ಪಾಕ್: ‘ಗೌರವ ಹತ್ಯೆ’ಯ ವಿರುದ್ಧ ಫತ್ವಾ ಹೊರಡಿಸಿದ ಧಾರ್ಮಿಕ ನಾಯಕರು
ಲಾಹೋರ್, ಜೂ. 13: ಕುಟುಂಬ ಸದಸ್ಯರೇ ನಡೆಸುವ ‘‘ಗೌರವ ಹತ್ಯೆ’’ ಎಂಬ ಕೊಲೆ ಇಸ್ಲಾಮ್‌ನ ಬೋಧನೆಗೆ ವಿರುದ್ಧವಾಗಿದೆ ಹಾಗೂ ಇಂತಹ ಕೃತ್ಯವನ್ನು ಮಾಡುವವರು ಧರ್ಮ ವಿರೋಧಿಗಳಾಗುತ್ತಾರೆ ಎಂದು ಪಾಕಿಸ್ತಾನಿ ಧಾರ್ಮಿಕ ನಾಯಕರ ಗುಂಪೊಂದು ಫತ್ವಾ ಹೊರಡಿಸಿದೆ.
100ಕ್ಕೂ ಅಧಿಕ ಪ್ರಮುಖ ಧಾರ್ಮಿಕ ನಾಯಕರ ಒಕ್ಕೂಟವಾಗಿರುವ ಸುನ್ನಿ ಇತ್ತೆಹಾದ್ ಕೌನ್ಸಿಲ್ ಈ ಫತ್ವಾ ಹೊರಡಿಸಿದೆ.
ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವವರನ್ನು ‘ಗೌರವ ಹತ್ಯೆ’ಯ ಹೆಸರಿನಲ್ಲಿ ಕುಟುಂಬ ಸದಸ್ಯರೇ ಕೊಂದ ಹಲವು ಘಟನೆಗಳು ನಡೆದಿರುವುದನ್ನು ಸ್ಮರಿಸಬಹುದಾಗಿದೆ.
‘‘ನಾವು ಅನಾಗರಿಕತೆಯ ಕಾಲದತ್ತ ಸಾಗುತ್ತಿರುವಂತೆ ಅನಿಸುತ್ತಿದೆ’’ ಎಂದು ರವಿವಾರ ಹೊರಡಿಸಿದ ಫತ್ವಾದಲ್ಲಿ ಕೌನ್ಸಿಲ್ ಹೇಳಿದೆ.
Next Story





