ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ
ಪಾವೂರು ಗಾಡಿಗದ್ದೆ

ಉಳ್ಳಾಲ, ಜೂ.12: ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವೂರು ಗಾಡಿಗದ್ದೆ-ಪದವು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ರವಿವಾರ ಸಚಿವ ಯು.ಟಿ.ಖಾದರ್ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸಿಗುವ ಸವಲತ್ತುಗಳು ಗ್ರಾಮೀಣ ಭಾಗದ ಜನರಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಮೂಲಭೂತ ಸೌಕರ್ಯ ನೀಡಲು ಆದ್ಯತೆ ನೀಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ 20 ವರ್ಷ ಬಾಳಿಕೆ ಬರುವ ಶಾಶ್ವತ ಕಾಂಕ್ರೀಟ್ ರಸ್ತೆಗೆ ಒತ್ತು ನೀಡಲಾಗಿದೆ. ಗಾಡಿಗದ್ದೆ ರಸ್ತೆಯ ಶೇ.50ರಷ್ಟು ಈಗಾಗಲೇ ಡಾಂಬರು, ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದ್ದು, ಎರಡನೇ ಹಂತವಾಗಿ ಮೀನುಗಾರಿಕಾ ಇಲಾಖೆಯಿಂದ 25 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಕೇವಲ ಗಾಡಿಗಳು ಮಾತ್ರ ಚಲಿಸುತ್ತಿದ್ದ ದಾರಿಯನ್ನು ರಸ್ತೆಯನ್ನಾಗಿ ನಿರ್ಮಿಸಿದ ಕೀರ್ತಿ ದಿ.ಯು.ಟಿ.ಫರೀದ್ ಹಾಗೂ ಸಚಿವ ಯು.ಟಿ.ಖಾದರ್‌ಗೆ ಸಲ್ಲುತ್ತದೆ ಎಂದರು.
ಪಾವೂರು ಗ್ರಾಪಂ ಅಧ್ಯಕ್ಷ ಎಂ.ಟಿ.ಫಿರೋಝ್, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಎಂ.ಪಿ.ಹಸನ್, ಐ.ಬಿ.ಸಾದಿಕ್, ಚಕ್ಕರ್ ಮುಹಮ್ಮದ್ ಇನೋಳಿ, ಮಜೀದ್ ಸಾತ್ಕೋ, ವಿವೇಕ್ ರೈ, ಜಿಪಂ ಮಾಜಿ ಸದಸ್ಯ ಎನ್.ಎಸ್. ಕರೀಂ, ಮಾಜಿ ತಾಪಂ ಸದಸ್ಯ ನೆಕ್ಕರೆ ಬಾವ, ಪಾವೂರು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಉಗ್ಗಪ್ಪಪೂಜಾರಿ, ರಿಯಾಝ್ ಗಾಡಿಗದ್ದೆ, ಅಲ್ತಾಫ್ ಅಕ್ಷರನಗರ ಮತ್ತಿತರರು ಉಪಸ್ಥಿತರಿದ್ದರು.







