Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಿಮ್ಮ ಕುಲದ ನೆಲೆ ಏನೆಂದು ಬಲ್ಲಿರಾ?

ನಿಮ್ಮ ಕುಲದ ನೆಲೆ ಏನೆಂದು ಬಲ್ಲಿರಾ?

ವೀರಪ್ಪಡಿ. ಎನ್.  ಮಡಿಕೇರಿವೀರಪ್ಪಡಿ. ಎನ್. ಮಡಿಕೇರಿ13 Jun 2016 11:21 PM IST
share

ಮಾನ್ಯರೆ,
ಕೇಂದ್ರೀಯ ಫಿಲ್ಮ್ ಸೆನ್ಸಾರ್ ಬೋರ್ಡ್ ಸಹಾ ಪಕ್ಕಾ ಕೇಸರೀಕರಣ ಗೊಂಡಿದೆ ಎಂಬುದಕ್ಕೆ ಸಾಕ್ಷಿ ‘ಉಡ್ತಾ ಪಂಜಾಬ್’ ಎಂಬ ಹಿಂದಿ ಚಲನಚಿತ್ರಕ್ಕೆ ಎಂಬತ್ತಕ್ಕೂ ಹೆಚ್ಚು ಕಟ್ ಮಾಡಬೇಕೆಂದು ಸೂಚಿಸಿ ಕೊನೆಗೆ ಬಾಂಬೆ ಹೈಕೋರ್ಟಿನಿಂದ ಸೆನ್ಸಾರ್ ಬೋರ್ಡ್ ಇಕ್ಕಿಸಿಕೊಂಡಿದ್ದು. ಸೆನ್ಸಾರ್ ಬೋರ್ಡಿನ ಅಧ್ಯಕ್ಷ ಪೆಹ್ಲಾಜ್ ನಿಹಲಾನಿಯವರಿಗೆ ಯಾರೋ ಪತ್ರಕರ್ತ ಇದರ ಹಿಂದಿರುವ ರಾಜಕೀಯದ ಬಗ್ಗೆ ಪ್ರಶ್ನೆ ಕೇಳಿದಾಗ, ನಿಹಲಾನಿ ಊರಿದೆದ್ದು ‘‘ಹೌದು ನಾನು ಮೋದಿ ಭಕ್ತ ಆದರೆ ನಿಮ್ಮಂತೆ ಇಟಲಿಯನ್ನರ ಕುಲದವನಲ್ಲ’’ ಎಂದು ಬಿರುನುಡಿದರೆಂದು ವರದಿಯಾಗಿದೆ. ಆದರೆ ತಾವು ಇಟಲಿಯನ್ನರ ಕುಲದವನಲ್ಲ ಎಂದು ಅವರು ಹೇಳಿರುವ ಬಗ್ಗೆ ಜಿಜ್ಞಾಸೆ ನಡೆಯಬೇಕಿದೆ.
  
ಹಿಂದಿನ 2,200 ವರ್ಷಗಳಿಂದ ಭಾರತದ ಮೇಲೆ ವಿದೇಶಿ ದಾಳಿ ನಡೆದಿದ್ದು ವಾಯವ್ಯ ಭಾರತದ ಮುಖಾಂತರವೇ. ಕೇವಲ ಇಂಗ್ಲಿಷರು ಮತ್ತು ಪೋರ್ಚುಗೀಸರು ಮಾತ್ರ ಸಮುದ್ರ ಮಾರ್ಗವಾಗಿ ದಾಳಿ ಮಾಡಿದ್ದು. 2,200 ವರ್ಷಗಳ ಹಿಂದೆ ಗ್ರೀಕ್ ದೊರೆ ಅಲೆಕ್ಸಾಂಡರ್ ಐದು ಲಕ್ಷ ಸೈನಿಕರೊಂದಿಗೆ ವಾಯವ್ಯ ಭಾರತಕ್ಕೆ ಬಂದಿದ್ದ. ತುರ್ಕಿ, ಪರ್ಷಿಯನ್, ಅಫ್ಘಾನಿ ದಾಳಿಕೋರರೂ ವಾಯವ್ಯ ಭಾರತದ ಖೈಬರ್ ಕಣಿವೆ ಮುಖಾಂತರವೇ ಭಾರತಕ್ಕೆ ಬಂದಿದ್ದು. ಆಗ ಈ ವಿದೇಶಿ ಸೈನಿಕರಿಗೆ ಮೊಟ್ಟ ಮೊದಲು ಬಲಿಯಾಗುತ್ತಿದ್ದವರು ಪಂಜಾಬ್, ಸಿಂಧ್, ಹರ್ಯಾಣ, ರಾಜಸ್ಥಾನ ಮತ್ತು ಕಾಶ್ಮೀರದ ಜನರು. ಧರ್ಮಯುದ್ಧ ಎಂಬುದು ಕೇವಲ ಗ್ರಂಥಗಳಿಗೆ ಮಾತ್ರ ಮೀಸಲಾಗಿತ್ತು. ಗೆದ್ದವರು ವಿದೇಶಿ ಸೈನಿಕರಾಗಲಿ ಅಥವಾ ಭಾರತೀಯ ಸೈನಿಕರಾಗಲೀ ಅವರು ಮಾಡುತ್ತಿದ್ದುದು ಎರಡೇ ಕೆಲಸ. ಮೊದಲನೆಯದು ಗೆದ್ದ ಪ್ರದೇಶದ ಸಾಮಾನ್ಯ ಜನರ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದುದು, ಹಾಗೂ ಎರಡನೆಯ ಘನ ಕೆಲಸವೆಂದರೆ ಗೆದ್ದ ಪ್ರದೇಶದ ತರುಣಿಯರ ಮೇಲೆ ಬಲಾತ್ಕಾರ ಮಾಡುವುದು. ಮೇಲ್ಜಾತಿ ಕೆಳಜಾತಿಯೆಂಬ ಭೇದ ಮಾಡದೆ ಗೆದ್ದ ಸೈನಿಕರು ಸ್ಥಳೀಯ ಮಹಿಳೆಯರ ಬಲಾತ್ಕಾರ ಮಾಡುತ್ತಿದ್ದರು. ಹೆಚ್ಚು ಸಂಪತ್ತು ಸಂಗ್ರಹಿಸಿದ್ದ ಮೇಲ್ಜಾತಿಯ ಶ್ರೀಮಂತ ಹೆಂಗಸರೇ ಇಂತಹ ಗೆದ್ದ ವಿದೇಶಿ ಸೈನಿಕರ ಕಾಮದಾಹಕ್ಕೆ ಬಲಿಯಾಗುತ್ತಿದ್ದುದು. ಇದು ಆಗಿನ ಯುದ್ಧನಿರತ ಸಮಾಜದಲ್ಲಿ ಸಾಮಾನ್ಯ ವಿಷಯವಾಗಿದ್ದರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರು ಆತ್ಮಹತ್ಯೆ ಅಥವಾ ಸತಿ ಹೋಗುವಂತಹ ಘೋರ ಕಾರ್ಯ ಮಾಡುತ್ತಿರಲಿಲ್ಲ. ಅವರು ಆ ವಿದೇಶಿ ಸೈನಿಕನ ವೀರ್ಯದಿಂದ ಹುಟ್ಟಿದ ಮಗುವನ್ನು ಹೆತ್ತು ಸಾಕಿ ಕುಟುಂಬದೊಳಗೆಯೇ ಸೇರಿಸಿಕೊಳ್ಳುವ ಪದ್ಧ್ದತಿ ಬೆಳೆಸಿಕೊಂಡಿದ್ದರು. ಆಗಾಗ ಯುದ್ಧ ನಡೆಯುತ್ತಿದ್ದ ಆಗಿನ ಸಮಾಜದಲ್ಲಿ ಶೀಲ ನೀತಿ ಪಾತಿವ್ರತ್ಯಕ್ಕೆ ಪ್ರಾಮುಖ್ಯತೆಯೇ ಇರಲಿಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳುವುದು ಆಗಿನ ಸ್ಥಿತಿಯಲ್ಲಿ ಗಂಡಸು ಹೆಂಗಸರಿಬ್ಬರಿಗೂ ಅನಿವಾರ್ಯವಾಗಿತ್ತು. ಅಲೆಕ್ಸಾಂಡರನ ಐದು ಲಕ್ಷ ಸೈನಿಕರು ಆರು ತಿಂಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಬೀಡು ಬಿಟ್ಟಿದ್ದಾಗ ಆ ಸೈನಿಕರೇನು ಕೈಕಟ್ಟಿ ಕುಳಿತಿರಲಿಲ್ಲ. ಅವರು ಸುತ್ತಲಿನ ಪ್ರದೇಶಗಳಿಗೆ ಹೋಗಿ ಲೂಟಿ, ಅತ್ಯಾಚಾರ ಮಾಡುತ್ತಲೇ ಇದ್ದರು. ತುರ್ಕಿ, ಪರ್ಷಿಯನ್, ಅಫ್ಘಾನಿ ಸೈನಿಕರೂ ಕೇವಲ ಗಂಡಸರೇ ಬಂದಿದ್ದರಿಂದ ಅವರೂ ಇಂತಹ ಕೆಲಸವನ್ನೇ ಮಾಡುತ್ತಿದ್ದುದು ಪ್ರಕೃತಿ ಸಹಜವಾಗಿತ್ತು. ಹೀಗೆ ವಿದೇಶಿ ಸೈನಿಕರಿಗೆ ಹುಟ್ಟಿದ ವಿದೇಶೀಯ ಮೈಬಣ್ಣ ಮತ್ತು ಉತ್ತಮ ದೈಹಿಕ ಸೌಂದರ್ಯವಿದ್ದ ಮಕ್ಕಳೇ ಮುಂದೆ ಈಗಿನ ಪಂಜಾಬ್, ಸಿಂಧ್, ಹರ್ಯಾಣ, ಕಾಶ್ಮೀರ ಹಾಗೂ ಉತ್ತರ ರಾಜಸ್ಥಾನದ ಜನರ ಪೂರ್ವಜರಾದರು. ಹಾಗಾಗಿ ಈಗ ಹಿಂದಿ ಚಿತ್ರರಂಗದಲ್ಲಿ ಕೇವಲ ತಮ್ಮ ದೈಹಿಕ ಸೌಂದರ್ಯದ ಬಲದಿಂದ ಉನ್ನತ ಸ್ಥಾನಕ್ಕೇರಿರುವ ಪಂಜಾಬಿ, ಸಿಂಧಿ, ಹರ್ಯಾಣದ ಹುಡುಗ ಹುಡುಗಿಯರು ಆ ತಮ್ಮ ಪೂರ್ವಿಕರಾದ ವಿದೇಶಿ ಅತ್ಯಾಚಾರಿ ಸೈನಿಕರ ಕುಲದವರೇ.

ನಾನು ಉತ್ತರ ಪ್ರದೇಶದ ಕಾನ್ಪುರ-ಲಕ್ನೋ ನಗರಗಳಲ್ಲಿ ಉದ್ಯೋಗದಲ್ಲಿ ಇದ್ದಾಗ ಅಲ್ಲಿಯ ಕಚೇರಿಗಳಲ್ಲಿ ಉತ್ತರ ಪ್ರದೇಶೀಯರ ಮತ್ತು ಪಂಜಾಬಿಗಳ ಎರಡು ಗುಂಪು ಇರುತ್ತಿತ್ತು ಹಾಗೂ ಅವರಲ್ಲಿ ವೈಮನಸ್ಸು ಉಂಟಾದಾಗ ಉತ್ತರ ಪ್ರದೇಶೀಯರು ಪಂಜಾಬಿ-ಸಿಂಧಿಗಳನ್ನು ‘‘ಸಿಕಂದರ್ ಕೇ ನಾಜಾಯಝ್ ಔಲಾದ್’’ (ಅಲೆಕ್ಸಾಂಡರನ ಅನೈತಿಕ ಮಕ್ಕಳು) ಎಂದೇ ಹೀಯಾಳಿಸುತ್ತಿದ್ದರು. ಈಗಿನ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪೆಹ್ಲಾಜ್ ನಿಹಲಾನಿ ಸಿಂಧಿಯಾಗಿದ್ದು ತಾನು ಇಟಲಿಯನ್ನರ (ರೋಮನ್ನರ) ಕುಲದವನಲ್ಲ ಎಂದು ಘೋಷಿಸಿದ್ದು ಸರಿಯೋ ತಪ್ಪೋ ಎಂದು ಅವರ ಡಿಎನ್‌ಎ ಪರಿಶೀಲಿಸಿದರೆ ತಿಳಿಯುತ್ತದೆ. ಯಾವುದೇ ಮೇಲ್ಜಾತಿ ಕುಟುಂಬವೂ ಶುದ್ಧ ರಕ್ತ ಹೊಂದಿಲ್ಲ. ಗೋತ್ರ, ವಂಶವೃಕ್ಷ, ಶುದ್ಧ ರಕ್ತ (ಬ್ಲ್ಯೂ ಬ್ಲಡ್) ಎಂಬುದೆಲ್ಲಾ ಬರೀ ಕಾಲ್ಪನಿಕ ನಂಬಿಕೆ ಅಷ್ಟೇ. ರಾಹುಲ್ ಗಾಂಧಿಯವರನ್ನು ಇಟಲಿಯನ್ ಕುಲದವ ಎನ್ನುವ ಸಂಘಿಗಳು ಗಮನಿಸ ಬೇಕಾದುದೇನೆಂದರೆ ಸ್ವತಃ ತಮ್ಮ ಹಿರಿಯರೂ ರೋಮನ್-ಗ್ರೀಕ್-ಪರ್ಷಿಯನ್-ತುರ್ಕಿ ಪಠಾಣ್ ವೀರ್ಯದವರೇ ಆಗಿರುವ ಸಾಧ್ಯತೆ ಹೆಚ್ಚು. 

share
ವೀರಪ್ಪಡಿ. ಎನ್.  ಮಡಿಕೇರಿ
ವೀರಪ್ಪಡಿ. ಎನ್. ಮಡಿಕೇರಿ
Next Story
X