ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾದ ಮಸ್ಜಿದುನ್ನಬವಿಯ 100 ವರ್ಷ ಹಳೆಯ ಬಲ್ಬ್

ಜಿದ್ದಾ: ಸುಮಾರು 100 ವರ್ಷಗಳಿಗೂ ಹಿಂದೆ ಮಕ್ಕಾದ ಪವಿತ್ರ ಮಸೀದಿಯಲ್ಲಿ ಉಪಯೋಗಿಸಲಾಗುತ್ತಿತ್ತೆನ್ನಲಾದ ವಿದ್ಯುತ್ ಬಲ್ಬ್ ಒಂದರ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಲ್ಬ್ ನಲ್ಲಿ ಬರೆದಿರುವ ಮಾಹಿತಿಯಂತೆ 112 ವರ್ಷಗಳ ಹಿಂದೆ ಅದನ್ನು ಅಳವಡಿಸಿದ ದಿನ ಹಾಗೂ ಅರೇಬಿಯನ್ ಪೆನೆನ್ಸುಲಾದಲ್ಲಿ ವಿದ್ಯುಚ್ಛಕ್ತಿ ಮೊದಲು ಪ್ರವೇಶಿಸಿದ ದಿನ ಒಂದೇ ಆಗಿದೆ.
ಮದೀನಾ ಮುನಿಸಿಪಾಲಿಟಿ ವೆಬ್ ಸೈಟ್ ನಲ್ಲಿರುವ ಮಾಹಿತಿಯಂತೆ ಮಸೀದಿಯ ನಿರ್ಮಾಣ ಹಾಗೂ ವಿಸ್ತರಣೆ ಒಟ್ಟೊಮನ್ ರಾಜ ಸುಲ್ತಾನ್ ಅಬ್ದುಲ್ ಮಜೀದ್ ಕಾಲದಲ್ಲಿ 1265 ಹಾಗೂ 1277 ನಡುವೆ ನಡೆದಿದೆ. ಆ ಸಮಯದಲ್ಲಿ ತೈಲದ ದೀಪಗಳನ್ನು ಉಪಯೋಗಿಸಲಾಗುತ್ತಿದ್ದು ಮಸೀದಿಯಲ್ಲಿ ಪ್ರಥಮ ಬಾರಿಗೆ ವಿದ್ಯುತ್ ಬಲ್ಬನ್ನು ಶಹಬಾನ್ 25, ಹಿ.1326 ರಂದು ಅಳವಡಿಸಲು ಸುಲ್ತಾನ್ ಅಬ್ದುಲ್ ಮಜೀದ್ ಕಾರಣಕರ್ತರಾಗಿದ್ದರು.
ಮಸೀದಿಯ ವಿಸ್ತರಣಾ ಕೆಲಸ ರಾಜ ಅಬ್ದುಲ್ ಅಜೀಜ್ ಅವರ ಕಾಲದಲ್ಲಿ 1370 ಹಾಗೂ 1375 ನಡುವೆ ನಡೆದಿದ್ದರೆ ಈ ಸಮಯ ಇಲ್ಲಿ 2,427 ಬಲ್ಬ್ ಗಳನ್ನು ಅಳವಡಿಸಲಾಯಿತಲ್ಲದೆ ಅದಕ್ಕೆಂದೇ ಒಂದು ವಿಶೇಷ ವಿದ್ಯುತ್ ಸ್ಟೇಶನ್ ಕೂಡ ಸ್ಥಾಪಿಸಲಾಯಿತು.
ಮಸೀದಿಯಲ್ಲಿ ಮೊದಲು ಕಂಗಿನ ಗರಿಗಳನ್ನು ಉಪಯೋಗಿಸಿ ದೀಪಗಳನ್ನು ಬೆಳಗಿಸಲಾಗುತ್ತಿತ್ತೆಂದು `ದಿ ಹೋಲಿ ಮೋಸ್ಕ್ ಆಫ್ ಮದೀನಾ' ಎಂಬ ತಮ್ಮ ಕೃತಿಯಲ್ಲಿ ಮೊಹಮ್ಮದ್ ಅಲ್-ಸಯ್ಯಿದ್ ಅಲ್-ವಕೀಲ್ ಬರೆದಿದ್ದಾರೆ. ಜನರು ಮಸೀದಿಗೆ ತರವೀಹ್ ಪ್ರಾರ್ಥನೆಗೆ ಆಗಮಿಸಿದ್ದಾಗ ಪ್ರಥಮ ಬಾರಿಗೆ ದೀಪವನ್ನು ಕಲೀಫ್ ಓಮರ್ ಬಿನ್ ಅಲ್-ಖತ್ತಬ್ ಹೊತ್ತಿಸಿದ್ದರೆಂದು ಕೆಲ ಇತಿಹಾಸ ತಜ್ಞರು ಹೇಳುತ್ತಾರೆ. ಆ ಕಾಲದಲ್ಲಿ ದೀಪವನ್ನು ತೈಲದಲ್ಲಿ ಹೊತ್ತಿಸಲಾಗಿತ್ತು





