Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಲಸಿಗರನ್ನು ಸಂತೈಸುವ ಧಾವಂತದಲ್ಲಿ...

ವಲಸಿಗರನ್ನು ಸಂತೈಸುವ ಧಾವಂತದಲ್ಲಿ ಸ್ಥಳೀಯರನ್ನು ಮರೆಯದಿರಿ

ರಮಾನಂದ ಶರ್ಮಾರಮಾನಂದ ಶರ್ಮಾ13 Jun 2016 11:20 PM IST
share

ಕರ್ನಾಟಕದಲ್ಲಿ ಸ್ಥಳೀಯರ ಮೇಲೆ ವಲಸಿಗ ವಿದ್ಯಾರ್ಥಿಗಳ ಹಲ್ಲೆ ಮತ್ತು ಕಿರುಕುಳ ಹಾಗೂ ಅದಕ್ಕೆ ಪ್ರತಿಯಾಗಿ ನಡೆಯುವ ಪ್ರತಿಕಾರ ಘಟನೆಗಳು ಇತ್ತೀಚೆಗೆ ತೀರಾ ಸಾಮಾನ್ಯವಾಗುತ್ತಿದ್ದು, ಸರಕಾರ ಈ ವಿಷಯವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ.
   ವಿಷಾದವೆಂದರೆ, ಇಂತಹ ಪ್ರಕರಣಗಳು ವರದಿಯಾದಾಗ, ಮುಂಬೈ ಮತ್ತು ದಿಲ್ಲಿ ಮೂಲದ ಕೆಲವು ರಾಷ್ಟ್ರೀಯ ವಾಹಿನಿಗಳು, ಎಂದಿನಂತೆ ಹೊರಗಿನವರ ಧ್ವನಿಯಾಗಿ, ಕನ್ನಡಿಗರನ್ನು ಭಾಷಾ ದುರಭಿಮಾನಿಗಳು ಮತ್ತು ಜನಾಂಗೀಯ ದ್ವೇಷಿಗಳು ಎಂದು ಸದಾ ಬಿಂಬಿಸುತ್ತಿವೆ. ವಲಸಿಗರ ರಕ್ಷಣೆಯ ಸಂಪೂರ್ಣ ಹೊಣೆ ತಮ್ಮ ಮೇಲೆ ಇರುವಂತೆ, ವರದಿ ಬಂದ ತಕ್ಷಣ, ಪ್ರಕರಣದ ಪೂರ್ವಾಪರ ಪಡೆಯದೆ ಕನ್ನಡಿಗರನ್ನು ಖಳನಾಯಕರನ್ನಾಗಿ, ಭಾಷಾಂಧರನ್ನಾಗಿ ಮತ್ತು ಜನಾಂಗೀಯ ದ್ವೇಷಿಗಳಾಗಿ ಬಿಂಬಿಸಿ, ಇದೊಂದು ರಾಷ್ಟ್ರೀಯ ದುರಂತ ಎನ್ನುವ ಧಾಟಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇವರು ನಡೆಸುವ ಚರ್ಚೆಗಳಲ್ಲಿ ಕೆಲವು ಪೂರ್ವಾಗ್ರಹ ಪೀಡಿತ ಚಿಂತಕರು, ರಾಜಕಾರಣಿಗಳು ತುಂಬಿರುತ್ತಿದ್ದು, ಕನ್ನಡಿಗರನ್ನು ಗುರಿ ಮಾಡಲಾಗುತ್ತದೆ. ಈ ಚರ್ಚೆಯಲ್ಲಿ ಕನ್ನಡ ಪರ ಧ್ವನಿ ಎತ್ತುವವರು ಯಾರೂ ಇರುವುದಿಲ್ಲ ಮತ್ತು ಇದ್ದರೂ ಏಕಪಕ್ಷೀಯ ಚರ್ಚೆಯಲ್ಲಿ ಇವರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ. ಕರ್ನಾಟಕದ ಯಾವ ಸಮಸ್ಯೆಗಳಿಗೂ ತಕ್ಷಣ ಸ್ಪಂದಿಸದ ದಿಲ್ಲಿ ಸರಕಾರ ಇಂತಹ ಪ್ರಕರಣಗಳಿಗೆ ಕೂಡಲೇ ಪ್ರತಿಕ್ರಿಯಿಸುತ್ತದೆ. ತಾಂಜಾನಿಯಾ ವಿದ್ಯಾರ್ಥಿಗಳ ಮೇಲೆ ಹಲ್ಲೆಯ ಆಪಾದನೆ ಮತ್ತು ನಂತರದ ಬೆಳವಣಿಗೆ ಕನ್ನಡಿಗರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗಲೇ, ಮೈಸೂರಿನಲ್ಲಿ ಸೂಡಾನ್ ದೇಶದ ವಿದ್ಯಾರ್ಥಿಗಳು ಹಿರಿಯ ವೈದ್ಯ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದು, ಪ್ರಜ್ಞಾವಂತರ ಕನ್ನಡಿಗರನ್ನು ಕಂಗೆಡಿಸಿದೆ.
       ಇದಕ್ಕೆ ಕಾರಣ ಏನು? ಪಬ್ ಸಿಟಿ ಮತ್ತು ಜಾಗತಿಕ ಸಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು, ಸ್ವಚ್ಛಂದ ಜೀವನಕ್ಕೆ ಕೂಡಾ ಹೇಳಿ ಮಾಡಿಸಿದ ಸ್ಥಳ ಎನ್ನುವ ಅನುಭವಿಗಳ ಟೀಕೆಯಲ್ಲಿ ತಥ್ಯವಿಲ್ಲದಿಲ್ಲ.ಇಲ್ಲಿಯ ಕಾಸ್ಮೋಪೊಲಿಟನ್ ಸಂಸ್ಕೃತಿ ಮತ್ತು ಆಹ್ಲಾದಕರ ಹವಾಮಾನಕ್ಕೆ ಮನಸೋತು, ಇಲ್ಲಿಗೆ ಬಂದವರು ಯಾರೂ ತಿರುಗಿ ಹೋಗುವ ಮನಸ್ಸು ಮಾಡುವುದಿಲ್ಲ. ನಾಲ್ಕಾರು ವರ್ಷಗಳ ಕೋರ್ಸಿಗಾಗಿ ಬಂದು ದಶಕಗಳ ಕಾಲ ಓದುವವರೂ ಇದ್ದಾರೆ. ಇತ್ತೀಚೆಗೆ 14 ವರ್ಷಗಳಿಂದ ಬಿಡಿಎಸ್ ಓದುತ್ತಿರುವ ವಿದ್ಯಾರ್ಥಿಯ ವೀಸಾ ವಿಸ್ತರಣೆ ಪ್ರಕರಣ ನ್ಯಾಯಾಲಯದಲ್ಲಿ ಪ್ರಸ್ತಾಪವಾದಾಗ, ನ್ಯಾಯಾಧೀಶರು ಅಚ್ಚರಿ ಪಟ್ಟಿದ್ದರು. ಭಾರತವು ಶೈಕ್ಷಣಿಕ ಸೌಲಭ್ಯದ ದೃಷ್ಟಿಯಲ್ಲಿ ಅಭಿವೃದ್ದಿ ಹೊಂದಿದ ದೇಶಗಳಿಗೆ ಹೋಲಿಸುವಂತಿದ್ದು, ತಾಂಜಾನಿಯಾ, ನೈಜೀರಿಯಾ ಸೂಡಾನ್ ಮುಂತಾದ ಆಫ್ರಿಕನ್ ದೇಶಗಳಿಂದ ವಿದ್ಯಾರ್ಥಿಗಳು ಹಿಂಡು-ಹಿಂಡಾಗಿ ಬರುತ್ತಿದ್ದಾರೆ. ಹಲವರು ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಾಯ್ನಿಡಿಗೆ ಮರಳುತ್ತಾರೆ. ಓದಲು ಬಂದ ಇಂತಹ ವಲಸಿಗ ಹುಡುಗನೊಬ್ಬ ಕನ್ನಡವನ್ನಲ್ಲದೆ, ಕನ್ನಡ ಸಂಗೀತ ಕಲಿತು, ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರವೇಶಿಸಿ, ಕನ್ನಡ ವಾಹಿನಿಯವರು ನಡೆಸುವ ಸಂಗೀತ ಸ್ಪರ್ಧೆಯಲ್ಲಿ ಕನ್ನಡಿಗರಿಗೇ ಚಾಲೆಂಜ್ ಕೊಡುವಷ್ಟು ಸಾಧನೆ ತೋರುತ್ತಿದ್ದಾನೆ. ಆದರೆ, ಕೆಲವರು ದುಶ್ಚಟಗಳ ದಾಸರಾಗಿ ಕುಡಿತ, ಹೊಡೆದಾಟ, ಮಾದಕ ವಸ್ತುಗಳ ಸೇವನೆ ಅಲ್ಲದೆ ಕುಡಿದು ಅಪಾಯಕಾರಿಯಾಗಿ ವಾಹನ ಚಲಾಯಿಸಿ ಅವಘಡಗಳಿಗೆ ಕಾರಣವಾಗುವುದೂ ಇದೆ. ಕಾಳರಾತ್ರಿಯ ಅವರ ಚಟುವಟಿಕೆಗಳನ್ನು ನೋಡಿ ಸ್ಥಳೀಯ ಜನತೆ ರೋಸಿ ಹೋಗಿದ್ದಾರೆ. ಪಬ್, ಬಾರ್, ಹೊಟೇಲ್, ಮಾಲ್, ಮಲ್ಟಿಪ್ಲೆಕ್ಸ್ಸ್ ಅಲ್ಲದೆ ಟ್ರಾಫಿಕ್ ಪೊಲೀಸರೊಂದಿಗೂ ಅವರ ತಗಾದೆ, ಜಗಳ, ಪುಂಡಾಟಿಕೆ, ಹೊಡೆದಾಟ ಇತ್ತೀಚೆಗೆ ತೀರಾ ಮಾಮೂಲಾಗಿ ಹೋಗಿದೆ. ತಾವು ಬದುಕುತ್ತಿರುವ ಸ್ಥಳದ ಕಾನೂನನ್ನು, ಸಂಸ್ಕೃತಿಯನ್ನು, ನೀತಿ-ನಿಯಮಾವಳಿಯನ್ನು ಪಾಲಿಸಬೇಕು ಎನ್ನುವ ಕನಿಷ್ಠ ಪರಿಜ್ಞಾನವೂ ಅವರಲ್ಲಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಮನೆ ಮಾಲಕರು ಇಂತಹ ವಲಸಿಗರಿಗೆ ಮನೆ ಬಾಡಿಗೆಗೆ ಕೊಡಲೂ ಹಿಂಜರಿಯುತ್ತಿದ್ದಾರೆ. ತಮ್ಮ ನಿತ್ಯ ಪುಂಡಾಟಿಕೆಯಿಂದ ಅವರು ಸ್ಥಳೀಯರ ಅನುಕಂಪವನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಾಗಿ ಬಂದ ಹಲವರು ಬೇರೆ ದಂಧೆಗಳಲ್ಲಿ ತೊಡಗಿಕೊಂಡಿದ್ದಾರೆ. ಆಫ್ರಿಕನ್ ಲಾಟರಿ ಹೆಸರಿನಲ್ಲಿ ಲಕ್ಷಾಂತರ ಅಮಾಯಕರನ್ನು ಬೀದಿಗೆ ತಳ್ಳಿದರೂ ಅವರನ್ನು ಕೇಳುವವರಿಲ್ಲ.
      ವರ್ಷಗಳ ಹಿಂದೆೆ ಈಶಾನ್ಯ ಭಾರತದ ವಿದ್ಯಾರ್ಥಿಯ ಕೊಲೆಯಾದಾಗ ಕೂಡಾ ಕನ್ನಡಿಗರನ್ನು ಭಾಷಾಂಧರೆಂದು ಜರಿಯಲಾಗಿತ್ತು. ಕೇಂದ್ರ ಗೃಹಮಂತ್ರಿಗಳು ತಮ್ಮ ಕಾರ್ಯಬಾಹುಳ್ಯದ ನಡುವೆಯೂ ಅವಕಾಶಮಾಡಿಕೊಂಡು ಕರ್ನಾಟಕ ಸರಕಾರಕ್ಕೆ ಫೋನಾಯಿಸಿ ವಿಚಾರಿಸಿದ್ದರು. ನಂತರ ಸಾವಿರಾರು ಜನರು ಗುಳೇ ಹೋಗಿದ್ದರು. ರಾಜ್ಯದ ಕೆಲವು ರಾಜಕಾರಣಿಗಳು ರೈಲು ನಿಲ್ದಾಣಕ್ಕೆ ಹೋಗಿ ‘‘ಹೋಗದಿರಿ’’ ಎಂದು ಬೇಡಿಕೊಂಡಿದ್ದರು ಮತ್ತು ಈಶಾನ್ಯ ರಾಜ್ಯಗಳಿಗೆ ಹೋಗಿ ವಾಪಸ್ಸು ಬರುವಂತೆ ಕೇಳಿಕೊಂಡಿದ್ದರು. ಈಶಾನ್ಯ ರಾಜ್ಯಗಳಲ್ಲ್ಲೂ ಕರ್ನಾಟಕದ ವಿರುದ್ಧ ಪ್ರತಿಭಟನೆ ಮಾಡಿದ್ದರು ಮತ್ತು ಕರ್ನಾಟಕದ ವಸ್ತುಗಳನ್ನು ಬಹಿಷ್ಕರಿಸಲು ಕರೆಕೊಟ್ಟಿದ್ದರು. ಒಂದು ತೀರಾ ಸಾಮಾನ್ಯವಾದ ತ್ರಿಕೋನ ಪ್ರೇಮದ ವ್ಯವಹಾರ ಅಥವಾ ಬಾರ್-ಪಬ್ ಗಲಾಟೆಯ ಹಿನ್ನೆಲೆಯಲ್ಲಿ ನಡೆದ ಕೊಲೆಗೆ ಜನಾಂಗೀಯ ದ್ವೇಷದ ಬಣ್ಣವನ್ನು ಹಚ್ಚಿ ಕನ್ನಡಿಗರ ಮಾನವನ್ನು ಹರಾಜು ಹಾಕಲಾಗಿತ್ತು. ವಾಸ್ತವವಾಗಿ ಒಂದು ತಿಕ್ಕಾಟಕ್ಕೆ ನಡೆದ ಪ್ರತಿ ತಿಕ್ಕಾಟಕ್ಕಿಂತ ಇನ್ನು ಯಾವ ವಿಶೇಷವೂ ಈ ಪ್ರಕರಣದಲ್ಲಿ ಇರಲಿಲ್ಲ. ಆದರೆ ಆರು ಕೋಟಿ ಕನ್ನಡಿಗರ ಮಾನ ಹರಾಜು ಆಗುವಾಗಲೂ ಪ್ರತಿಭಟಿಸುವ ಧುರೀಣರು ನಮ್ಮಲ್ಲಿ ಕಾಣುತ್ತಿಲ್ಲ.
   ಕಾಸ್ಮೋಪೊಲಿಟನ್ ಹೆಸರಿನಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿ ನಶಿಸುತ್ತಿದ್ದರೂ, ಹೊರಗಿನವರನ್ನು ಬರಮಾಡಿಕೊಳ್ಳುವ ಸಂಸ್ಕೃತಿ ನಮ್ಮದು. ಹೊರಗಿನಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರೂ ಸಹಿಸಿಕೊಳ್ಳುವವರು ನಾವು. ನಮ್ಮತನವನ್ನು ಸಂಪೂರ್ಣವಾಗಿ ಕಳೆದುಕೊಂಡು ಇಷ್ಟು ಉದಾರತೆ ತೋರಿಸಿದರೂ, ಕನ್ನಡಿಗರನ್ನು ಜನಾಂಗೀಯ ದ್ವೆೇಷಿಗಳು ಎಂದು ಕರೆಯುವುದು ತೀರಾ ವಿಷಾದಕರ. ಒಟ್ಟಿನಲ್ಲಿ ಕನ್ನಡನಾಡಿನಲ್ಲಿ ಕನ್ನಡಿಗರೇ ಪರಕೀಯರು ಮತ್ತು ಪರದೇಶಿಗಳು ಕೂಡಾ.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X