ಬೆಲ್ಜಿಯಂನ ವಿರುದ್ಧ 1-2 ಅಂತರದಿಂದ ಶರಣಾದೆ ಭಾರತ
ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ
ಲಂಡನ್, ಜೂ.13: ಶ್ರೀಜೇಶ್ ನೇತೃತ್ವದ ಭಾರತದ ಹಾಕಿ ತಂಡ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ 3ನೆ ಪಂದ್ಯದಲ್ಲಿ ಬೆಲ್ಜಿಯಂನ ವಿರುದ್ಧ 1-2 ಅಂತರದಿಂದ ಶರಣಾಗಿದೆ. ಗೋಲ್‌ಕೀಪರ್ ಶ್ರೀಜೇಶ್ ಎರಡು ಗೋಲುಗಳನ್ನು ಬಿಟ್ಟುಕೊಟ್ಟು ನಿರಾಸೆಗೊಳಿಸಿದರು.
ಅಲೆಕ್ಸಾಂಡರ್ ಹೆಂಡ್ರಿಕ್ಸ್ 25ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದರು. 5 ನಿಮಿಷದ ಬಳಿಕ ಭಾರತದ ದೇವೇಂದ್ರ ವಾಲ್ಮೀಕಿ ಗೋಲು ಬಾರಿಸಿ ಸ್ಕೋರನ್ನು ಸಮಬಲಗೊಳಿಸಿದರು. 44ನೆ ನಿಮಿಷದಲ್ಲಿ ಗೋಲು ಬಾರಿಸಿದ ಜೆರೊಮ್ ಟ್ರುಯೆನ್ಸ್ ಬೆಲ್ಜಿಯಂಗೆ ಗೆಲುವು ತಂದುಕೊಟ್ಟರು.
ಭಾರತ ಈ ಸೋಲಿನೊಂದಿಗೆ 3 ಪಂದ್ಯಗಳಲ್ಲಿ ನಾಲ್ಕಂಕವನ್ನು ಗಳಿಸಿದೆ. ಮಂಗಳವಾರ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. 3 ಪಂದ್ಯಗಳಲ್ಲಿ ಮೊದಲ ಜಯ ಸಾಧಿಸಿರುವ ಬೆಲ್ಜಿಯಂ ತಂಡ 4 ಅಂಕ ಗಳಿಸಿ ಭಾರತ ಹಾಗೂ ಬ್ರಿಟನ್‌ನ್ನು ಸೇರ್ಪಡೆಗೊಂಡಿದೆ.
Next Story





