ಇಟಲಿ ಕರಾವಳಿಯಲ್ಲಿ 2,500 ವಲಸಿಗರ ರಕ್ಷಣೆ
ರೋಮ್, ಜೂ. 13: ಕಳೆದ ವಾರಾಂತ್ಯದಲ್ಲಿ ಯುರೋಪ್ ತಲುಪುವುದಕ್ಕಾಗಿ ಹೊರಟಿದ್ದ 2,500ಕ್ಕೂ ಅಧಿಕ ವಲಸಿಗರನ್ನು 20 ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸಿಸಿಲಿ ಕರಾವಳಿಯಲ್ಲಿ ರಕ್ಷಿಸಲಾಗಿದೆ ಎಂದು ಇಟಲಿಯ ತಟರಕ್ಷಣಾ ಪಡೆ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಗಳಲ್ಲಿ ಇಟಲಿ ನೌಕಾಪಡೆ ಮತ್ತು ತಟರಕ್ಷಣಾ ಪಡೆಗಳ ನೌಕೆಗಳು ಹಾಗೂ ನೆರವು ಗುಂಪುಗಳ ಹಡಗುಗಳು ಭಾಗವಹಿಸಿದ್ದವು.
ವಲಸಿಗರ ದೋಣಿಗಳ ಪೈಕಿ ಒಂದರಿಂದ ಒಂದು ಮೃತದೇಹವನ್ನು ಪತ್ತೆಹಚ್ಚಿರುವುದಾಗಿ ವೈದ್ಯಕೀಯ ದತ್ತಿ ಸಂಸ್ಥೆ ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.
ಶನಿವಾರ 1,348 ಮತ್ತು ರವಿವಾರ 1,230 ವಲಸಿಗರನ್ನು ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
Next Story





