ಸೂಪರ್ 30ರ 28 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆ ಪಾಸ್
ಮತ್ತೆ ಸೂಪರ್ ಹಿಟ್!

ಬಿಹಾರದ ಸೂಪರ್ 30 ಎನ್ನುವ ಉಚಿತ ಕೋಚಿಂಗ್ ಕೇಂದ್ರದ 30 ವಿದ್ಯಾರ್ಥಿಗಳ ಪೈಕಿ 28 ಮಂದಿ ಅತೀ ಸ್ಪರ್ಧಾತ್ಮಕವಾಗಿರುವ ಐಐಟಿ-ಜೆಇಇಯನ್ನು ಈ ವರ್ಷ ಪಾಸ್ ಮಾಡಿದ್ದಾರೆ. ಈ ಸೂಪರ್ 30 ಸೌಲಭ್ಯವನ್ನು ಬಡವರ್ಗದ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ.
ದಿನಗೂಲಿ ಕಾರ್ಮಿಕರ, ಬಡ ರೈತ, ಅಂಗಡಿ ಸಹಾಯಕರು ಮತ್ತು ವಲಸಿಗ ಕಾರ್ಮಿಕರ ಮಕ್ಕಳು ಯಶಸ್ವೀ ಅಭ್ಯರ್ಥಿಗಳಾಗಿದ್ದಾರೆ. 30 ವಿದ್ಯಾರ್ಥಿಗಳ ಪೈಕಿ 28 ಮಂದಿ ಪಾಸಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಜಾಯಿಂಟ್ ಎಂಟ್ರಾನ್ಸ್ ಎಕ್ಸಾಮಿನೇಶನನ್ನು ಈ ವರ್ಷ ಪಾಸಾಗಿರುವುದು ನಮಗೆ ಖುಷಿಯಾಗಿದೆ. ವಿದ್ಯಾರ್ಥಿಗಳು ಮತ್ತು ನಮ್ಮ ಅದ್ಯಾಪಕರ ಕಠಿಣ ಶ್ರಮವೇ ಈ ಫಲಿತಾಂಶಕ್ಕೆ ಕಾರಣ ಎಂದು ಸೂಪರ್ 30 ಸಂಸ್ಥಾಪಕ ನಿರ್ದೇಶಕ ಆನಂದ್ ಕುಮಾರ್ ಹೇಳಿದ್ದಾರೆ.
ಈ ವರ್ಷದ ಐಐಟಿ- ಜೆಇಇ ಫಲಿತಾಂಶವು ಮತ್ತೊಮ್ಮೆ ಸೂಕ್ತ ಅವಕಾಶವಿದ್ದಲ್ಲಿ ಬಡ ಕುಟುಂಬದ ಮಕ್ಕಳೂ ಪ್ರತಿಷ್ಠಿತ ಐಐಟಿಗಳನ್ನು ಪ್ರವೇಶಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಡ ಕುಟುಂಬಗಳಿಂದ ಆರಿಸಿ ಉಚಿತ ಕೋಚಿಂಗ್, ಆಹಾರ ಮತ್ತು ವಸತಿ ಒದಗಿಸುತ್ತದೆ. ಹಾಗೆ ಅವರು ಐಐಟಿ-ಜೆಇಇ ಪಾಸಾಗುವುದರತ್ತಲೇ ಗಮನ ಕೊಡಲಾಗುತ್ತದೆ.
ಸೂಪರ್ 30 ಅನ್ನು ಆನಂದ್ ಅವರು ಮಾಜಿ ಬಿಹಾರ ಡಿಜಿಪಿ ಅಭಯಾನಂದ್ ಜೊತೆಗೂಡಿ ದಶಕದ ಹಿಂದೆ ಆರಂಭಿಸಿದ್ದರು. ನಂತರ ಅಭಯಾನಂದ್ ಸಂಸ್ಥೆಯಿಂದ ದೂರ ಸರಿದಿದ್ದರು. ಸೂಪರ್ 30ಯನ್ನು ಟೈಮ್ ಮ್ಯಾಗಜೀನ್ ಬೆಸ್ಟ್ ಆಫ್ ಏಷ್ಯಾ 2010 ಎಂದು ಆರಿಸಿತ್ತು. ಬಡ ಕುಟುಂಬಗಳ ವಿದ್ಯಾರ್ಥಿಗಳು ಸೂಪರ್ 30 ಪ್ರವೇಶಿಸಲು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು. ನಂತರ ವರ್ಷವಿಡೀ 16 ಗಂಟೆಗಳ ನಿತ್ಯದ ವಿದ್ಯಾಭ್ಯಾಸಕ್ಕೆ ಒಡ್ಡಿಕೊಳ್ಳಬೇಕು.
ಕೃಪೆ: www.ndtv.com





