ದೇರಳಕಟ್ಟೆ: ವಸತಿಗೃಹದಲ್ಲಿ ಅನ್ಯಕೋಮಿನ ಜೋಡಿ ವದಂತಿ
ಕೊಣಾಜೆ, ಜೂ. 13: ದೇರಳಕಟ್ಟೆಯ ವಸತಿಗೃಹವೊಂದರಲ್ಲಿ ಅನ್ಯಕೋಮಿನ ಜೋಡಿಯೊಂದು ಇರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರು ಪೊಲೀಸರ ಸಹಾಯದಿಂದ ಪರಿಶೀಲನೆ ನಡೆಸಿದಾಗ ವಸತಿಗೃಹದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಜೋಡಿಯು ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಪೊಲೀಸರು ಜೋಡಿಗೆ ಬುದ್ಧಿ ಹೇಳಿ ಕಳುಹಿಸಿದ್ದು, ಸ್ಥಳದಲ್ಲಿ ಇನ್ನೊಂದು ಕೋಮಿನ ಜನ ಜಮಾವಣೆಗೊಂಡು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ವೇಳೆ ಅಂಗಡಿಯ ಮುಂದೆ ಯವಕನೋರ್ವನಿಗೆ ಹೋಗುವಂತೆ ಕೊಣಾಜೆ ಠಾಣಾ ಪಿಎಸ್‌ಐ ಅವರು ಸೂಚಿಸಿದ್ದು ಇದಕ್ಕೆ ಕ್ಯಾರೇ ಎನ್ನದ ಆತ ಅನುಚಿತವಾಗಿ ವರ್ತಿಸಿದುದರ ವಿರುದ್ಧ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದ್ದಾರೆ.
Next Story





.jpg.jpg)

