Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮೌನ ಪೋಷಿಸುವ ಉಗ್ರವಾದ

ಮೌನ ಪೋಷಿಸುವ ಉಗ್ರವಾದ

ವಾರ್ತಾಭಾರತಿವಾರ್ತಾಭಾರತಿ13 Jun 2016 11:27 PM IST
share
ಮೌನ ಪೋಷಿಸುವ ಉಗ್ರವಾದ

ಭಯೋತ್ಪಾದನೆಯ ಕುರಿತಂತೆ ದೇಶ ದ್ವಂದ್ವ ನೀತಿಯನ್ನು ಅನುಸರಿಸ ತೊಡಗಿದ್ದು ಇಂದು ನಿನ್ನೆಯಲ್ಲ. ಮಹಾತ್ಮಾಗಾಂಧೀಜಿಯನ್ನು ಕೊಲೆ ಮಾಡಿದ ಆರೋಪವನ್ನು ಹೊಂದಿರುವ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಯಾವಾಗ ನಮ್ಮ ಸರಕಾರ ಹಿಂದೆಗೆಯಿತೋ ಅಲ್ಲಿಂದಲೇ ನಮ್ಮ ದೇಶ ಭಯೋತ್ಪಾದನೆಯ ಬೀಜವನ್ನು ಈ ನೆಲದಲ್ಲಿ ಅಧಿಕೃತವಾಗಿ ಬಿತ್ತಿತ್ತು. ಅಂದು ಆರೆಸ್ಸೆಸ್‌ನಂತಹ ಕೇಸರಿ ಸಂಘಟನೆಗಳನ್ನು ಶಾಶ್ವತವಾಗಿ ನಿಷೇಧಿಸಿದ್ದಿದ್ದರೆ ಇಂದು ದೇಶದಲ್ಲಿ ಕೇಸರಿ ಭಯೋತ್ಪಾದನೆ ಈ ಪರಿಯಲ್ಲಿ ವಿಸ್ತರಿಸಿಕೊಳ್ಳುತ್ತಿರಲಿಲ್ಲ. 

ತಾವು ತೋರಿದ ಮೃದು ಹಿಂದುತ್ವದ ಫಲವನ್ನು ಸ್ವತಃ ಕಾಂಗ್ರೆಸ್ ಕೂಡ ಅನುಭವಿಸುವಂತಾಗಿದೆ. ತನ್ನ ಚಟುವಟಿಕೆಗಳನ್ನು ಸಾಂಸ್ಕೃತಿಕವಾಗಿ ಮಾತ್ರ ಸೀಮಿತಗೊಳಿಸುತ್ತೇವೆ ಎಂದು ಅಂದು ಗೃಹ ಸಚಿವ ವಲ್ಲಭಭಾಯಿ ಪಟೇಲರಿಗೆ ನೀಡಿದ ಭರವಸೆಯನ್ನು ಉಲ್ಲಂಘಿಸಿರುವ ಕೇಸರಿ ಸಂಘಟನೆಗಳು ಇಂದು ಬೇರೆ ಬೇರೆ ವೇಷಗಳಲ್ಲಿ, ಬೇರೆ ಬೇರೆ ರೂಪಗಳಲ್ಲಿ ದೇಶವನ್ನು ಮುಕ್ಕಿ ತಿನ್ನಲು ಹವಣಿಸುತ್ತಿವೆ. ಮತ್ತು ಜನಪರವಾಗಿ ಆಲೋಚಿಸುವ ಸಮಾಜ ಅದರ ಮುಂದೆ ಹತಾಶೆಯನ್ನು ವ್ಯಕ್ತಪಡಿಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂದು ಕೇಸರಿ ಸಂಘಟನೆಗಳು ಬಹಿರಂಗವಾಗಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದರೂ ಅದರ ವಿರುದ್ಧ ನಿಷೇಧವನ್ನು ಹೇರಲು ಸರಕಾರ ಹಿಂದೆ ಮುಂದೆ ನೋಡುವಂತಾಗಿದೆ. ಬಿಜೆಪಿ ಸರಕಾರ ಅಸ್ತಿತ್ವದಲ್ಲಿರುವ ಗೋವಾದಲ್ಲಿ ಪ್ರಮೋದ್ ಮುತಾಲಿಕ್‌ನಿಗೆ ನಿಷೇಧವನ್ನು ಹೇರಲಾಗಿದೆ. ಯಾಕೆಂದರೆ, ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆತನ ಕೈವಾಡಗಳಿರುವ ಕುರಿತಂತೆ ಅಲ್ಲಿನ ಪೊಲೀಸ್ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿದೆ. ಅದರ ಅನ್ವಯ, ಗೋವಾಕ್ಕೆ ಪ್ರಮೋದ್ ಮುತಾಲಿಕ್ ಕಾಲಿಡದಂತೆ ವ್ಯವಸ್ಥೆಯನ್ನು ಮಾಡಲಾಗಿದೆ.

 ಆದರೆ ಇದೇ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಮೋದ್ ಮುತಾಲಿಕ್ ಬಾಯಿಗೆ ಬಂದಂತೆ ಉಗ್ರವಾದಿ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾನೆ. ಇಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಆತನ ಮೇಲೆ ನಿಷೇಧ ಹೇರುವಂತಹ ಧೈರ್ಯವನ್ನು ತೋರಿಸಿಲ್ಲ. ‘ಶ್ರೀ ರಾಮಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ’’ ಕುರಿತಂತೆ ಬಹಿರಂಗವಾಗಿ ಮುತಾಲಿಕ್ ಹೇಳಿಕೆ ನೀಡಿದ್ದ. ಬಳಿಕ, ಶಸ್ತ್ರಾಸ್ತ್ರ ತರಬೇತಿಯ ಚಿತ್ರಗಳು ಮಾಧ್ಯಮಗಳಲ್ಲೂ ಪ್ರಕಟವಾಗಿದ್ದವು. ‘‘ಆತ್ಮಹತ್ಯಾ ದಳವನ್ನು ಸ್ಥಾಪಿಸುತ್ತೇನೆ’’ ಎಂದೂ ಹೇಳಿಕೆಗಳನ್ನು ನೀಡಿದ್ದ. ಇದಾದ ಬಳಿಕ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಸ್ಫೋಟ ನಡೆದು, ಅದರಲ್ಲಿ ಶ್ರೀರಾಮಸೇನೆಯಲ್ಲಿದ್ದ ಕಾರ್ಯಕರ್ತರ ಕೈವಾಡ ಬಹಿರಂಗವಾಯಿತು. ಜಂಬಗಿ ಮತ್ತು ಆತನ ಸಹಚರರು ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಬೆಳಕಿಗೆ ಬಂತು. ಜಂಬಗಿ ಈ ಮುತಾಲಿಕನ ಶಿಷ್ಯನಾಗಿದ್ದ ಎನ್ನುವುದು ಬಹಿರಂಗವಾಯಿತು. ಬಳಿಕ ಜಂಬಗಿ ಜೈಲಿನಲ್ಲಿ ನಿಗೂಢವಾಗಿ ಸಹಚರರಿಂದಲೇ ಕೊಲೆಯಾದ. ಇಷ್ಟೆಲ್ಲ ಆದ ಬಳಿಕವೂ ಪ್ರಮೋದ್ ಮುತಾಲಿಕ್‌ನನ್ನು ಬಂಧಿಸುವ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆತನಿಗೆ ಶಾಶ್ವತ ನಿಷೇಧ ಹೇರಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ಯಾಕೆ? ಯಾರ ಒತ್ತಡಕ್ಕೆ ಕಾಂಗ್ರೆಸ್ ಸರಕಾರ ಮಣಿಯುತ್ತಿದೆ?
  

ಇದು ಕೇವಲ ಶ್ರೀರಾಮಸೇನೆಗೆ ಸಂಬಂಧಿಸಿದ್ದಷ್ಟೇ ಅಲ್ಲ. ಮಾಲೆಗಾಂವ್, ಅಜ್ಮೀರ್, ಮಕ್ಕಾ ಸ್ಫೋಟಗಳ ಭಾಗಿಯಾಗಿರುವ ಕೇಸರಿ ಸಂಘಟನೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಇದೀಗ ಪ್ರಜ್ಞಾಸಿಂಗ್‌ಳಂತಹ ಉಗ್ರಳನ್ನು ಬಿಡುಗಡೆ ಮಾಡುವ ಮೂಲಕ, ಪರೋಕ್ಷವಾಗಿ ಈ ಉಗ್ರ ಚಟುವಟಿಕೆಗಳಿಗೆ ಧೈರ್ಯವನ್ನು ಸರಕಾರವೇ ತುಂಬುತ್ತಿದೆ. ತನಿಖಾ ಸಂಸ್ಥೆಗಳು ಅಪರಾಧದ ಕುರಿತಂತೆ ತನಿಖೆ ನಡೆಸುವ ಬದಲು ಅವರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಸ್ಫೋಟದಲ್ಲಿ ಭಾಗಿಯಾಗಿರುವ ಕೇಸರಿ ಉಗ್ರರ ಜೊತೆಗೆ ಆರೆಸ್ಸೆಸ್ ಮುಖಂಡನೊಬ್ಬನ ಹೆಸರೂ ಕೇಳಿ ಬಂದಿದೆ. ತನ್ನ ದೇಶದ ವಿರುದ್ಧ ಬಾಂಬಿಟ್ಟು ಸ್ಫೋಟಿಸುವುದು, ಎರಡು ದೇಶಗಳ ನಡುವೆ ಸ್ನೇಹವನ್ನು ಬೆಸೆಯುವ ರೈಲನ್ನು ಉಡಾಯಿಸಿ ನೂರಾರು ಜನರನ್ನು ಸಾಯಿಸುವುದು ದೇಶದ್ರೋಹ ಆಗಿದ್ದರೆ, ಅವರು ಒಳಗೊಂಡಿರುವ ಸಂಘಟನೆಗಳನ್ನು ನಿಷೇಧಿಸುವುದು ಅತ್ಯಗತ್ಯವಲ್ಲವೇ? ಇವರು ನಡೆಸುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳು ಈ ದೇಶದ ಪ್ರಜಾಸತ್ತೆಗೆ ಸವಾಲನ್ನು ಒಡ್ಡುತ್ತವೆ ಎಂದಾದ ಮೇಲೆ ಅದನ್ನು ನಿಷೇಧಿಸುವುದಕ್ಕೆ ಹಿಂಜರಿಕೆ ಯಾಕೆ? ಈ ಹಿಂಜರಿಕೆ ದೇಶವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎನ್ನುವುದು ನಮ್ಮ ನಾಯಕರಿಗೆ ಅರಿವಿಲ್ಲವೇ? ಅಥವಾ ನಮ್ಮ ನಾಯಕರೂ ಪರೋಕ್ಷವಾಗಿ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದು ಅರ್ಥವೇ? ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣವನ್ನು ತೆಗೆದುಕೊಳ್ಳೋಣ. ಇದೇ ಮೊದಲ ಬಾರಿಗೆ ಸನಾತನಸಂಸ್ಥೆಯ ಸದಸ್ಯನೆನ್ನಲಾದ ಕಾರ್ಯಕರ್ತನೊಬ್ಬನನ್ನು ಹತ್ಯೆಗೆ ಸಂಬಂಧಿಸಿ ಬಂಧಿಸಲಾಗಿದೆ. ದಾಭೋಲ್ಕರ್ ಹತ್ಯೆಯಲ್ಲಿ ಈತನ ನೇರ ಪಾತ್ರವಿದೆ ಎನ್ನುವುದನ್ನು ತನಿಖಾ ಮೂಲಗಳು ತಿಳಿಸುತ್ತಿವೆ. ಅಷ್ಟೇ ಅಲ್ಲ, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆಯಲ್ಲೂ ಈ ಸಂಘಟನೆಯ ಕೈವಾಡದ ಬಗ್ಗೆ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ. ದೇಶಾದ್ಯಂತ ನಡೆಯುತ್ತಿರುವ ಉಗ್ರ ಚಟುವಟಿಕೆಗಳಲ್ಲಿ ಈ ಸಂಘಟನೆ ಬೇರೆ ಬೇರೆ ರೀತಿಯಲ್ಲಿ ತನ್ನ ಕೊಡುಗೆಗಳನ್ನು ನೀಡುತ್ತಿದೆ ಎಂದೂ ಹೇಳಲಾಗುತ್ತಿದೆ. ಇಷ್ಟಾದರೂ ಈ ಸಂಘಟನೆಯನ್ನು ಈವರೆಗೆ ನಮ್ಮ ಸರಕಾರ ನಿಷೇಧಿಸಿಲ್ಲ.

 ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಒತ್ತಡ ಹೆಚ್ಚುತ್ತಿದೆ. ಇಂತಹ ಪ್ರಕರಣಗಳಲ್ಲಿ ಉಗ್ರ ಸಂಘಟನೆಗಳನ್ನು ನಿಷೇಧಿಸಲು ಜನರು ಬೀದಿಗಿಳಿದು ಒತ್ತಾಯಿಸುವಂತಹ ಸನ್ನಿವೇಶ ನಿರ್ಮಾಣವಾಗಿರುವುದು ಅತ್ಯಂತ ವಿಪರ್ಯಾಸ. ಅವುಗಳನ್ನು ನಿಷೇಧಿಸಲು ತನಿಖಾ ಸಂಸ್ಥೆಗಳು ನೀಡುವ ಶಿಫಾರಸು ಸಾಕು. ಆದರೆ ತನಿಖಾ ಸಂಸ್ಥೆಗಳೇ ಅಪರಾಧಿಗಳನ್ನು ನಿರಪರಾಧಿಗಳೆಂದು ಘೋಷಿಸಲು ಶ್ರಮಿಸುತ್ತಿರುವಾಗ, ಜನರು ಬೀದಿಗಿಳಿಯಲೇ ಬೇಕಾಗುತ್ತದೆ. ಇದೀಗ ಸನಾತನ ಸಂಸ್ಥೆಯ ವಿರುದ್ಧ ಜನರ ಆಕ್ರೋಶ ತೀವ್ರವಾಗುತ್ತಿದೆ. ಸರಕಾರದ ಬೇಜವಾಬ್ದಾರಿ, ನಿರ್ಲಕ್ಷ ಮತ್ತು ಉಗ್ರವಾದದ ಕುರಿತಂತೆ ತಳೆದ ದ್ವಂದ್ವ ಎಂತಹ ಅನಾಹುತಗಳಿಗೆ ಕಾರಣವಾಗಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶದ ಮಥುರಾ ನಮ್ಮ ಮುಂದಿದೆ. ಸನ್ಯಾಸಿಗಳ ವೇಷದಲ್ಲಿರುವ ಉಗ್ರವಾದಿಗಳು ಹಲವು ಎಕರೆ ಪ್ರದೇಶಗಳನ್ನು ವಶಪಡಿಸಿಕೊಂಡು, ಅಲ್ಲಿ ಪ್ರತ್ಯೇಕ ಸರಕಾರವೊಂದನ್ನು ರಚಿಸಲು ಹೊರಟಿರುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದು ಅಲ್ಲಿನ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ತಿಳಿದಿರಲಿಲ್ಲವೇ? ತಿಳಿದಿದ್ದೂ ಅದನ್ನು ಪೋಷಿಸಿದ ಫಲವಾಗಿ ಅಂತಿಮವಾಗಿ ದೇಶದ ಜನರೇ ಅದರ ಪರಿಣಾಮವನ್ನು ಅನುಭವಿಸಬೇಕಾಯಿತು. ಅವರನ್ನು ದಮನಿಸಲು ಬೃಹತ್ ಪೊಲೀಸ್ ದಂಡು ಯುದ್ಧಕ್ಕೇ ಇಳಿಯಬೇಕಾಯಿತು. ಹತ್ತು ಹಲವು ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನೇ ಅರ್ಪಿಸಬೇಕಾಯಿತು. ಇಷ್ಟಾದರೂ ಆ ಉಗ್ರರ ಬೇರು ಸಂಪೂರ್ಣ ನಾಶವಾಗಿದೆ ಎಂದು ಹೇಳುವಂತಿಲ್ಲ. 
ಇವರ ಪ್ರಭಾವ ದೇಶದ ಯಾವ ಯಾವ ಮೂಲೆಯಲ್ಲಿ ಹರಡಿದೆ ಎನ್ನುವುದನ್ನು ಗಂಭೀರ ತನಿಖೆಯಷ್ಟೇ ಬಯಲಿಗೆಳೆದೀತು. ವಿದೇಶದ ನೆಲದಲ್ಲಿ ನಿಂತು ಭಯೋತ್ಪಾದನೆಯ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡುವ ನರೇಂದ್ರ ಮೋದಿ ತನ್ನದೇ ನೆಲದಲ್ಲಿ ಬೀಡು ಬಿಟ್ಟಿರುವ ಉಗ್ರರ ಬಗ್ಗೆ ಮೊದಲು ಸ್ಪಷ್ಟ ನಿಲುವನ್ನು ತಳೆಯಬೇಕು. ಭಯೋತ್ಪಾದನೆಯ ಕುರಿತಂತೆ ದ್ವಂದ್ವ ನಿಲುವು ತಳೆದರೆ ಅದು ಪರೋಕ್ಷವಾಗಿ ಉಗ್ರರಿಗೆ ನೆರವನ್ನು ನೀಡುತ್ತದೆ. ವಿದೇಶಿ ಉಗ್ರರಿಗೂ ಅದು ಸಹಾಯವಾಗುತ್ತದೆ. ಆದುದರಿಂದ, ಸಾಂಸ್ಕೃತಿಕ ಮತ್ತು ಧಾರ್ಮಿಕ ವೇಷದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಉಗ್ರವಾದಿ ಸಂಘಟನೆಗಳನ್ನು ಮಟ್ಟ ಹಾಕುವ ಕುರಿತಂತೆ ಸರಕಾರ ಸ್ಪಷ್ಟ ನಿಲುವೊಂದನ್ನು ತಳೆಯುವುದು ಅತ್ಯಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X