ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲಾ ಸ್ಥಾಪಕರ ದಿನಾಚರಣೆ

ಮೂಡುಬಿದಿರೆ, ಜೂ.11: ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲಾ ಸ್ಥಾಪಕರ ದಿನಾಚರಣೆಯು ಇತ್ತೀಚೆಗೆ ಜರಗಿತು.
ಶಾಲಾಡಳಿತ ಮಂಡಳಿ ಅಧ್ಯಕ್ಷ ಪಿ. ರಾಮನಾಥ ಭಟ್ ಅಧ್ಯಕ್ಷತೆ ವಹಿಸಿ ಶಾಲಾ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಶಾಲಾಡಳಿತ ಮಂಡಳಿ ಸದಸ್ಯ ಪಿ.ಎಸ್.ಭಟ್ ‘ರಾಜೇಂದ್ರ’ ಮಕ್ಕಳ ಹಸ್ತಪತ್ರಿಕೆಯನ್ನು ಅನಾವರಣಗೊಳಿಸಿದರು.
ಶಾಲಾ ಹಳೆವಿದ್ಯಾರ್ಥಿಗಳಾದ ಉದ್ಯಮಿ ಅಶೋಕ ಮಲ್ಯ, ಸೋಹಂ ಪವರ್ ಪ್ರೋಜೆಕ್ಟ್‌ನ ಸ. ಪ್ರಬಂಧಕ ರತ್ನಾಕರ ಹೆಗಡೆಕಟ್ಟೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ , ಇಂಜಿನಿಯರ್ ರವಿಪ್ರಸಾದ್ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯ, ಶಾಲಾಡಳಿತ ಮಂಡಳಿ ಸದಸ್ಯ ನಾರಾಯಣ ಪಿ. ಪ್ರಸ್ತಾವನೆಗೈದರು. ನಿವೃತ್ತ ಮುಖ್ಯೋಪಾಧ್ಯಾಯ, ಆಡಳಿತ ಮಂಡಳಿ ಸದಸ್ಯ ಬಾಹುಬಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಪದ್ಮಜಾ ಸ್ವಾಗತಿಸಿದರು. ಹಿಂದಿ ಶಿಕ್ಷಕ ಜನಾರ್ದನ ನಾಯ್ಕ ನಿರೂಪಿಸಿ ಕನ್ನಡ ಶಿಕ್ಷಕ ಭರತ್ ವಂದಿಸಿದರು.
Next Story





