ಮುಂಡಗೋಡ: ಕಾರು ಢಿಕ್ಕಿಯಾಗಿ ಬಾಲಕಿಗೆ ಗಂಭೀರ ಗಾಯ

ಮುಂಡಗೋಡ, ಜೂ.13: ಕಾರು ಢಿಕ್ಕಿ ಹೊಡೆದು ಬಾಲಕಿ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕಾತೂರ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.
ಗಾಯಗೊಂಡ ಬಾಲಕಿಯನ್ನು ಹಸೀನಾಬಾನು ಮಖ್ಬೂಲಸಾಬ ಮುಲ್ಲಾನವರ ಎಂದು ಗುರುತಿಸಲಾಗಿದೆ.
6ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಬಸ್ ನಿಲ್ದಾಣದ ಪಕ್ಕದ ಬುಕ್‌ಸ್ಟಾಲ್‌ನಿಂದ ಪುಸ್ತಕ ಖರೀದಿಸಿ ಮರಳುತ್ತಿರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಶಿರಸಿಯಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರ್ ಬಾಲಕಿಗೆ ಅಪ್ಪಳಿಸಿದ ಪರಿಣಾಮ ತೀವ್ರ ಗಾಯಗೊಂಡ ಬಾಲಕಿಗೆ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





