ಭಾರತದ ಪುರುಷರ ತಂಡದಿಂದ ರಾಷ್ಟ್ರೀಯ ದಾಖಲೆ
ಇಂಟರ್‌ನ್ಯಾಶನಲ್ ಸ್ಪ್ರಿಂಟ್ ಹಾಗೂ ರಿಲೇ ಟೀಮ್ ಕಪ್
ಟರ್ಕಿ, ಜೂ.13: ಇಲ್ಲಿ ರವಿವಾರ ನಡೆದ ಇಂಟರ್‌ನ್ಯಾಶನಲ್ ಸ್ಪ್ರಿಂಟ್ ಹಾಗೂ ರಿಲೇ ಟೀಮ್ ಕಪ್‌ನಲ್ಲಿ 3:02.17 ಸೆಕೆಂಡ್‌ನಲ್ಲಿ ಗುರಿ ತಲುಪಿದ ಭಾರತೀಯ ಪುರುಷರ 4+400 ಮೀ. ರಿಲೇ ತಂಡ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ.
ಭಾರತದ ಪುರುಷರ ತಂಡ 1998ರಲ್ಲಿ ಬ್ಯಾಂಕಾಂಗ್‌ನಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ದಾಖಲಾಗಿದ್ದ 3:02.62 ಸೆಕೆಂಡ್‌ಗಳ ದಾಖಲೆ ಮುರಿದರು.
ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತೀಯ ಮಹಿಳೆಯರ 4+400 ಮೀ. ರಿಲೇ ತಂಡ 3:30.16 ಸೆಕೆಂಡ್‌ನಲ್ಲಿ ಗುರಿ ತಲುಪುವುದರೊಂದಿಗೆ ವಿಶ್ವ ರ್ಯಾಂಕಿಂಗ್‌ನಲ್ಲಿ12ನೆ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ 2016ರ ಒಲಿಂಪಿಕ್ ಗೇಮ್ಸ್‌ನ ಅರ್ಹತಾ ಸುತ್ತಿನಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ.
Next Story





