ಟೀಮ್ ಇಂಡಿಯಾ ಮಡಿಲಿಗೆ ಏಕದಿನ ಸರಣಿ
ಝಿಂಬಾಬ್ವೆ ವಿರುದ್ಧ ಎರಡನೆ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ

ಹರಾರೆ, ಜೂ.13: ಟೀಮ್ ಇಂಡಿಯಾ ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹರಾರೆ ಸ್ಪೋಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 127 ರನ್‌ಗಳ ಸವಾಲು ಪಡೆದಿದ್ದ ಭಾರತ ಇನ್ನೂ 139 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 129 ರನ್ ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಜಯಿಸಿದೆ.
ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ 33ರನ್, ಕರುಣ್ ನಾಯರ್ 39 ರನ್, ಅಂಬಟಿ ರಾಯುಡು ಔಟಾಗದೆ 41ರನ್, ಮನೀಷ್ ಪಾಂಡೆ ಔಟಾಗದೆ 4ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತು. ಬಳಿಕ ಬ್ಯಾಟಿಂಗ್ ಇನಿಂಗ್ಸ್ ಆರಂಭಿಸಿದ ರಾಹುಲ್ ಮತ್ತು ನಾಯರ್ ಮೊದಲ ವಿಕೆಟ್‌ಗೆ 14.4 ಓವರ್‌ಗಳಲ್ಲಿ 58 ರನ್ ದಾಖಲಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕಳೆದ ಪಂದ್ಯದಲ್ಲಿ ಬೇಗನೆ ಔಟಾಗಿದ್ದ ಕರುಣ್ ನಾಯರ್ ಈ ಪಂದ್ಯದಲ್ಲಿ ಅರಮಭದಲ್ಲಿ ಜೀವದಾನ ಪಡೆದಿದ್ದರು. ಟೆಂಡಾಯ್ ಚಟಾರ ಎಸೆತದಲ್ಲಿ ಔಟಾಗುವ ಅವಕಾಶ ಇದ್ದರೂ ನೋಬಾಲ್ ಕಾರಣದಿಂದಾಗಿ ಜೀವದಾನ ಪಡೆದರು. ಹೀಗಿದ್ದರೂ ಅವರಿಗೆ 39 ರನ್(112ನಿ, 68ಎ, 5ಬೌ) ಗಳಿಸಲಷ್ಟೇ ಸಾಧ್ಯವಾಯಿತು. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಕೆ.ಎಲ್. ರಾಹುಲ್ 14.4ನೆ ಓವರ್‌ನಲ್ಲಿ ಚಿಬಾಬ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕರುಣ್ ನಾಯರ್ ಮತ್ತು ಅಂಬಟಿ ರಾಯುಡು ಬ್ಯಾಟಿಂಗ್ ಮುಂದುವರಿಸಿದರು. ನಾಯರ್ 112 ನಿಮಿಷಗಳ ಬ್ಯಾಟಿಂಗ್‌ನಲ್ಲಿ 68 ಎಸೆತಗಳನ್ನು ಎದುರಿಸಿದರು. 5 ಬೌಂಡರಿಗಳನ್ನು ಒಳಗೊಂಡ 39 ರನ್ ಗಳಿಸಿದರು. ಗೆಲುವಿಗೆ ಇನ್ನೆರಡು ರನ್‌ಗಳ ಆವ್ಯಶಕತೆ ಇದ್ದಾಗ ನಾಯರ್ ಅವರು ಸಿಕಂದರ್ ರಝಾ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು.
ಮನೀಷ್ ಪಾಂಡೆ ಅವರು ಸಿಕಂದರ್ ರಝಾ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ರಾಯುಡು ಈ ಪಂದ್ಯದಲ್ಲೂ 41 ರನ್(112ನಿ, 44ಎ,7ಬೌ) ಗಳಿಸಿದರು.
ಇದಕ್ಕೂ ಮೊದಲು ಝಿಂಬಾಬ್ವೆ ತಂಡ 34.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟಾಗಿತ್ತು.ಭಾರತದ ಬೌಲರ್‌ಗಳ ಪೈಕಿ ಯಜುವೇಂದ್ರ ಚಹಾಲ್ 25ಕ್ಕೆ 3 ವಿಕೆಟ್ ಉಡಾಯಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಲ್ವಿಂದರ್ ಸ್ರಾನ್(17ಕ್ಕೆ 2), ಧವಳ್ ಕುಲಕಣಿ(31ಕ್ಕೆ 2) ಜಸ್‌ಪ್ರೀತ್ ಬುಮ್ರಾ(27ಕ್ಕೆ 1) ಮತ್ತು ಅಕ್ಷರ್ ಪಟೇಲ್ (22ಕ್ಕೆ 1) ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಝಿಂಬಾಭ್ವೆ ಎಡವಿತು.
ಸಿಬಾಂದ ಮಾತ್ರ ಅರ್ಧಶತಕ ಪೂರ್ಣಗೊಳಿಸಿದರು. 84 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಅವರು 69 ಎಸೆತಗಳನ್ನು ಎದುರಿಸಿದರು. 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 53 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಚಿಬಾಬ (21ರನ್), ಸಿಕಂದರ್ ರಝಾ (16) ಎರಡಂಕೆಯ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರು ವಿಫಲರಾದರು.
ಸ್ಕೋರ್ ಪಟ್ಟಿ
ಝಿಂಬಾಬ್ವೆ: 34.3 ಓವರ್‌ಗಳಲ್ಲಿ ಆಲೌಟ್ 126
ಮಸಕಝ ಸಿ ಬುಮ್ರಾ ಬಿ ಸ್ರಾನ್09
ಚಿಭಾಭಾ ಎಲ್‌ಬಿಡಬ್ಲು ಬಿ ಕುಲಕರ್ಣಿ21
ಮೂರ್ ಎಲ್‌ಬಿಡಬ್ಲು ಸ್ರಾನ್ 01
ಸಿಬಾಂಡ ಸಿ ಜಾಧವ್ ಬಿ ಚಾಹಲ್53
ಸಿಕಂದರ್ ರಝಾ ಸಿ ಜಾಧವ್ ಬಿ ಚಾಹಲ್16
ಚಿಗುಂಬುರ ಎಲ್‌ಬಿಡಬ್ಲು ಬಿ ಚಾಹಲ್00
ಮುತುಂಬಮಿ ಸಿ ಧೋನಿ ಬಿ ಬುಮ್ರಾ02
ಕ್ರೀಮರ್ ಔಟಾಗದೆ07
ಚಟಾರ ಬಿ ಕುಲಕರ್ಣಿ02
ಮುಝರಬನಿ ಎಲ್‌ಬಿಡಬ್ಲು ಬಿ ಪಟೇಲ್05
ವಿಲಿಯಮ್ಸ್ ಗಾಯಾಳು ಗೈರು-
ಇತರ 10
ವಿಕೆಟ್ ಪತನ: 1-19, 2-21, 3-39, 4-106, 5-106, 6-107, 7-112, 8-115, 9-126
ಬೌಲಿಂಗ್ ವಿವರ:
ಸ್ರಾನ್ 6.0-1-17-2
ಧವಳ್ ಕುಲಕರ್ಣಿ 9.0-1-31-2
ಬುಮ್ರಾ 6.0-0-27-1
ಅಕ್ಷರ್ ಪಟೇಲ್ 7.3-0-22-1
ಚಾಹಲ್ 6.0-2-25-3
ಭಾರತ 26.3 ಓವರ್‌ಗಳಲ್ಲಿ 129/2
ಕೆಎಲ್ ರಾಹುಲ್ ಬಿ ಚಿಭಾಬ33
ಕರುಣ್ ನಾಯರ್ ಎಲ್‌ಬಿಡಬ್ಲು ಬಿ ರಝಾ 39
ರಾಯುಡು ಔಟಾಗದೆ 41
ಮನೀಷ್ ಪಾಂಡೆ ಔಟಾಗದೆ04
ಇತರ 12
ವಿಕೆಟ್ ಪತನ: 1-58, 2-125.
ಬೌಲಿಂಗ್ ವಿವರ:
ಚಟಾರ 8.0-1-40-0
ಮುಝರಬನಿ 3.0-1-13-0
ಚಿಭಾಭಾ 9.0-1-31-1
ಕ್ರೀಮರ್ 3.0-0-17-0
ಚಿಗುಂಬುರ 2.0-0-20-0
ಸಿಕಂದರ್ ರಝಾ 1.5-0-07-1







