ತು ರವಿವಾರ ಶೇ.10ರಷ್ಟು ದರ ಕಡಿಮೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
Next Story





