ಯೋಗ ಜೀವನಧರ್ಮವಾಗಬೇಕು: ಬಲ್ಲಾಳ್

ಉಡುಪಿ, ಜೂ.13: ರೋಗ ಬಂದ ನಂತರ ಅಲ್ಲ, ಬಾರದೇ ಇರಲು ಯೋಗ ಮಾಡಬೇಕು. ಅನೇಕ ಮಂದಿ ತಮಗೆ ರೋಗ ಬಂದ ನಂತರ ಒಂದಷ್ಟು ಔಷಧಿಗಳನ್ನು ಮಾಡಿ ಗುಣ ಕಾಣದೇ ಇದ್ದಾಗ ಯೋಗಾಸನ, ಪ್ರಾಣಾಯಾಮಗಳಿಗೆ ಮೊರೆ ಹೋಗುತ್ತಾರೆ. ಆದರೆ ಯೋಗ ಅವಸರದ ವಿದ್ಯೆ ಅಲ್ಲ. ನಿರಂತರ ಸಾಧನೆ ಯಿಂದ ಮಾತ್ರ ಅದರ ಸತ್ಪರಿ ಣಾಮ ನಮಗೆ ದೊರೆಯುತ್ತದೆ ಎಂದು ಯೋಗ ಶಿಕ್ಷಕ ಎಂ.ಶ್ರೀನಿವಾಸ ಬಲ್ಲಾಳ್ ಹೇಳಿದ್ದಾರೆ.
ಪೆರಂಪಳ್ಳಿಯ ಶೀಂಬ್ರ ನವಚೈತನ್ಯ ಯುವಕ ಮಂಡಲದ ಆಶ್ರಯ ದಲ್ಲಿ ಶ್ರೀವಿಶ್ವಪ್ರಿಯ ತೀರ್ಥ ಬಯಲುರಂಗಮಂದಿರದಲ್ಲಿ ಆಯೋಜಿ ಸಲಾದ ಯೋಗ ಸಪ್ತಾಹವನ್ನು ಸೋಮ ವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.
ಸಂಘದ ಅಧ್ಯಕ್ಷ ಶಂಕರ ಕುಲಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ , ವಿಜಯ ಪೂಜಾರಿ, ಜಯ ಕುಮಾರ ಸಾಲ್ಯಾನ್, ವಾಸುದೇವ ಭಟ್, ಗಣಪತಿಭಟ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರವು ಜೂ.21ರವರೆಗೆ ಬೆಳಗ್ಗೆ ಮತ್ತು ಸಂಜೆ (ಮಹಿಳೆಯರಿಗಾಗಿ ಸಂಜೆ ಮಾತ್ರ) ನಡೆಯಲಿದೆ.
Next Story





